ನವದೆಹಲಿ(ಮೇ.21) 2019ರ ನವೆಂಬರ್‌ನಲ್ಲಿ ಚೀನಾದಲ್ಲಿ ಕಾಣಿಸಿಕೊಂಡು ನಂತರದ 6 ತಿಂಗಳಲ್ಲಿ ವಿಶ್ವವ್ಯಾಪಿಯಾಗಿರುವ ಕೊರೋನಾ ಸೋಂಕಿತರ ಸಂಖ್ಯೆ ಬುಧವಾರ 50 ಲಕ್ಷದ ಗಡಿ ದಾಟಿದೆ. ವಿಶ್ವದ 214 ದೇಶಗಳು ಮತ್ತು ಅವುಗಳ ಪ್ರಾಂತ್ಯಗಳಿಗೆ ಹಬ್ಬಿರುವ ಈ ಮಾರಕ ವೈರಸ್‌ ಇದೀಗ 50.08 ಲಕ್ಷ ಜನರಿಗೆ ಹಬ್ಬಿದ್ದು, 3.26 ಲಕ್ಷ ಜನರನ್ನು ಬಲಿ ಪಡೆದಿದೆ. ಜೊತೆಜೊತೆಗೇ 20 ಲಕ್ಷ ಜನರು ಈವರೆಗೆ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಚೀನಾದಲ್ಲಿ ಮೊದಲು ಕಾಣಿಸಿಕೊಂಡರೂ ಅದನ್ನು ಕಠಿಣ ಕ್ರಮಗಳಿಂದ ಕಮ್ಯುನಿಸ್ಟ್‌ ದೇಶ ಸಂಪೂರ್ಣವಾಗಿ ನಿಯಂತ್ರಿಸಿತು. ಆದರೆ ಸೋಂಕಿನ ವಿಷಯವನ್ನು ಅದು ಬಹಿರಂಗಪಡಿಸುವಲ್ಲಿ ಮಾಡಿದ ಎಡವಟ್ಟಿನ ಪರಿಣಾಮ ಅದು ಗುಪ್ತಗಾಮಿನಿಯಾಗಿ ವಿಶ್ವದಾದ್ಯಂತ ಹಬ್ಬಿತ್ತು. ಹೀಗಾಗಿ 2020ರ ಜನವರಿ ಬಳಿಕ ವೈರಸ್‌ ಯುರೋಪ್‌, ಏಷ್ಯಾ, ಉತ್ತರ ಮತ್ತು ದಕ್ಷಿಣ ಅಮೆರಿಕ ದೇಶಗಳಲ್ಲಿ ವ್ಯಾಪಕಗೊಂಡಿತು. ಜನರಿಗೆ ವಿಷಯ ಅರಿವಾಗುವುದರೊಳಗೆ ಸೋಂಕು ಲಕ್ಷಾಂತರ ಜನರಿಗೆ ವ್ಯಾಪಿಸಿ, ಭಾರೀ ಪ್ರಮಾಣದಲ್ಲಿ ಜನರನ್ನು ಬಲಿ ಪಡೆಯಿತು.

ಮುಂಬೈಯಿಂದ ಬಂದ ವೃದ್ಧ, ಮಗು ಸೇರಿ 6 ಮಂದಿಗೆ ಪಾಸಿಟಿವ್‌

ಯುರೋಪ್‌ಗೆ ಭರ್ಜರಿ ಏಟು:

ವಿಶ್ವದಲ್ಲಿ ಅತಿ ಹೆಚ್ಚು ಕೊರೋನಾದಿಂದ ಪೆಟ್ಟು ತಿಂದಿದ್ದು ಯುರೋಪ್‌ ದೇಶಗಳು. ಒಟ್ಟು 50 ಲಕ್ಷ ಸೋಂಕಿತರು ಮತ್ತು 3.20 ಲಕ್ಷ ಸಾವಿನ ಪೈಕಿ ಯುರೋಪ್‌ ದೇಶಗಳ ಪಾಲೇ ಅಧಿಕ. ಯುರೋಪ್‌ ದೇಶಗಳಲ್ಲಿ 18.24 ಲಕ್ಷ ಸೋಂಕಿತರಿದ್ದರೆ, 1.64 ಲಕ್ಷ ಜನ ಬಲಿಯಾಗಿದ್ದಾರೆ. ಇನ್ನು ಏಷ್ಯಾ ದೇಶಗಳಲ್ಲಿ 8.60 ಲಕ್ಷ ಸೋಂಕಿತರು, 250000 ಸಾವು, ಉತ್ತರ ಮತ್ತು ದಕ್ಷಿಣ ಅಮೆರಿಕ ದೇಶಗಳಲ್ಲಿ 22 ಲಕ್ಷ ಸೋಂಕಿತರು, 1.25 ಲಕ್ಷ ಸಾವು ದಾಖಲಾಗಿದೆ.

ಟಾಪ್‌ 5 ದೇಶಗಳು: ವಿಶ್ವದಲ್ಲಿ ಅತಿ ಹೆಚ್ಚು ಸೋಂಕು ದಾಖಲಾದ ದೇಶಗಳೆಂದರೆ ಅಮೆರಿಕ (15 ಲಕ್ಷ ಸೋಂಕು, 94000 ಸಾವು), ರಷ್ಯಾ (3 ಲಕ್ಷ ಸೋಂಕು, 2972 ಸಾವು), ಸ್ಪೇನ್‌ (2.80 ಲಕ್ಷ ಸೋಂಕು, 27000 ಸಾವು,), ಬ್ರೆಜಿಲ್‌ (2.75 ಲಕ್ಷ ಸೋಂಕು, 3202 ಸಾವು), ಬ್ರಿಟನ್‌ (2.48 ಲಕ್ಷ ಸೋಂಕು, 35,341 ಸಾವು).

ಬಸ್ಸು, ಟ್ರೇನು ಆಯ್ತು..ವಿಮಾನ ಹಾರಾಟಕ್ಕೂ ದಿನಾಂಕ ಫಿಕ್ಸ್!

ವಿಶ್ವದಲ್ಲಿ 3.25 ಲಕ್ಷ ಬಲಿ

2019 ನ.17: ಮೊದಲ ಪ್ರಕರಣ

2020 ಜ.24: 1000ನೇ ಕೇಸು

2020 ಜ.31: 10000ನೇ ಕೇಸು

2020 ಫೆ.12: 50000ನೇ ಕೇಸು

2020 ಮೇ 6: 1 ಲಕ್ಷ ಕೇಸು

2020 ಏ.2: 10 ಲಕ್ಷ ಕೇಸು

2020 ಮೇ 20: 50 ಲಕ್ಷ ಕೇಸು