ಕೊರೋನಾ ಭೀತಿ: ಭಾರತದ ಎಲ್ಲಾ ವೀಸಾ ಅಮಾನತು!

ಭಾರತದ ಎಲ್ಲ ವೀಸಾ ಅಮಾನತು| ಕೊರೋನಾ: ಏ.15ರವರೆಗೆ ವೀಸಾ ಅಮಾನತು| ಸರ್ಕಾರದಿಂದ ಹೊಸ ಕಠಿಣ ಪ್ರಯಾಣ ನಿಯಮ

Coronavirus Fear India cancels all visas till April 15

ನವದೆಹಲಿ[ಮಾ.12]: ಕೊರೋನಾ ವೈರಸ್‌ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಹೊಸ ಪ್ರವಾಸಿ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ರಾಜತಾಂತ್ರಿಕ, ಸರ್ಕಾರಿ, ವಿಶ್ವಸಂಸ್ಥೆ/ಅಂತಾರಾಷ್ಟ್ರೀಯ ಸಂಸ್ಥೆಗಳು, ಯೋಜನಾ ವೀಸಾ ಹೊರತುಪಡಿಸಿ ಮಿಕ್ಕೆಲ್ಲ ವೀಸಾಗಳನ್ನು ಏಪ್ರಿಲ್‌ 15ರವರೆಗೆ ಅಮಾನತುಗೊಳಿಸಿದೆ. ಮಾಚ್‌ರ್‍ 13ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.

ನಿಯಮಗಳು:

* ಸಾಗರೋತ್ತರ ಭಾರತೀಯರ ವೀಸಾ ಮುಕ್ತ ಪ್ರವಾಸ ಸವಲತ್ತನ್ನು ಏ.15ರವರೆಗೆ ತಡೆಹಿಡಿಯಲಾಗಿದೆ.

* ಅನಿವಾರ್ಯ ಕಾರಣಗಳಿಗೆ ಭಾರತಕ್ಕೆ ಭೇಟಿ ನೀಡಬೇಕು ಎನ್ನುವ ವಿದೇಶೀಯರು ಸಮೀಪದ ಭಾರತೀಯ ದೂತಾವಾಸ ಸಂಪರ್ಕಿಸಬೇಕು.

* ಚೀನಾ, ಇಟಲಿ, ಇರಾನ್‌, ಕೊರಿಯಾ, ಫ್ರಾನ್ಸ್‌, ಸ್ಪೇನ್‌ ಹಾಗೂ ಜರ್ಮನಿಯಿಂದ ಬರುವ ಎಲ್ಲ ಪ್ರವಾಸಿಗರನ್ನು ಕಡ್ಡಾಯವಾಗಿ ಪ್ರತ್ಯೇಕವಾಗಿ ಇರಿಸಿ 14 ದಿನ ತಪಾಸಣೆಗೆ ಒಳಪಡಿಸಲಾಗುವುದು.

* ಭಾರತೀಯರು ಹಾಗೂ ವಿದೇಶೀಯರು ಅಗತ್ಯವಿಲ್ಲದೇ ಹೋದರೆ ಭಾರತಕ್ಕೆ ಪ್ರವಾಸ ರದ್ದುಗೊಳಿಸಬೇಕು.

ಪ್ರವಾಸಿಗಳಿಗೆ ಸೂಚನೆ: ಕೊರೋನಾ ಹಿನ್ನೆಲೆ ಈ ಪ್ರದೇಶಕ್ಕೆ ಭೇಟಿ ಬೇಡ

* ಅನಿವಾರ್ಯವಲ್ಲದ ವಿದೇಶ ಯಾತ್ರೆಗಳನ್ನು ಭಾರತೀಯರು ರದ್ದುಗೊಳಿಸಬೇಕು.

* ದೇಶದ ಗಡಿಗಳಲ್ಲಿ ಚೆಕ್‌ಪೋಸ್ಟ್‌ನಲ್ಲಿ ಸಂಚಾರ ನಿರ್ಬಂಧಿಸಲಾಗುವುದು.

* ಇಟಲಿಯಿಂದ ಬಂದವರನ್ನು ಪ್ರತ್ಯೇಕವಾಗಿರಿಸಿ 14 ದಿನ ತಪಾಸಣೆ ಮಾಡಿ ನಂತರ ಊರಿಗೆ ತೆರಳಲು ಬಿಡಲಾಗುವುದು.

 

ಮಾರ್ಚ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios