ಅಮೆರಿಕಾದ ಕೊಲೆರಾಡೋ ರಾಜ್ಯದಲ್ಲಿ ಭೀಕರ ಕಾಡ್ಗಿಚ್ಚು 580 ಮನೆಗಳು, ಹೋಟೆಲ್ ಮತ್ತು ಶಾಪಿಂಗ್ ಮಾಲ್‌ ಭಸ್ಮ ಕಾಡ್ಗಿಚ್ಚಿನ ಭಯಾನಕ ದೃಶ್ಯ ವೈರಲ್

ಕೊಲೆರಾಡೋ(ಜ.1): ಅಮೆರಿಕಾದ ಕೊಲೆರಾಡೋದಲ್ಲಿ ಭೀಕರವಾದ ಕಾಡ್ಗಿಚ್ಚಿಗೆ ನೂರಾರು ಮನೆಗಳು ಬೆಂಕಿಗಾಹುತಿಯಾಗಿವೆ. ಗಂಟೆಗೆ 105 ( 105 mph) ಮೈಲಿಯಷ್ಟು ವೇಗವಾಗಿ ಬೀಸುತ್ತಿದ್ದ ಗಾಳಿಯಿಂದ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಅಂದಾಜು 580 ಮನೆಗಳು, ಹೋಟೆಲ್ ಮತ್ತು ಶಾಪಿಂಗ್ ಮಾಲ್‌ಗಳನ್ನು ಸುಟ್ಟುಹಾಕಿದೆ. ಅಲ್ಲದೇ ಸಾವಿರದಷ್ಟು ಮನೆಗಳ ಜನರನ್ನು ಒತ್ತಾಯಪೂರ್ವಕವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಗಂಟೆಗೆ 105 ಮೈಲಿಯಷ್ಟು ವೇಗವಾಗಿ ಬೀಸಿದ ಗಾಳಿಯಿಂದ ಉಂಟಾದ ಕಾಡ್ಗಿಚ್ಚುಗಳು ಬೌಲ್ಡರ್ (Boulder) ಬಳಿಯ ಸುಪೀರಿಯರ್ (Superior) ಮತ್ತು ಲೂಯಿಸ್ವಿಲ್ಲೆ ( Louisville) ಎಂಬ ಎರಡು ನಗರಗಳನ್ನು ಆವರಿಸಿದವು ಮತ್ತು ಇಲ್ಲಿ ಅಂದಾಜು 580 ಮನೆಗಳು, ಹೋಟೆಲ್ ಮತ್ತು ಶಾಪಿಂಗ್ ಕೇಂದ್ರಗಳನ್ನು ಸುಟ್ಟು ಹಾಕಿದವು. ಕೊಲೆರಾಡೋ ರಾಜ್ಯದ ಇತಿಹಾಸದಲ್ಲಿಯೇ ಇದು ಅತಿದೊಡ್ಡ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. 

Scroll to load tweet…
Scroll to load tweet…

ಈ ಘಟನೆಯಲ್ಲಿ ಒಟ್ಟು ಆರು ಜನ ಗಾಯಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬೌಲ್ಡರ್ ಕೌಂಟಿಯ ( Boulder County) ಶೆರಿಫ್ (Sheriff) ಜೋ ಪೆಲ್ಲೆ (Joe Pelle) ಅವರು, ವೇಗವಾಗಿ ಬೆಂಕಿ ಇಡೀ ಪ್ರದೇಶಗಳನ್ನು ಆವರಿಸಿದ್ದರಿಂದ ದಾಗಿ ಹೆಚ್ಚಿನ ಗಾಯಗಳು ಮತ್ತು ಸಾವು ಸಂಭವಿಸಬಹುದು ಎಂದು ಹೇಳಿದ್ದಾರೆ. 

Scroll to load tweet…
Scroll to load tweet…

ಅಲ್ಲದೇ ಈ ಬೆಂಕಿಯು ಕನಿಷ್ಠ 1,600 ಎಕರೆ ಪ್ರದೇಶವನ್ನು ಸುಟ್ಟುಹಾಕಿ ನಂತರ ಪಶ್ಚಿಮದ ಸುಪೀರಿಯರ್ ಮತ್ತು ಲೂಯಿಸ್ವಿಲ್ಲೆಯತ್ತ ಹರಡಿತು ಎಂದು ಶೆರಿಫ್ ಹೇಳಿದರು. ವಿಶಾಲವಾದ ಶುಷ್ಕ ಪ್ರದೇಶದಲ್ಲಿ ಬೆಂಕಿಯನ್ನು ನಿಯಂತ್ರಿಸಲು ಅಧಿಕಾರಿಗಳು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿರುವುದರಿಂದ, ನಾಗರಿಕರ ಸಾವು ನೋವುಗಳು ಅಥವಾ ನಾಪತ್ತೆಯಾದವರ ಬಗ್ಗೆ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ. ಆದಾಗ್ಯೂ, ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ, ಆಸ್ತಿ ನಷ್ಟದ ಬಗ್ಗೆ ದುಃಖಿಸಿದ್ದಾರೆ.

280 ಗ್ರಾಮಗಳಿಗೆ ಕಾಡ್ಗಿಚ್ಚು : 24 ಜನರಿಗೆ ಗಲ್ಲು !

ಅದೃಷ್ಟವಶಾತ್, ಪ್ರಸ್ತುತ ಪ್ರಬಲವಾದ ಗಾಳಿಯ ಹಾರಾಟ (ಬೀಸುವ ವೇಗ) ತಣ್ಣಗಾಗಿದ್ದು, ಬೆಂಕಿ ಶೀಘ್ರದಲ್ಲೇ ಹಾರಾಡುವುದು ಕಡಿಮೆಯಾಗಲಿದೆ ಎಂದು ತಿಳಿದು ಬಂದಿದೆ. ಈ ವಿನಾಶಕಾರಿ ಕಾಡ್ಗಿಚ್ಚಿಗೆ ಇತ್ತೀಚಿನ ದಾಖಲೆ ಶುಷ್ಕತೆ ಕಾರಣ ಎಂದು ಹವಾಮಾನ ಸಂಸ್ಥೆ ವಿವರಿಸಿದೆ. ಜುಲೈ 1 ರಿಂದ ಡಿಸೆಂಬರ್ 29 ರವರೆಗಿನ ಎಲ್ಲಾ ಅವಧಿಗಳಲ್ಲಿ (ಮೂಲಭೂತವಾಗಿ ವರ್ಷದ ದ್ವಿತೀಯಾರ್ಧದಲ್ಲಿ), ಡೆನ್ವರ್ ಒಂದು ಇಂಚಿನಷ್ಟು ದಾಖಲೆಯ ಮೇಲೆ ಶುಷ್ಕವಾಗಿದೆ. ಹಿಮಪಾತವು ದಾಖಲೆಗಿಂತಲೂ ಕಡಿಮೆ ಮಟ್ಟದಲ್ಲಿದೆ ಎಂದು ಹವಾಮಾನ ಇಲಾಖೆ ವಿವರಿಸಿದೆ.

ಆಸ್ಪ್ರೇಲಿಯಾ ಕಾಳ್ಗಿಚ್ಚು ಜಗತ್ತಿಗೆ ಏಕೆ ಎಚ್ಚರಿಕೆ ಗಂಟೆ?