ವುಹಾನ್[ಫೆ.02]: ಚೀನಾದಲ್ಲಿ ಕೊರೋನಾ ವೈರಸ್ ಭೀತಿ ಎಲ್ಲೆಡೆ ಆತಂಕ ಸೃಷ್ಟಿಸಿದೆ. ಈವರೆಗೆ ಈ ಡೇಂಜರಸ್ ವೈರಸ್ ಗೆ 300ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಜನರ ಮನದೆಲ್ಲಿ ಒಂದು ಬಗೆಯ ಭೀತಿ ಆವರಿಸಿದೆ. ಇಂತಹ ಬಿಗುವಿನ ವಾತಾವರಣ ನಿರ್ಮಾಣವಾದ ಬೆನ್ನಲ್ಲೇ ಚೀನಾದಲ್ಲಿ ತಮ್ಮ ಮನೆಯಲ್ಲೇ ಕೈದಿಗಳಂತಿರುವ ಜನರು ಮನೆಯೊಳಗಿರುವ ಮೂಕ ಪ್ರಾಣಿಗಳನ್ನು ಹೊರಗೆಸೆಯಲಾರಂಭಿಸಿದ್ದಾರೆ. ಬ್ರಿಟನ್ ಪತ್ರಿಕೆ 'ದ ಸನ್' ಸನ್ವಯ ಚೀನಾದಲ್ಲಿ ಈ ಪ್ರಾಣಿಗಳಿಂದಲೇ ಕೊರೋನಾ ವೈರಸ್ ಹರಡುತ್ತಿದೆ ಎಂಬ ವದಂತಿ ಹಿನ್ನೆಲೆ ಇಂತಹ ಕೃತ್ಯ ನಡೆಯುತ್ತಿದೆ ಎಂದು ವರದಿ ಮಾಡಿದೆ. 

ಬೆಚ್ಚಿ ಬೀಳಿಸುವ ಫೋಟೋಗಳು

ವರದಿಯನ್ವಯ ಚೀನಾದಲ್ಲಿ ನಡೆಯುತ್ತಿರುವ ಈ ಘಟನೆಯ ಹಲವಾರು ಹೃದಯ ವಿದ್ರಾವಕ ಫೋಟೋಗಳನ್ನು ನೋಡಬಹುದೆಂದು ಹೇಳಲಾಗಿದೆ. ಮೃತಪಟ್ಟ ಪ್ರಾಣಿಗಳು ರಕ್ತಸಿಕ್ತವಾಗಿ ಬಿದ್ದಿರುವ ದೃಶ್ಯಗಳೂ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಜನರು ತಮ್ಮ ಅಪಾರ್ಟ್ ಮೆಂಟ್ ಗಳಿಂದ ನಾಯಿ ಹಾಗೂ ಬೆಕ್ಕುಗಳನ್ನು ಕೆಳಗೆಸೆಯುತ್ತಿದ್ದಾರೆ. ಬಿದ್ದ ರಭಸಕ್ಕೆ ರಸ್ತೆಗಪ್ಪಳಿಸುವ ಪ್ರಾಣಿಗಳು ಅಲ್ಲೇ ಕೊನೆಯುಸಿರೆಳೆಯುತ್ತಿವೆ. ಶಾಂಘೈನಲ್ಲಿ ಬೈದು ಬೆಕ್ಕುಗಳನ್ನು ಹೊರಗೆಸೆದಿದ್ದು, ರಸ್ತೆಯಲ್ಲಿ ಇವುಗಳು ಒದ್ದಾಡಿ ಸಾವನ್ನಪ್ಪಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವುಹಾನ್‌ನಿಂದ ಬಂದ ಭಾರತೀಯರಿಂದ ಆರೋಗ್ಯ ಶಿಬಿರದಲ್ಲಿ ಡ್ಯಾನ್ಸ್!

ಈ ವದಂತಿ ಹಬ್ಬಿದ್ದು ಹೇಗೆ?

ಚೀನಾದ ಓರ್ವ ಸರ್ಕಾರಿ ವೈದ್ಯ ಟಿವಿ ಕಾರ್ಯಕ್ರಮದಲ್ಲಿ ಕೊರೋನಾ ವೈರಸ್ ತಗುಲಿರುವ ರೋಗಿಗಳು ಪ್ರಾಣಿಗಳಿಂದ ದೂರವ ಇರಿ, ಅವುಗಳನ್ನು ಪ್ರತ್ಯೇಕವಾಗಿರಿಸಿ ಎಂದಿದ್ದಾರೆ. ಆದರೆ ಕೆಲ ಮಾಧ್ಯಮಗಳು ಅವರ ಈ ಹೇಳಿಕೆಯನ್ನು ತಿರುಚಿ ಬೆಕ್ಕು ಹಾಗೂ ನಾಯಿಗಳಿಂದ ಕೊರೋನಾ ಹರಡುತ್ತದೆ ಎಂದು ವರದಿ ಮಾಡಿವೆ. ಈ ವರದಿ ಜನಸಾಮಾನ್ಯರಲ್ಲಿ ಭೀತಿ ಹುಟ್ಟಿಸಿದ್ದು, ನಾನಾ ವದಂತಿಗಳು ಹಬ್ಬಿವೆ. ಆದರೆ ಈ ನಡುವೆ ಚೈಮನಾ ಗ್ಲೋಬಲ್ ಟಿವಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿಕ್ರಿಯೆ ಪ್ರಸಾರ ಮಾಡಿದೆ ಹಾಗೂ ಸಾಕು ಪ್ರಾಣಿಗಳಿಂದ ಕೊರೋನಾ ವೈರಸ್ ಹರಡುತ್ತದೆ ಎಂಬುವುದು ಸಾಬೀತಾಗಿಲ್ಲ ಎಂದು ತಿಳಿಸಿ ಜನರ ಮನದಲ್ಲಿ ಬೇರೂರಿದ ಭಯ ನಿವಾರಿಸಲು ಯತ್ನಿಸಿದೆ. 

ಆಗಿದ್ದು ಮೇಜರ್ ಸರ್ಜರಿ, ಐದೇ ದಿನಕ್ಕೆ ಹೊಲಕ್ಕಿಳಿದ 104 ವರ್ಷದ ಅಜ್ಜ ರೀ!

ಹೀಗಿದ್ದರೂ ಚೀನಾದ ನಾನಾ ಕಡೆ ಮೂಕ ಪ್ರಾಣಿಗಳು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿವೆ. ಮಾಲೀಕರಿಲ್ಲದೇ ಅನಾಥರಾಗಿರುವ ಪ್ರಾಣಿಗಳು ಆಹಾರ, ನೀರು ಇಲ್ಲದೇ ಪರದಾಡುತ್ತಿವೆ.