ನವದೆಹಲಿ(ಜು.08): ಭಾರತ ವಿರೋಧಿ ನೀತಿ ಅನುಸರಿಸುತ್ತಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಯತ್ನ ಆರಂಭವಾದ ಬೆನ್ನಲ್ಲೇ, ಓಲಿ ಅವರ ಕುರ್ಚಿ ಉಳಿಸಲು ಚೀನಾ ಮಧ್ಯಪ್ರವೇಶ ಮಾಡಿದೆ.

ಪ್ರಧಾನಿ ವಿರುದ್ಧ ಎದ್ದ ಬಂಡಾಯವನ್ನು ತಣಿಸಲು ಚೀನಾ ರಾಯಭಾರಿ ಹೌ ಯಾಂಕಿ ನೇಪಾಳ ರಾಜಕೀಯ ನಾಯಕರೊಂದಿಗೆ ಮಾತುಕತೆ ಆರಂಭಿಸಿದ್ದಾರೆ. ನೇಪಾಳದ ಪ್ರಧಾನಿ ವಿರುದ್ಧ ಆಡಳಿತಾರೂಢ ಕಮ್ಯುನಿಸ್ಟ್‌ ಪಾರ್ಟಿಯೊಳಗಿನ ಬಂಡಾಯ ಬಯಲಾದಾಗಿನಿಂದ ಅಂದರೆ ಕಳೆದ ಏಪ್ರಿಲ್‌ ಮತ್ತು ಮೇ ತಿಂಗಳಿನಿಂದಲೇ ಹೌ ಯಾಂಕಿ ಪಕ್ಷದ ಪ್ರಮುಖ ನಾಯಕರೊಂದಿಗೆ ಸರಣಿ ಸಂಧಾನ ಸಭೆ ನಡೆಸುತ್ತಿದ್ದಾರೆ.

ಭಾರತ, ನೇಪಾಳ ನಡುವಿನ ಸಂಬಂಧಕ್ಕೆ ಹುಳಿ ಹಿಂಡಿದ ಈಕೆ ಯಾರು?

ಇತ್ತೀಚೆಗೆ ಕಮ್ಯುನಿಸ್ಟ್‌ ಪಕ್ಷದ ಮುಖ್ಯಸ್ಥರೊಂದಿಗಿನ ಸಭೆಯಲ್ಲಿ ಪಾಲ್ಗೊಂಡಿದ್ದ ಹೌ, ಬಂಡಾಯವನ್ನು ಶೀಘ್ರ ಬಗೆಹರಿಸಿಕೊಳ್ಳುವಂತೆ ಕೋರಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಚೀನಾ ಕಮ್ಯುನಿಸ್ಟ್‌ ಪಾರ್ಟಿ ಮತ್ತು ನೇಪಾಳ ಕಮ್ಯುನಿಸ್ಟ್‌ ಪಾರ್ಟಿ ಆನ್‌ಲೈನ್‌ ಮೂಲಕ ಸಂವಾದವನ್ನೂ ನಡೆಸಿವೆ.

#NewsIN100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

ಲಡಾಖ್‌ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ವಿರೋಧ ಕಟ್ಟಿಕೊಂಡಿರುವ ಕುತಂತ್ರಿ ಚೀನಾ, ನೇಪಾಳವನ್ನೂ ಭಾರತದ ವಿರುದ್ಧ ಎತ್ತಿಕಟ್ಟುತ್ತಿದೆ. ಚೀನಾ ಪ್ರಚೋದನೆಗೆ ಒಳಗಾಗಿ ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿ ಭಾರತ ವಿರೋಧಿ ಧೋರಣೆ ತಾಳಿದ್ದರು. ಭಾರತದ ಭೂಭಾಗವನ್ನೂ ಸೇರ್ಪಡೆಗೊಳಿಸಿ ವಿವಾದಿತ ನಕ್ಷೆ ರಚಿಸಿದ್ದರು.