ಚಿಲಿ ದೇಶದ ಸಂಶೋಧನಾ ಕೇಂದ್ರದ 36 ಸಿಬ್ಬಂದಿಗೆ ಸೋಂಕು| ಬಹುತೇಕ ಸಂಶೋಧನಾ ಕೇಂದ್ರಗಳು ತಾತ್ಕಾಲಿಕವಾಗಿ ಬಂದ್| ಅಂಟಾರ್ಟಿಕಾಕ್ಕೂ ಕೊರೋನಾ ಎಂಟ್ರಿ: ಈಗ ಕೊರೋನಾ ವಿಶ್ವವ್ಯಾಪಿ!
ನವದೆಹಲಿ(ಡಿ.23): ಕಳೆದೊಂದು ವರ್ಷದ ಅವಧಿಯಲ್ಲಿ 6 ಖಂಡಗಳ 210ಕ್ಕೂ ಹೆಚ್ಚು ದೇಶಗಳಿಗೆ ಹಬ್ಬಿದ್ದರೂ ತಾನು ಮಾತ್ರ ಬಚಾವ್ ಆಗಿದ್ದ ಅಂಟಾರ್ಟಿಕಾ ಖಂಡಕ್ಕೂ ಇದೀಗ ಕೊರೋನಾ ಸೋಂಕು ವ್ಯಾಪಿಸಿದೆ.
ಅಂಟಾರ್ಟಿಕಾದಲ್ಲಿನ ಚಿಲಿ ದೇಶದ ಸಂಶೋಧನಾ ಕೇಂದ್ರದ 36 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಚಿಲಿಗೆ ರವಾನಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇದರೊಂದಿಗೆ ವಿಶ್ವದ ಎಲ್ಲ 7 ಖಂಡಗಳಿಗೂ ಸೋಂಕು ಹಬ್ಬಿದಂತೆ ಆಗಿದೆ.
ಅತ್ಯಂತ ಶೀತ ವಾತಾವರಣ ಇರುವ ಅಂಟಾರ್ಟಿಕಾದಲ್ಲಿ ಜನವಸತಿ ಇಲ್ಲ. ಅಲ್ಲಿ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ತಮ್ಮ ತಮ್ಮ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿಕೊಂಡಿವೆ. ಅಲ್ಲಿ ವಿವಿಧ ಸಮಯದಲ್ಲಿ ಕನಿಷ್ಠ 1000 ರಿಂದ ಗರಿಷ್ಠ 5000 ಜನ ವಾಸವಿರುತ್ತಾರೆ.
ವಿಶ್ವದಲ್ಲಿಯೇ ಅತ್ಯಂತ ದುರ್ಗಮ ಪ್ರದೇಶದಲ್ಲಿ ಸಂಶೋಧನೆ ಮತ್ತು ಸೇನಾ ಕೇಂದ್ರಗಳು ಇರುವ ಅಂಟಾರ್ಟಿಕಕ್ಕೆ ವೈರಸ್ ಕಾಲಿಡದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೂ, ಅದು ಹೇಗೆ ವೈರಸ್ ಅಲ್ಲಿಗೂ ಹೋಯಿತೋ ಗೊತ್ತಿಲ್ಲ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 23, 2020, 11:41 AM IST