ರಾವಲ್ಪಿಂಡಿ(ಏ.25): ಕೊರೋನಾ 2ನೇ ಅಲೆಗೆ ತತ್ತರಿಸುವ ಭಾರತಕ್ಕೆ ಹಲವು ದೇಶಗಳು ನೆರವಿನ ಭರವಸೆ ನೀಡಿದೆ. ಇದರಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೂಡ ನೆರವಿಗೆ ಸಿದ್ಧ ಎಂದಿದೆ. ಇದರ ಬೆನ್ನಲ್ಲೇ ಇದೀಗ ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಕ್ತರ್, ಭಾರತಕ್ಕೆ ನೆರವು ನೀಡಲು ಹೊಸ ಮನವಿ ಮಾಡಿದ್ದಾರೆ. ಭಾರತದಲ್ಲಿ ಎದುರಾಗಿರುವ ಆಕ್ಸಿಜನ್ ಕೊರತೆ ನೀಗಿಸಲು ಪಾಕಿಸ್ತಾನ ಜನತೆ ಹಣ ಸಂಗ್ರಹ ಮಾಡಿ ಆಕ್ಸಿಜನ್ ಟ್ಯಾಂಕ್ ನೀಡಲು ನೆರವಾಗಬೇಕು ಎಂದು ಅಕ್ತರ್ ಮನವಿ ಮಾಡಿದ್ದಾರೆ.

ಆಕ್ಸಿಜನ್ ಕೊರತೆಗೆ ಮೋದಿ ಪರಿಹಾರ; ಸರ್ಕಾರಿ ಆಸ್ಪತ್ರೆಗಳಲ್ಲಿ 551 ಉತ್ಪಾದಕ ಘಟಕ ಸ್ಥಾಪನೆ!

ಪಾಕಿಸ್ತಾನ ಸರ್ಕಾರ, ಪಾಕಿಸ್ತಾನ ಜನತೆ, ಅಭಿಮಾನಿಗಳಲ್ಲಿ ಶೋಯೆಬ್ ಅಕ್ತರ್ ಮನವಿ ಮಾಡಿದ್ದಾರೆ. ಹಣ ಸಂಗ್ರಹ ಮಾಡಿ ನೆರೆ ರಾಷ್ಟ್ರ ಭಾರತಕ್ಕೆ ಆಕ್ಸಿಜನ್ ಟ್ಯಾಂಕ್ ದೇಣಿಗೆ ನೀಡಲು ಎಲ್ಲರು ನೆರವಾಗಬೇಕು ಎಂದು ಆಕ್ತರ್ ಮನವಿ ಮಾಡಿದ್ದಾರೆ. 

 

ಅಕ್ತರ್ ತಮ್ಮ ಯುಟ್ಯೂಬ್ ಚಾನೆಲ್ ಮೂಲಕ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಈ ರೀತಿ ವಿಶೇಷ ಮನವಿ ಮಾಡಿದ್ದಾರೆ. ಈ ರೀತಿಯ ಕೊರೋನಾ ಅಲೆಯನ್ನು ನಿಯಂತ್ರಿಸುವುದು ಯಾವುದೇ ಸರ್ಕಾರಕ್ಕೆ ಕಷ್ಟ. ಹೀಗಾಗಿ ನೆರವಿನ ಅಗತ್ಯವಿದೆ. ನಾವೆಲ್ಲೂ ಜೊತೆಯಾಗಿ ನಿಲ್ಲೋಣ ಎಂದು ಅಕ್ತರ್ ಹೇಳಿದ್ದಾರೆ.

ಪಿಎಂ ಮೋದಿ ಮನ್‌ ಕೀ ಬಾತ್: ಕೊರೋನಾ 'ಬಿರುಗಾಳಿ' ದೇಶವನ್ನೇ ನಡುಗಿಸಿದೆ

ಭಾರತದಲ್ಲಿ ಕೊರೋನಾ ಪರಿಸ್ಥಿತಿ ಮಿತಿ ಮೀರಿದೆ. ಶನಿವಾರ ಒಂದೇ ದಿನ  3.46 ಲಕ್ಷ ಕೊರೋನಾ ದಾಖಲಾಗಿದೆ. ದೇಶದಲ್ಲಿ ಎದುರಾಗಿರುವ ಆಕ್ಸಿಜನ್ ಸಮಸ್ಯೆಗೆ ಕೇಂದ್ರ ಸರ್ಕಾರ ಅವಿರತ ಪ್ರಯತ್ನ ಮಾಡುತ್ತಿದ್ದು, ಬಹುತೇಕ ಆಕ್ಸಿಜನ್ ಸಮಸ್ಯೆಗೆ ಉತ್ತರ ಸಿಕ್ಕಿದೆ. ಪೂರೈಕೆಯಾಗದ ಕೆಲ ಭಾಗಗಳಿಗೆ ಆಕ್ಸಿಜನ್ ಪೂರೈಸಲು ಎಲ್ಲಾ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.