ಮಂಗಳ ಗ್ರಹಕ್ಕೆ ಚೀನಾ ನೌಕೆ ಯಶಸ್ವಿ ಉಡ್ಡಯನ..!

ಮಾರ್ಚ್‍-5 ಹೆಸರಿನ ಶಕ್ತಿಶಾಲಿ ರಾಕೆಟ್‌ ಸುಮಾರು 5 ಟನ್‌ನಷ್ಟು ಪೇಲೋಡ್‌ಗಳನ್ನು ಹೊತ್ತು ದಕ್ಷಿಣ ಚೀನಾದ ದ್ವೀಪ ಹೈನಾನ್‌ನ ಉಡಾವಣೆ ನೆಲೆಯಿಂದ ನೌಕೆ ಉಡಾವಣೆಗೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

China successful launch of Mars mission named Tianwen 1

ಬೀಜಿಂಗ್(ಜು.24)‌: ಮಂಗಳ ಗ್ರಹದ ಮೇಲೆ ರೋವರ್‌ ಇಳಿಸಿ ಅಧ್ಯಯನ ನಡೆಸಬಲ್ಲ ನೌಕೆಯೊಂದನ್ನು ಚೀನಾ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಮಂಗಳನ ಕಕ್ಷೆಯಲ್ಲಿ ಸುತ್ತುವ ಆರ್ಬಿಟರ್‌, ಮಂಗಳನ ಮೇಲೆ ಇಳಿಯುವ ಲ್ಯಾಂಡರ್‌ ಮತ್ತು ಮಂಗಳ ಗ್ರಹದಲ್ಲಿ ಸಂಚರಿಸಿ ಮಾಹಿತಿ ಕಲೆಹಾಕುವ ರೋವರ್‌ಗಳನ್ನು ನೌಕೆ ಒಳಗೊಂಡಿದೆ. 

ಮಾರ್ಚ್‍-5 ಹೆಸರಿನ ಶಕ್ತಿಶಾಲಿ ರಾಕೆಟ್‌ ಸುಮಾರು 5 ಟನ್‌ನಷ್ಟು ಪೇಲೋಡ್‌ಗಳನ್ನು ಹೊತ್ತು ದಕ್ಷಿಣ ಚೀನಾದ ದ್ವೀಪ ಹೈನಾನ್‌ನ ಉಡಾವಣೆ ನೆಲೆಯಿಂದ ನೌಕೆ ಉಡಾವಣೆಗೊಂಡಿದೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಸೇನೆಯಲ್ಲಿನ್ನು ಮಹಿಳೆಯರಿಗೆ ಪೂರ್ಣಾವಧಿ ಹುದ್ದೆಗೆ ಅವಕಾಶ

ಉಡಾವಣೆಗೊಂಡ 36 ನಿಮಿಷಗಳ ಅಂತರದಲ್ಲಿ ನೌಕೆ ಆರ್ಬಿಟರ್‌, ರೋವರ್‌ಗಳನ್ನು ಕಕ್ಷೆಗೆ ಸೇರಿಸಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಇನ್ನು 7 ತಿಂಗಳ ಅಂತರದಲ್ಲಿ ನೌಕೆ ಮಂಗಳ ಗ್ರಹವನ್ನು ತಲುಪಲಿದೆ ಚೀನಾ ನ್ಯಾಷನಲ್‌ ಸ್ಪೇಸ್‌ ಅಡ್ಮಿನಿಸ್ಪ್ರೇಷನ್‌ (ಸಿಎನ್‌ಎಸ್‌ಎ) ತಿಳಿಸಿದೆ.

ಈಗಾಗಲೇ ಭಾರತ, ಅಮೆರಿಕ, ರಷ್ಯಾ ಮತ್ತು ಯುರೋಪಿಯನ್‌ ಯೂನಿಯನ್‌ ಮಂಗಳ ಗ್ರಹಕ್ಕೆ ನೌಕೆಯನ್ನು ಕಳುಹಿಸುವಲ್ಲಿ ಯಶಸ್ವಿಯಾಗಿವೆ. ಈ ಸಾಲಿಗೆ ಚೀನಾ ಕೂಡ ಸೇರ್ಪಡೆ ಆಗಲಿದೆ. ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹಕ್ಕೆ ಯಶಸ್ವಿಯಾಗಿ ನೌಕೆಯನ್ನು ಕಳಿಸಿದ ಹೆಗ್ಗಳಿಗೆ ಭಾರತದ ಹೆಸರಿನಲ್ಲಿದೆ.
 

Latest Videos
Follow Us:
Download App:
  • android
  • ios