ಕೊರೋನಾ ಸಾವು 1,00,000ಕ್ಕೇರಿಕೆ!| ಕೇವಲ 101 ದಿನದಲ್ಲಿ ಜಗತ್ತಿನ ಲಕ್ಷ ಮಂದಿ ಬಲಿ ಪಡೆದ ಮಾರಕ ವೈರಾಣು| 210 ದೇಶಗಳಲ್ಲಿ ವೈರಸ್‌ ಅಟ್ಟಹಾಸ

ನವದೆಹಲಿ: ಮಾರಕ ಕೊರೋನಾ ವೈರಸ್‌ ಅಟ್ಟಹಾಸ ವಿಶ್ವದಲ್ಲಿ ಮುಂದುವರಿದಿದ್ದು, ಈವರೆಗೆ ಈ ವ್ಯಾಧಿಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 1 ಲಕ್ಷದ ಗಡಿ ದಾಟಿದೆ.
"

ಚೀನಾದ ವುಹಾನ್‌ನಲ್ಲಿ ಮೊದಲ ಕಾಣಿಸಿಕೊಂಡ ಈ ವೈರಸ್‌ ಜಗತ್ತಿಗೆ ವ್ಯಾಪಿಸಿ ಶುಕ್ರವಾರಕ್ಕೆ 101 ದಿನ. ಇಷ್ಟುಕಡಿಮೆ ಅವಧಿಯಲ್ಲಿ ಲಕ್ಷ ಮಂದಿಯ ಜೀವ ತೆಗೆದಿರುವ ವೈರಸ್‌ ಇನ್ನಷ್ಟುಜನರನ್ನು ಕೊಲ್ಲುವುದು ಖಚಿತವಾಗಿದೆ. ಏಕೆಂದರೆ, ಚೇತರಿಸಿಕೊಂಡವರನ್ನು ಹೊರತುಪಡಿಸಿದರೆ ಇನ್ನೂ 12 ಲಕ್ಷ ಮಂದಿಯ ಈ ವೈರಸ್‌ ವಿರುದ್ಧ ಸೆಣಸಾಡುತ್ತಿದ್ದಾರೆ.

ದೇಶದಲ್ಲಿ 7500ರ ಗಡಿ ದಾಟಿದ ವೈರಸ್‌!

ಒಟ್ಟು 16 ಲಕ್ಷ ಮಂದಿಗೆ ಸೋಂಕು ತಗುಲಿದೆ. ಶುಕ್ರವಾರ ಒಂದೇ ದಿನ 35 ಸಾವಿರಕ್ಕೂ ಅಧಿಕ ಮಂದಿಯ್ಲಿ ವೈರಸ್‌ ದೃಢಪಟ್ಟಿದೆ. ಒಂದೇ ದಿನ 4500 ಮಂದಿ ಮೃತಪಟ್ಟಿದ್ದಾರೆ.

ಟಾಪ್‌ ಕೊರೋನಾ ದೇಶಗಳು