ಕೊರೋನಾ ಬೆನ್ನಲ್ಲೇ ಹರಡುತ್ತಿದೆ ನ್ಯೂಮೋನಿಯಾ, ಮೋಸ್ಟ್ ಡೇಂಜರ್ ಎಂದ ಚೀನಾ ರಾಯಭಾರಿ ಕಚೇರಿ!

ಕೊರೋನಾ ವೈರಸ್ ಹೊಡೆತದಿಂದ ಇನ್ನು ಚೇತರಿಸಿಕೊಂಡಿಲ್ಲ. ಅಷ್ಟರಲ್ಲೇ ಚೀನಾ ರಾಯಭಾರಿ ಕಚೇರಿ ಇದೀಗ ಅತೀ ಭೀಕರ ನ್ಯುಮೋನಿಯಾ ಹರಡುತ್ತಿರುವ ಕುರಿತು ಎಚ್ಚರಿಕೆ ನೀಡಿದೆ. ಇದು ಕೊರೋನಾಗಿಂತ ಡೇಂಜರ್, ಯಾಕೆಂದರೆ ನ್ಯೂಮೋನಿಯಾದಲ್ಲಿ ಸಾವಿನ ಪ್ರಮಾಣ ಹೆಚ್ಚು ಎಂದು ಎಚ್ಚರಿಸಿದೆ.

Chinese Embassy in Kazakhstan has warned  country of pneumonia of unknown cause

ಖಜಕ್‌ಸ್ತಾನ್(ಜು.10): ಕೊರೋನಾ ವೈರಸ್‌ಗೆ ವಿಶ್ವವೇ ತತ್ತರಿಸಿದೆ. ಲಸಿಕೆಯೂ ಇಲ್ಲ, ಸೋಕಿನ ಪ್ರಮಾಣ ಕಡಿಮೆ ಆಗುತ್ತಿಲ್ಲ. ಇದರ ಜೊತೆಗೆ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಕೊರೋನಾ ಆತಂಕದಲ್ಲಿರುವಾಗಲೇ ಖಜಕ್‌ಸ್ತಾನ್ ದಲ್ಲಿರುವ ಚೀನಾ ರಾಯಭಾರಿ ಕಚೇರಿ ಮತ್ತೊಂದು ಎಚ್ಚರಿಕೆ ನೀಡಿದೆ. ಖಜಕ್‌ಸ್ತಾನ್‌ದಲ್ಲಿ ನ್ಯೂಮೋನಿಯಾ ಹರಡುತ್ತಿದೆ. ಇದು ಕೊರೋನಾಗಿಂತ ಡೇಂಜರ್ ಎಂದಿದೆ.

ಚೀನಾ ವಿರುದ್ಧ ನಿಂತ ಭಾರತದ ಬಗ್ಗೆ ಹೆಮ್ಮೆ ಇದೆ: ಅಮೆರಿಕದ ಸೆನೆಟರ್ ಕೆನಡಿ

ಖಜಕ್‌ಸ್ತಾನ್‌ದಲ್ಲಿ ಜೂನ್ ತಿಂಗಳ ಆರಂಭಿಕ 2 ವಾರದಲ್ಲಿ 500 ಮಂದಿ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. 2020ರ ಆರಂಭಿದಿಂದ 6ತಿಂಗಳ ವರೆಗಿನ ಅಂಕಿ ಅಂಶಗಳುು ಬೆಚ್ಚಿ ಬೀಳಿಸುವಂತಿದೆ.  ಕಳೆದ 6 ತಿಂಗಳಲ್ಲಿ 1772 ಮಂದಿ ನ್ಯುಮೋನಿಯಾಗೆ ಬಲಿಯಾಗಿದ್ದಾರೆ. ಜೂನ್ ತಿಂಗಳಲ್ಲಿ 628 ಮಂದಿ ಬಲಿಯಾಗಿದ್ದಾರೆ. 

ಖಜಕ್‌ಸ್ತಾನದಲ್ಲಿ ಇದೀಗ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ನ್ಯುಮೋನಿಯಾ ಭೀಕರತೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಇದು ಕೊರೋನಾ ವೈರಸ್ ಸಾವಿನ ಪ್ರಮಾಣಕ್ಕಿಂತ ಹೆಚ್ಚಾಗಿರುವ ಕಾರಣ ಇತರ ದೇಶಗಳಲ್ಲೂ ಆತಂಕ ಶುರುವಾಗಿದೆ.

ಒಂದೆಡೆ ಕೊರೋನಾ ವೈರಸ್ ಮತ್ತೊಂದಂಡೆ ನ್ಯುಮೋನಿಯಾ ಜ್ವರ ಖಜಕ್‌ಸ್ತಾನ ಜನತೆಯನ್ನು ಮತ್ತಷ್ಟು ಹೈರಾಣಾಗಿಸಿದೆ. ಖಜಕ್‌ಸ್ತಾನದಲ್ಲಿ ಎಚ್ಚರಿಕೆ ನೀಡಲಾಗಿದೆ. ಇತರ ದೇಶಗಳಿಗೂ ಸೂಚನೆ ನೀಡಲಾಗಿದೆ. ಹೀಗಾಗಿ ಭಾರತ ಸೇರಿದಂತೆ ಇತರ ದೇಶಗಳೂ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ನ್ಯುಮೋನಿಯಾ ವಕ್ಕರಿಸಿದರೆ ಭಾರತ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಲಿದೆ.

Latest Videos
Follow Us:
Download App:
  • android
  • ios