ಸೇನೆಯಲ್ಲಿನ್ನು ಮಹಿಳೆಯರಿಗೆ ಪೂರ್ಣಾವಧಿ ಹುದ್ದೆಗೆ ಅವಕಾಶ

ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಪರ್ಮನಂಟ್‌ ಕಮಿಷನ್‌ (ನಿವೃತ್ತಿಯವರೆಗೆ ಕೆಲಸ) ನೀಡಬೇಕು ಎಂಬ ಬಹುವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಈ ಕುರಿತಂತೆ ಸರ್ಕಾರವು ಅಧಿಕೃತ ಔಪಚಾರಿಕ ಆದೇಶವನ್ನು ಪ್ರಕಟಿಸಿದೆ.

sanction issued women now eligible for permanent commission in army

ನವದೆಹಲಿ(ಜು.24): ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಪರ್ಮನಂಟ್‌ ಕಮಿಷನ್‌ (ನಿವೃತ್ತಿಯವರೆಗೆ ಕೆಲಸ) ನೀಡಬೇಕು ಎಂಬ ಬಹುವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಈ ಕುರಿತಂತೆ ಸರ್ಕಾರವು ಅಧಿಕೃತ ಔಪಚಾರಿಕ ಆದೇಶವನ್ನು ಪ್ರಕಟಿಸಿದೆ.

ಫೆಬ್ರವರಿಯಲ್ಲೇ ಸುಪ್ರೀಂ ಕೋರ್ಟು, ಶಾರ್ಟ್‌ ಸರ್ವಿಸ್‌ ಕಮಿಷನ್‌ (ಎಸ್‌ಎಸ್‌ಸಿ) ಅಡಿ ಅಲ್ಪಾವಧಿ ಸೇವೆಯನ್ನು ಹೊಂದಿರುವ ಮಹಿಳಾ ಸೇನಾಧಿಕಾರಿಗಳಿಗೆ ಪರ್ಮನಂಟ್‌ ಕಮಿಷನ್‌ ನೀಡಬೇಕು ಎಂಬ ಮಹತ್ವದ ಆದೇಶ ಹೊರಡಿಸಿತ್ತು.

ಅಲ್ಲದೆ, ಜುಲೈ 7ರಂದು ಮತ್ತೆ ಈ ಕುರಿತು ವಿಚಾರಣೆ ನಡೆಸಿದ್ದ ಕೋರ್ಟ್‌, 1 ತಿಂಗಳೊಳಗೆ ತನ್ನ ಅದೇಶ ಪಾಲನೆ ಆಗಬೇಕೆಂದು ಸರ್ಕಾರಕ್ಕೆ ತಿಳಿಸಿತ್ತು. ಈ ಪ್ರಕಾರ, ಈಗ ರಕ್ಷಣಾ ಸಚಿವಾಲಯ ಅಧಿಸೂಚನೆ ಪ್ರಕಟಿಸಿದೆ.

ಮಾಸ್ಕ್‌ ಧರಿಸದಿದ್ರೆ 1ಲಕ್ಷ ದಂಡ, ಲಾಕ್ಡೌನ್‌ ಉಲ್ಲಂಘಿಸಿದರೆ 2 ವರ್ಷ ಜೈಲು ಶಿಕ್ಷೆ!

ಇದರಿಂದಾಗಿ, ನೇಮಕದ ದಿನದಿಂದ ಗರಿಷ್ಠ 14 ವರ್ಷಗಳ ಅವಧಿಗಷ್ಟೇ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ಅಧಿಕಾರಿಗಳು, ನಿವೃತ್ತಿ ವಯಸ್ಸು ಪೂರೈಸುವವರೆಗೂ ಸೇವೆ ಸಲ್ಲಿಸಲು ಅವಕಾಶ ಲಭಿಲಿದೆ.

‘ಈ ಕ್ರಮದಿಂದ ಮಹಿಳಾ ಅಧಿಕಾರಿಗಳ ಸಬಲೀಕರಣ ಆಗಲಿದ್ದು, ಸೇನೆಯಲ್ಲಿ ಅವರಿಗೂ ಉನ್ನತ ಹುದ್ದೆಗಳು ಲಭಿಸಲಿದೆ. ಸೇನೆಯ ಎಲ್ಲ 10 ವಿಭಾಗಗಳಲ್ಲಿನ ಮಹಿಳಾ ಅಧಿಕಾರಿಗಳಿಗೆ ಕಾಯ ಆಗುವ ಅವಕಾಶ ಲಭಿಸಲಿದೆ’ ಎಂದು ಸೇನಾ ವಕ್ತಾರ ಅಮನ್‌ ಆನಂದ್‌ ಹೇಳಿದ್ದಾರೆ.

ಯೋಜನೆಯ ಲಾಭ ಏನು?

ಸೇನೆಯ ವಿವಿಧ 10 ವಿಭಾಗಗಳಲ್ಲಿ ಶಾರ್ಟ್‌ ಸರ್ವಿಸ್‌ ಕಮಿಷನ್‌ ಮಹಿಳಾ ಅಧಿಕಾರಿಗಳು ಈವರೆಗೆ ಸೇವೆ ಸಲ್ಲಿಸುತ್ತಿದ್ದಾರೆ. ಅಂದರೆ ಒಮ್ಮೆ ಇವರು ಸೇನೆ ಸೇರಿದರೆ ನೇಮಕದ ದಿನದಿಂದ ಕನಿಷ್ಠ 5 ವರ್ಷ ಹಾಗೂ ಗರಿಷ್ಠ 14 ವರ್ಷದವರೆಗೆ​ ಮಾತ್ರ ಕಾರ್ಯನಿರ್ವಹಿಸಬಹುದು. ಆದರೆ ಈಗ ಹೊಸ ಆದೇಶದಿಂದ ಪರ್ಮನಂಟ್‌ ಕಮಿಷನ್‌ (ಪಿಸಿ) ಹುದ್ದೆ ಇವರಿಗೆ ಲಭಿಸಲಿದ್ದು, ಇದರ ಅಡಿ ನಿವೃತ್ತಿ ವಯಸ್ಸಿನವರೆಗೂ ಕಾರ್ಯನಿರ್ವಹಿಸಬಹುದು.

ಈವರೆಗೆ ಏಕೆ ಇರಲಿಲ್ಲ?

‘ಮಹಿಳೆಯರು ದೈಹಿಕವಾಗಿ ಪುರುಷರಷ್ಟುಶಕ್ತರಲ್ಲ’ ಎಂಬ ಕಾರಣ ನೀಡಿ, ಅವರಿಗೆ ಪರ್ಮನಂಟ್‌ ಕಮಿಷನ್‌ ಹುದ್ದೆಯನ್ನು ಸರ್ಕಾರ ನೀಡುತ್ತಿರಲಿಲ್ಲ. ಶಾರ್ಟ್‌ ಸರ್ವಿಸ್‌ ಕಮಿಷನ್‌ ಅಧಿಕಾರಿಗಳ 14 ವರ್ಷಗಳ ಸೇವಾ ವಿಸ್ತರಣೆಗೆ ಅವಕಾಶ ಇದೆಯಾದರೂ ನಿವೃತ್ತಿ ವಯಸ್ಸಿನವರೆಗೆ ಕೆಲಸ ಮಾಡಲು ಸಾಧ್ಯವಿರಲಿಲ್ಲ. ಸರ್ಕಾರದ ಈ ನಿರ್ಧಾರವನ್ನು ಫೆ.17ರಂದು ಸುಪ್ರೀಂ ಕೋರ್ಟ್‌ ತಳ್ಳಿಹಾಕಿ, ಪರ್ಮನಂಟ್‌ ಕಮಿಷನ್‌ಗೆ ಆದೇಶಿಸಿತ್ತು.

ಎಷ್ಟುಮಹಿಳೆಯರಿದ್ದಾರೆ?

ಸೇನೆಯಲ್ಲಿ ಈಗ ಶೇ.3.89, ನೌಕಾಪಡೆಯಲ್ಲಿ ಶೇ.6.7 ಹಾಗೂ ವಾಯುಪಡೆಯಲ್ಲಿ ಶೇ.13.28 ಮಹಿಳಾ ಅಧಿಕಾರಿಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಾಯುಪಡೆಯ ಫ್ಲೈಯಿಂಗ್‌ ಸ್ಕಾ$್ವಡ್‌ ಹೊರತುಪಡಿಸಿ ಮಿಕ್ಕ ವಿಭಾಗಗಳಲ್ಲಿ ಹಾಗೂ ನೌಕಾಪಡೆಯ ಲಾಜಿಸ್ಟಿಕ್ಸ್‌, ನೇವಲ್‌ ಡಿಸೈನಿಂಗ್‌, ಏರ್‌ ಟ್ರಾಫಿಕ್‌ ಕಂಟ್ರೋಲ್‌, ಎಂಜಿನಿಯರಿಂಗ್‌ ಹಾಗೂ ಕಾನೂನು ವಿಭಾಗಗಳಲ್ಲಿ ಪರ್ಮನಂಟ್‌ ಕಮಿಷನ್‌ಗೆ ಅವಕಾಶವಿದೆ.

Latest Videos
Follow Us:
Download App:
  • android
  • ios