ನವದೆಹಲಿ(ಏ.07): ಚೀನಾದಲ್ಲಿ ಮೊದಲು ಪತ್ತೆಯಾಗಿ ನಂತರದ ದಿನಗಳಲ್ಲಿ ಯುರೋಪ್‌ ದೇಶಗಳನ್ನೇ ಕೇಂದ್ರ ಸ್ಥಾನವಾಗಿ ಮಾಡಿಕೊಂಡ ಕೊರೋನಾ ಸೋಂಕು ಇದೀಗ 13 ಲಕ್ಷಕ್ಕೂ ಹೆಚ್ಚು ಜನರಿಗೆ ವ್ಯಾಪಿಸಿದ್ದು, 72000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಅದರಲ್ಲೂ ಕಳೆದೊಂದು ತಿಂಗಳ ಅವಧಿಯಲ್ಲಿ ಸೋಂಕು ವಿಶ್ವವ್ಯಾಪಿಯಾದ ರೀತಿ ಮತ್ತು ಹಬ್ಬಿದ ಪರಿ ಎಲ್ಲರನ್ನೂ ಆತಂಕಕ್ಕೆ ಗುರಿ ಮಾಡಿದೆ.

ಪ್ರಸಕ್ತ ವಿಶ್ವದ 210 ದೇಶಗಳಲ್ಲಿ ಹಬ್ಬಿರುವ ಕೊರೋನಾ ಸರಿಯಾಗಿ ಒಂದು ತಿಂಗಳ ಹಿಂದೆ ಅಂದರೆ ಮಾ.6ರಂದು ಮೊದಲ ಬಾರಿಗೆ 1 ಲಕ್ಷದ ಗಡಿ ದಾಟಿತ್ತು. ಆದರೆ ಏ.6ರಂದು ಸೋಂಕು 13 ಲಕ್ಷ ಜನರಿಗೆ ತಗುಲಿದೆ. ಅಂದರೆ ಒಂದೇ ತಿಂಗಳಲ್ಲಿ 12 ಲಕ್ಷ ಜನರಿಗೆ ವ್ಯಾಪಿಸಿದೆ. ಇನ್ನು ಜ.22ಕ್ಕೆ ಮೊದಲ ಸಾವು ಸಂಭವಿಸಿದ್ದರೆ, ಫೆ.10ರಂದು ಮೊದಲ ಬಾರಿಗೆ ಸಾವಿನ ಸಂಖ್ಯೆ 1000ದ ಗಡಿದಾಟಿತ್ತು. ಅದಾದ ಕೇವಲ 2 ತಿಂಗಳ ಅವಧಿಯಲ್ಲಿ ಸಾವಿನ ಸಂಖ್ಯೆ 75000 ತಲುಪಿದೆ.

ಬ್ರಿಟನ್​​ ಪ್ರಧಾನಿ ಆರೋಗ್ಯ ಸ್ಥಿತಿ ಗಂಭೀರ, ಐಸಿಯುಗೆ ಶಿಫ್ಟ್​!

1 ಲಕ್ಷ ಸೋಂಕಿತರು: 4ನೇ ದೇಶ ಜರ್ಮನಿ

ಬರ್ಲಿನ್‌: ಯುರೋಪಿಯನ್‌ ದೇಶಗಳ ಪೈಕಿ ಒಂದಾದ ಜರ್ಮನಿಯಲ್ಲಿ ಕೂಡಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದೆ. ಈ ಮೂಲಕ ಅತಿಹೆಚ್ಚು ಸೋಂಕಿತರು ಇರುವ ದೇಶಗಳ ಪೈಕಿ 4ನೇ ಸ್ಥಾನಕ್ಕೆ ಏರಿದೆ. ಆದರೆ 1 ಲಕ್ಷಕ್ಕಿಂತ ಹೆಚ್ಚಿನ ಸೋಂಕಿತರು ಇರುವ ದೇಶಗಳಲ್ಲಿನ ಸಾವಿನ ಸಂಖ್ಯೆಗೆ ಹೋಲಿಸಿದರೆ ಜರ್ಮನಿಯಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ ಎಂಬುದೇ ಸಮಾಧಾನದ ಸಂಗತಿ. ಹಾಲಿ ಜರ್ಮನಿಯಲ್ಲಿ ಒಟ್ಟು ಸಾವಿನ ಸಂಖ್ಯೆ 1600 ಇದೆ.

ಟಾಪ್‌ 5 ಸೋಂಕಿತ ದೇಶಗಳು ಮತ್ತು ಸಾವು

ದೇಶ- ಸೋಂಕಿತರು- ಸಾವು

ಅಮೆರಿಕ- 3.36 ಲಕ್ಷ- 9620

ಸ್ಪೇನ್‌- 1.35 ಲಕ್ಷ- 13055

ಇಟಲಿ- 1.28 ಲಕ್ಷ- 15887

ಜರ್ಮನಿ- 1.00 ಲಕ್ಷ- 1590

ಫ್ರಾನ್ಸ್‌- 92839- 8078

ವೈದ್ಯರು, ನರ್ಸ್‌ಗೇ ವೈರಸ್‌: ಮುಂಬೈ 2 ಆಸ್ಪತ್ರೆಗೆ ಬೀಗ!

210: ಸೋಂಕು ತಗುಲಿರುವ ದೇಶಗಳ ಸಂಖ್ಯೆ

154: ಸಾವು ಸಂಭವಿಸಿದ ದೇಶಗಳ ಸಂಖ್ಯೆ

ಮಾ.6: ಮೊದಲ ಬಾರಿ 1 ಲಕ್ಷ ತಲುಪಿದ್ದ ಸೋಂಕಿತರ ಸಂಖ್ಯೆ

ಏ.6: 200ಕ್ಕೂ ಅಧಿಕ ದೇಶದಲ್ಲಿ 13 ಲಕ್ಷ ಸೋಂಕಿತರು ಪತ್ತೆ

"