* ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ* ಯುದ್ಧ ಸಾರಿದ ರಷ್ಯಾ ಮೇಲೆಡ ಹಲವು ದೇಶಗಳಿಂದ ನಿರ್ಬಂಧ* ಯುದ್ಧ ಪರಿಸ್ಥಿತಿಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಾಯ್ತು ಕಾಂಡೋಂಮ್‌ಗೆ ಬೇಡಿಕೆ
ಮಾಸ್ಕೋ(ಮಾ.21): ರಷ್ಯಾದಲ್ಲಿ ಕಾಂಡೋಮ್‌ಗಳ ಬೇಡಿಕೆ ಗಗನಕ್ಕೇರಿದೆ. ದೇಶದ ಅತಿದೊಡ್ಡ ರಿಟೇಲರ್ ವೈಲ್ಡ್‌ಬೆರ್ರಿಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಮಾರ್ಚ್‌ನ ಮೊದಲ ಎರಡು ವಾರಗಳಲ್ಲಿ ಕಾಂಡೋಮ್ ಮಾರಾಟದಲ್ಲಿ ಶೇಕಡಾ 170 ರಷ್ಟು ಏರಿಕೆ ಆಗಿದೆ. ಪಾಶ್ಚಿಮಾತ್ಯ ದೇಶಗಳು ಹೇರುತ್ತಿರುವ ನಿರ್ಬಂಧಗಳಿಂದಾಗಿ ಈ ಪರಿಸ್ಥಿತಿ ಕಂಡುಬಂದಿದೆ. ನಿಷೇಧಾಜ್ಞೆಯಿಂದಾಗಿ ಇಲ್ಲಿ ಕಾಂಡೋಮ್‌ಗೆ ಕೊರತೆ ಉಂಟಾಗಬಹುದು ಎಂಬ ಭಯ ಜನರಲ್ಲಿದೆ. ಅದಕ್ಕಾಗಿಯೇ ಜನರು ಕಾಂಡೋಮ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ.
Relationships: ಪತ್ನಿ ಸತ್ತು 8 ತಿಂಗಳಿಗೇ ಪ್ರೀತಿಗೆ ಬಿದ್ದ ವ್ಯಕ್ತಿ, ಗರ್ಲ್‌ಫ್ರೆಂಡ್‌ಗೆ ಹುಟ್ಟಿತು ಗೊಂದಲ!
ನಿರ್ಬಂಧಗಳ ಹೊರತಾಗಿಯೂ, ಡ್ಯುರೆಕ್ಸ್ ಮತ್ತು ಇತರ ಬ್ರಾಂಡ್‌ಗಳ ತಯಾರಕ ಬ್ರಿಟಿಷ್ ಕಂಪನಿ ರೆಕಿಟ್ ಉಕ್ರೇನ್‌ನಲ್ಲಿ ವ್ಯವಹಾರವನ್ನು ಮುಂದುವರೆಸಿದೆ. ಪ್ರಮುಖ ಫಾರ್ಮಸಿ ಚೈನ್ 36.6 ಇಲ್ಲಿ ತನ್ನ ಮಾರಾಟದಲ್ಲಿ 26 ಶೇಕಡಾ ಹೆಚ್ಚಳವನ್ನು ವರದಿ ಮಾಡಿದೆ. ಒಟ್ಟಾರೆಯಾಗಿ, ಕೆಮಿಸ್ಟ್‌ಕಾಂಡೋಮ್‌ಗಳ ಖರೀದಿ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 32 ರಷ್ಟು ಹೆಚ್ಚಾಗಿದೆ.
ರಷ್ಯಾ ಮೂಲದ ಸೂಪರ್ಮಾರ್ಕೆಟ್ಗಳು ತಮ್ಮ ಮಾರಾಟವು 30 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಹೇಳಿವೆ. ಜನರು ಭವಿಷ್ಯಕ್ಕಾಗಿ ಶಾಪಿಂಗ್ ಮಾಡುತ್ತಿದ್ದಾರೆ ಎಂದು ಪ್ರಿಜರ್ವಟಿವ್ನಾಯಾ ಸೆಕ್ಸ್ ಶಾಪ್‌ನ ಸಹ-ಮಾಲೀಕ ಯೆಸೇನಿಯಾ ಶಾಮೋನಿನಾ ಹೇಳಿದರು. ಹೀಗಾಗಿ ಬೆಲೆ ಏರಿಕೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಬ್ರಾಂಡ್‌ಗೆ ಅನುಗುಣವಾಗಿ ಗ್ರಾಹಕರಿಗೆ ವೆಚ್ಚವು ಶೇಕಡಾ 50 ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.
ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಮೇಲಿನ ದಾಳಿಯಿಂದಾಗಿ ರಷ್ಯಾದ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ, ಇದು ರಷ್ಯಾದ ಕರೆನ್ಸಿಯ ಮೌಲ್ಯದಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿದೆ, ಹೀಗಿರುವಾಗ ಈ ಯುದ್ಧದಿಂದ ರಷ್ಯಾದ ಸಾಮಾನ್ಯ ಜನರಿಗೆ ಭಾರೀ ಹೊರೆಯಾಗುತ್ತಿದೆ. ದುಬಾರಿ ಮೊತ್ತಕ್ಕೆ ವಸ್ತುಗಳನ್ನು ಖರೀದಿಸಬೇಕಾದ ಅನಿವಾರ್ಯತೆ ಜನರಿಗೆ ಬಂದಿದೆ. ನಿರ್ಬಂಧಗಳ ನಂತರ ರಷ್ಯಾದಲ್ಲಿ ಕಾಂಡೋಮ್‌ಗಳ ಬೇಡಿಕೆಯಲ್ಲಿ ಹೆಚ್ಚಳದ ಬಗ್ಗೆ ರಷ್ಯಾದ ಆಡಳಿತವು ಚಿಂತಿತವಾಗಿದೆ.
Cheating Husband: ಪತಿ ಕಾರಿನಲ್ಲಿದ್ದ ಕಾಂಡೋಮ್ ನೋಡಿ ಸೇಡು ತೀರಿಸಿಕೊಂಡ ಪತ್ನಿ..!
ಕಾಂಡೋಮ್‌ಗಳಿಗೆ ಬೇಡಿಕೆ ಅದೆಷ್ಟು ಹೆಚ್ಚಿದೆ ಎಂದರೆ, ಪುಟಿನ್ ಅವರ ಕೈಗಾರಿಕೆ ಮತ್ತು ವ್ಯಾಪಾರ ಸಚಿವಾಲಯವು ದೀರ್ಘಾವಧಿಯ ಸಮಸ್ಯೆಗಳಿವೆ ಎಂದು ನಿರಾಕರಿಸುವುದು ಅನಿವಾರ್ಯವಾಗಿದೆ, ಆದರೆ "ಈ ಉತ್ಪನ್ನದ ಯಾವುದೇ ನಿರೀಕ್ಷಿತ ಕೊರತೆಗಳಿಲ್ಲ. ಪ್ರಸ್ತುತ ಅತಿದೊಡ್ಡ ಪ್ರಮಾಣದಲ್ಲಿ ಕಾಂಡೋಮ್ ದೇಶಗಳೆಂದರೆ ಥೈಲ್ಯಾಂಡ್, ಭಾರತ, ದಕ್ಷಿಣ ಕೊರಿಯಾ ಮತ್ತು ಚೀನಾ. ಇವೆಲ್ಲವೂ ರಷ್ಯಾದ ಒಕ್ಕೂಟಕ್ಕೆ ಉತ್ಪನ್ನಗಳನ್ನು ತಲುಪಿಸುವುದನ್ನು ಮುಂದುವರೆಸಿದೆ.
ಉಕ್ರೇನ್-ರಷ್ಯಾ ಯುದ್ಧ: ಪತ್ರಿಕೆ ಮುದ್ರಣಕ್ಕೆ ಕಾಗದ ಕೊರತೆ
ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ನ್ಯೂಸ್ ಪ್ರಿಂಟ್ (ಕಾಗದ) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದ ಭಾರತೀಯ ದಿನಪತ್ರಿಕೆಗಳು ತೀವ್ರ ಸಮಸ್ಯೆ ಎದುರಿಸುತ್ತಿವೆ ಎಂದು ವರದಿಯಾಗಿದೆ.
ಭಾರತ ಪತ್ರಿಕೆಗಳ ಮುದ್ರಣಕ್ಕೆ ಅಗತ್ಯವಿರುವ ಶೇ.40ರಷ್ಟುಕಾಗದವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಉಕ್ರೇನ್-ರಷ್ಯಾ ಬಿಕ್ಕಟ್ಟು ಕಾರಣದಿಂದ ಹಲವಾರು ಜಾಗತಿಕ ಸರಕು ಸಾಗಣೆ ಕಂಪನಿಗಳು ರಷ್ಯಾ ಬಂದರಿನಿಂದ ಬುಕ್ಕಿಂಗ್ ನಿಲ್ಲಿಸಿವೆ. ಇದು ನ್ಯೂಸ್‌ಪ್ರಿಂಟ್ ಕಂಟೈನರ್‌ಗಳ ಸಂಗ್ರಹಕ್ಕೆ ಕಾರಣವಾಗಿದೆ. ಅಲ್ಲದೆ ಹಣ ದುಬ್ಬರ, ಜಾಗತಿಕ ನೈಸರ್ಗಿಕ ಇಂಧನ ದರ ಹೆಚ್ಚಳ ಪರಿಣಾಮ ಕಾಗದ ದರ ಶೇ.30ರಷ್ಟುಹೆಚ್ಚಾಗಿದೆ.
2019ರಲ್ಲಿ ಪ್ರತಿ ಟನ್ ಆಮದು ಕಾಗದದ ಬೆಲೆ 450 ಡಾಲರ್‌ಗಳಿಂದ 950 ಡಾಲರ್‌ಗೆ ಏರಿಕೆಯಾಗಿದೆ. ದಿನಪತ್ರಿಕೆಯ ಒಟ್ಟು ವೆಚ್ಚದ ಶೇ.40-50ರಷ್ಟುಕಾಗದಕ್ಕೇ ಹೋಗುತ್ತಿದೆ. ಇನ್ನು ಶಾಯಿ, ಅಲ್ಯೂಮಿನಿಯಂ ಪ್ಲೇಟ್‌ಗಳು, ಮುದ್ರಣ ಮತ್ತು ಸಾರಿಗೆ ವೆಚ್ಚ ಸಹ ಹೆಚ್ಚು ದುಬಾರಿಯಾಗುತ್ತಿದೆ. ಇದು ಈಗಾಗಲೇ ನಷ್ಟದಲ್ಲಿರುವ ದಿನಪತ್ರಿಕೆಗಳ ಮೇಲೆ ಮತ್ತಷ್ಟುಒತ್ತಡ ಹೇರಿದೆ.
ಇ-ಕಾಮರ್ಸ್ ಕ್ಷೇತ್ರದಲ್ಲಿನ ಅಗಾಧ ಬೆಳವಣಿಗೆಯಿಂದಾಗಿ ಅನೇಕ ದೇಶೀಯ ನ್ಯೂಸ್‌ಪ್ರಿಂಟ್ ತಯಾರಕರು ತಮ್ಮ ಗಿರಣಿಗಳನ್ನು ಪ್ಯಾಕೇಜಿಂಗ್ ವಸ್ತುಗಳನ್ನು ಉತ್ಪಾದಿಸಲು ಗಿರಣಿಗಳಾಗಿ ಪರಿವರ್ತಿಸುತ್ತಿದ್ದಾರೆ. ಭಾರತದಲ್ಲಿ ಕೆಲವೇ ಕೆಲವು ಗಿರಣಿಗಳು ದಿನಪತ್ರಿಕೆ ಕಾಗದವನ್ನು ಉತ್ಪಾದಿಸುತ್ತಿವೆ. ಕೊರೋನಾ ಕಾರಣದಿಂದ ಈ ಉದ್ಯಮವೂ ನೆಲಕಚ್ಚಿದೆ.
