ವೈದ್ಯರು, ನರ್ಸ್‌ಗೇ ವೈರಸ್‌: ಮುಂಬೈ 2 ಆಸ್ಪತ್ರೆಗೆ ಬೀಗ!| 3 ವೈದ್ಯರು, 27 ದಾದಿಯರಿಗೆ ಕೊರೋನಾ

ಮುಂಬೈ(ಏ.07): ಕೊರೋನಾ ಚಿಕಿತ್ಸೆ ನೀಡುತ್ತಿದ್ದ ಮೂವರು ವೈದ್ಯರು ಹಾಗೂ ಬರೋಬ್ಬರಿ 27 ನರ್ಸ್‌ಗಳಿಗೇ ವೈರಸ್‌ ಸೋಂಕು ಖಚಿತಪಟ್ಟಹಿನ್ನೆಲೆಯಲ್ಲಿ ಮುಂಬೈ ಎರಡು ಆಸ್ಪತ್ರೆಗಳನ್ನು ಬಂದ್‌ ಮಾಡಿಸಲಾಗಿದೆ. ಈ ಆಸ್ಪತ್ರೆಗಳಿಗೆ ಯಾರೂ ಪ್ರವೇಶಿಸಕೂಡದು, ಹಾಗೆಯೇ ಒಳಗಿರುವವರೂ ಹೊರಗೆ ಬರಬಾರದು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ.

ಉಡುಪಿ, ದಕ್ಷಿಣ ಕನ್ನಡಕ್ಕೆ ಅಬಕಾರಿ ಇಲಾಖೆಯಿಂದ ಸ್ಯಾನಿಟೈಸರ್‌

ಕೇಂದ್ರ ಮುಂಬೈನ ವೊಕಾಡ್‌್ರ್ಟ ಆಸ್ಪತ್ರೆಯಲ್ಲಿ ಮೂವರು ವೈದ್ಯರು ಹಾಗೂ 26 ನರ್ಸ್‌ಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಆಸ್ಪತ್ರೆಯಲ್ಲಿ ಕೇರಳದ 40 ಹಲವು ನರ್ಸ್‌ಗಳಿದ್ದಾರೆ. ಕೊರೋನಾ ವಿಷಯ ತಿಳಿಯುತ್ತಿದ್ದಂತೆ ಕ್ರಮ ಕೈಗೊಳ್ಳುವಂತೆ ಕೇರಳ ಕಾಂಗ್ರೆಸ್‌ ನಾಯಕ ರಮೇಶ್‌ ಚೆನ್ನಿತ್ತಲ ಟ್ವೀಟ್‌ ಮಾಡಿದ್ದರು. ಅದರ ಬೆನ್ನಲ್ಲೇ ಆಸ್ಪತ್ರೆಯನ್ನು ಮುಚ್ಚಿಸಲಾಗಿದೆ.

ಮತ್ತೊಂದೆಡೆ, ಮುಂಬೈನ ಜಸ್‌ಲೋಕ್‌ ಆಸ್ಪತ್ರೆಯಲ್ಲೂ ನರ್ಸ್‌ಗೆ ಸೋಂಕು ಖಚಿತಪಟ್ಟಹಿನ್ನೆಲೆಯಲ್ಲೂ ಆ ಆಸ್ಪತ್ರೆಯನ್ನೂ ಕೆಲ ದಿನಗಳ ಕಾಲ ಬಂದ್‌ ಮಾಡಿಸಲಾಗಿದೆ.