* ಟೆಸ್ಟಿಂಗ್‌ ಹೆಚ್ಚಳ, ಜನಸಂದಣಿ ಪ್ರದೇಶಗಳಲ್ಲಿ ನಿರ್ಬಂಧ, ಹೋಟೆಲ್‌ ಬುಕ್ಕಿಂಗ್‌ ಕ್ಯಾನ್ಸಲ್‌* ಚೀನಾದಲ್ಲಿ ಮತ್ತೆ ಸೋಂಕು ಸ್ಫೋಟ: ನಿರ್ಬಂಧ ಜಾರಿ* ಶುಕ್ರವಾರ 32, ಶನಿವಾರ 40ಕ್ಕೂ ಅಧಿಕ ಹೊಸ ಕೇಸ್‌ 

ಬೀಜಿಂಗ್‌(ಅ.25): ಕೊರೋನಾ(Covid 19) ತವರು ಚೀನಾದಲ್ಲಿ(China) ಮತ್ತೆ ಸೋಂಕು ಸ್ಫೋಟಗೊಳ್ಳುತ್ತಿದ್ದು ಶನಿವಾರ ರಾಜಧಾನಿ ಬೀಜಿಂಗ್‌(Beijing) ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 43 ಕೇಸ್‌ ದಾಖಲಾಗಿದೆ. ರಾಜಧಾನಿ ಬೀಜಿಂಗ್‌ನಲ್ಲಿ ಸೋಂಕು ದೃಢಪಟ್ಟವರ ಪೈಕಿ ಐವರು ಅ.12 ರಿಂದ 15ರವರೆಗೆ ಮಂಗೋಲಿಯಾ ಪ್ರವಾಸದಲ್ಲಿದ್ದರು. ಇವರು ಅ.16ರಂದು ಬೀಜಿಂಗ್‌ಗೆ ಮರಳಿದ್ದು ಸೋಂಕು ಧೃಢಪಟ್ಟಿದೆ. ಇವರ ಸಂಪರ್ಕದಲ್ಲಿದ್ದ ಮತ್ತೊಬ್ಬನಿಗೂ ಪಾಸಿಟಿವ್‌ ಬಂದಿದೆ.

ಶುಕ್ರವಾರ ಚೀನಾದಲ್ಲಿ 32 ಕೇಸ್‌ ದೃಢಪಟ್ಟಿದ್ದರೆ, ಶನಿವಾರ 40ಕ್ಕೂ ಹೆಚ್ಚು ಕೇಸ್‌ ದಾಖಲಾಗಿವೆ. ದಿನದಿಂದ ದಿನಕ್ಕೆ ಸೋಂಕು ಮತ್ತೆ ಹೆಚ್ಚಳಗೊಳ್ಳುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಚೀನಾ(China) ಮತ್ತೆ ಚಿಂತಾಕ್ರಾಂತವಾಗಿದ್ದು. ಪ್ರಯಾಣಿಕರ ಟೆಸ್ಟಿಂಗ್‌ ಹೆಚ್ಚಿಸುವುದರ ಜತೆಗೆ, ಐಸೋಲೇಷನ್‌ ಮಾಡುತ್ತಿದೆ. ಸ್ಯಾನಿಟೈಸರ್‌ ಮತ್ತು ಮಾಸ್ಕ್‌ ಕಡ್ಡಾಯಗೊಳಿಸಿದ್ದು, ಹೋಟೆಲ್‌ ಬುಕ್ಕಿಂಗ್‌ಗೆ ನಿರ್ಬಂಧಿಸಿದೆ.

ಚೀನಾದ ಹಲವು ನಗರಗಳಲ್ಲಿ ಈಗಾಗಲೇ ಟೆಸ್ಟಿಂಗ್‌ ಹೆಚ್ಚಿಸಿದ್ದು, ಜನಸಂದಣಿ ಪ್ರದೇಶಗಳಲ್ಲಿ ನಿಬಂರ್‍ಧ ಹೇರಲಾಗಿದೆ. ಈಗಾಗಲೇ ಚೀನಾ ಜಿಡಿಪಿ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದು, ಸೋಂಕಿನ ಸ್ಪೋಟ ಮತ್ತೆ ಹೊಸ ಆತಂಕ ಸೃಷ್ಟಿಸಿದೆ.

ವರ್ಷಾಂತ್ಯದವರೆಗೂ ಕೋವಿಡ್‌ 3ನೇ ಅಲೆ ಆತಂಕ

ರಷ್ಯಾ(Russia), ಜರ್ಮನಿ(Germany), ಬ್ರಿಟನ್‌, ಚೀನಾದಲ್ಲಿ ಕೋವಿಡ್‌-19 ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದ್ದರೂ ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆಗಳು ಕಡಿಮೆ. ಆದರೆ ಈ ವರ್ಷಾಂತ್ಯದವರೆಗೂ ಕೋವಿಡ್‌ ಮೂರನೇ ಅಲೆಯ ಆತಂಕ ಇದ್ದೇ ಇದೆ ಎಂದು ರಾಜ್ಯದ ಕೋವಿಡ್‌ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ರಾಜ್ಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಮುಖ್ಯಸ್ಥ ಡಾ. ಎಂ. ಕೆ. ಸುದರ್ಶನ್‌, ಸಮಿತಿಯ ಸದಸ್ಯ ಮತ್ತು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್‌. ಮಂಜುನಾಥ್‌ ಮತ್ತು ಸಮಿತಿಯ ಇನ್ನೋರ್ವ ಸದಸ್ಯ, ವೈರಾಣು ತಜ್ಞ ಡಾ. ವಿ. ರವಿ ಅವರು ಸದ್ಯದ ಮಟ್ಟಿಗೆ ಮೂರನೇ ಅಲೆಯ ಆತಂಕ ಇಲ್ಲದ್ದಿದ್ದರೂ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಹೇಳಿದರು.

ಕೋವಿಡ್‌ ಮೂರನೇ ಅಲೆ ಅಕ್ಟೋಬರ್‌, ನವೆಂಬರ್‌ನಲ್ಲಿ ಬರುವ ಸಾಧ್ಯತೆ ಕಡಿಮೆ ಆಗಿರಬಹುದು. ಆದರೆ ಮೂರನೇ ಅಲೆಯ ಆತಂಕ ಇದ್ದೇ ಇದೆ. ಮುಂದಿನ ಮೂರು ತಿಂಗಳುಗಳ ಕಾಲ ಕೋವಿಡ್‌ ಶಿಷ್ಟಾಚಾರಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಡಾ. ಸಿ.ಎನ್‌. ಮಂಜುನಾಥ್‌ ತಿಳಿಸಿದರು.

ಲಸಿಕೆ ಪಡೆದವರಿಗೂ ಸೋಂಕು ಆತಂಕ:

ರಾಜ್ಯದಲ್ಲಿ ಕೋವಿಡ್‌-19 ಪ್ರಕರಣ ಕಡಿಮೆ ಆಗಿರಬಹುದು. ಆದರೆ ವಿದೇಶದಲ್ಲಿ ಇನ್ನೂ ಕೋವಿಡ್‌ ಪ್ರಕರಣಗಳು ಇವೆ. ಅದೇ ರೀತಿ ಕೋವಿಡ್‌ ಲಸಿಕೆ ಪಡೆಯಲು ಸಾಕಷ್ಟುಮಂದಿ ಬಾಕಿಯಿದ್ದಾರೆ. ಲಸಿಕೆ ಪಡೆದವರಿಗೂ ಸೋಂಕು ಬರುವ ಸಾಧ್ಯತೆ ಇದೆ. ಮರಣದ ಪ್ರಮಾಣ ಶೇ.2ರಷ್ಟಿದೆ. ಆದ್ದರಿಂದ ಕೋವಿಡ್‌ ಮೂರನೇ ಅಲೇ ಬರುವುದೇ ಇಲ್ಲ ಎಂದು ಹೇಳುವ ಸ್ಥಿತಿ ಇಲ್ಲ. ಕೊರೋನಾ ವೈರಾಣುವಿನ ರೂಪಾಂತರದ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ವೈರಾಣು ರೂಪಾಂತರಗೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಜನರು ಕೋವಿಡ್‌ ಮುಗಿದೇ ಹೋಯಿತು ಎಂದು ಬೇಕಾಬಿಟ್ಟಿವರ್ತಿಸಬಾರದು ಎಂದು ಡಾ