ಬಸ್ಸು, ಟ್ರೇನು ಆಯ್ತು..ವಿಮಾನ ಹಾರಾಟಕ್ಕೂ ದಿನಾಂಕ ಫಿಕ್ಸ್!
ಲಾಕ್ ಡೌನ್ ಸಡಿಲಿಕೆ/ ದೇಶಿಯ ವಿಮಾನ ಹಾರಾಟ ಯಾವಾಗ ಆರಂಭ/ ಇದಕ್ಕೂ ಸಿಕ್ಕಿತು ಉತ್ತರ/ ಮೇ 25 ರಂದ ಡೊಮೆಸ್ಟಿಕ್ ವಿಮಾನ ಸೇವೆ ಆರಂಭ
ನವದೆಹಲಿ(ಮೇ 20) ದೇಶಿಯ ವಿಮಾನ ಹಾರಾಟ ಯಾವಾಗಿನಿಂದ ಶುರು ಎಂಬ ಪ್ರಶ್ನೆಗೂ ಉತ್ತೆ ಸಿಕ್ಕಿದೆ. ಇನ್ನೊಂದು ನಾಲ್ಕು ದಿನದ ನಂತರ ವಿಮಾನ ಸೇವೆಗಳು ಆರಂಭವಾಗಲಿವೆ.
ದೇಶಿಯ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಮೇ 25 ರಿಂದ ಹಂತ ಹಂತವಾಗಿ ವಿಮಾನ ಸೇವೆಗಳು ಆರಂಭಗೊಳ್ಳಲಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ತಿಳಿಸಿದ್ದಾರೆ.
ಜೂನ್ 1 ರಿಂದ ರೈಲು ಸೇವೆ ಆರಂಭ, ಟಿಕೆಟ್ ಬುಕಿಂಗ್ ಹೇಗೆ?
ಈ ಸಂಬಂಧ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳಿಗೆ ಮಾಹಿತಿ ರವಾನಿಸಲಾಗಿದೆ. ಕೊರೋನಾ ಕಾರಣಕ್ಕೆ ಮಾರ್ಚ್ 25 ರಿಂದ ಎಲ್ಲ ದೇಶಿಯ ಹಾಗೂ ಅಂತರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿತ್ತು. ಲಾಕ್ ಡೌನ್ ಅವಧಿಯಲ್ಲಿ ಸರಕು ಸಾಗಾಣಿಕೆ, ಕೆಲ ವಿಶೇಷ ಸೇವೆಗಳ ವಿಮಾನಗಳ ಹಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ವಿಮಾನ ನಿಲ್ದಾಣಗಳು ಮತ್ತು ಅದಕ್ಕೆ ಸಂಬಂಧಿಸಿದ ಪೂರಕ ವ್ಯವಸ್ಥೆಗಳು ಸಿದ್ಧವಾಗಿರಲು ತಿಳಿಸಲಾಗಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ದೇಶಿಯ ವಿಮಾನ ಸೇವೆ ಆರಂಭಗೊಳ್ಳುತ್ತಿದ್ದು ಯಾವ ರೀತಿ ಸಾಮಾಜಿಕ ಅಂತರ ನಿಯಮ ಪಾಲನೆ ಮಾಡಲಾಗುವುದು? ಪ್ರಯಾಣಿಕರಿಗೆ ವ್ಯವಸ್ಥೆ ಹೇಗೆ? ಟಿಕೆಟ್ ಬುಕಿಂಗ್ ಹೇಗೆ ಎಂಬೆಲ್ಲದರ ಮಾಹಿತಿಯನ್ನು ಕೇಂದ್ರ ನೀಡಬೇಕಾಗಿದೆ.