Asianet Suvarna News Asianet Suvarna News

ಚೀನಾದಲ್ಲಿ ದಾಖಲೆ 13146 ಕೇಸು ಬೀಜಿಂಗ್‌ನಲ್ಲಿ ಡಬಲ್‌ ಟೆಸ್ಟ್‌ ಕಡ್ಡಾಯ!

* ಬೀಜಿಂಗÜಲ್ಲಿ ಡಬಲ್‌ ಟೆಸ್ಟ್‌ ಕಡ್ಡಾಯ

ಚೀನಾದಲ್ಲಿ ದಾಖಲೆ 13146 ಕೇಸು:

ಸಾರ್ವಕಾಲಿಕ ದಾಖಲೆ ಪ್ರಮಾಣದ ಕೇಸು ದಾಖಲು

China Reports Over 1300 New Covid Cases As Outbreak Spreads pod
Author
First Published Apr 4, 2022, 5:37 AM IST

ಬೀಜಿಂಗ್‌: ಚೀನಾದಲ್ಲಿ ಒಮಿಕ್ರೋನ್‌ ಅಬ್ಬರ ಮುಂದುವರೆದಿದ್ದು, ಭಾನುವಾರ ಒಂದೇ ದಿನ 13,146 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದು ಎರಡು ವರ್ಷಗಳ ಹಿಂದೆ ವುಹಾನ್‌ನಲ್ಲಿ ಆರಂಭವಾದ ಕೋವಿಡ್‌ ಮೊದಲನೇ ಅಲೆಯ ಉತ್ತುಂಗದ ನಂತರ ದಾಖಲಾದ ಅತೀ ಹೆಚ್ಚು ಪ್ರಕರಣವಾಗಿದೆ.

ಈ ಪ್ರಕರಣಗಳಲ್ಲಿ ಶೇ.70ರಷ್ಟುಪ್ರಕರಣಗಳು ಚೀನಾದ ಪ್ರಮುಖ ವಾಣಿಜ್ಯ ನಗರಿಯಾದ ಶಾಂಘೈನಲ್ಲಿಯೇ ವರದಿಯಾಗಿವೆ. ಚೀನಾದ ಕೋವಿಡ್‌ ವಿರುದ್ಧ ಶೂನ್ಯ ಸಹನೆಯ ನೀತಿಯಡಿ ಶಾಂಘೈನಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ವಿಧಿಸಿದ್ದರೂ ಭಾನುವಾರ 438 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 7788 ರೋಗ ಲಕ್ಷಣಗಳಿರದ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಬೀಜಿಂಗ್‌ನ ಡಬಲ್‌ ಟೆಸ್ಟ್‌ಗೆ ಅದೇಶ ಹೊರಡಿಸಲಾಗಿದೆ. ಭಾನುವಾರ ಆ್ಯಂಟಿಜೆನ್‌ ಮತ್ತು ಸೋಮವಾರ ನ್ಯೂಕ್ಲಿಯಕ್‌ ಆ್ಯಸಿಡ್‌ ಟೆಸ್ಟ್‌ಗೆ ಸೂಚಿಸಲಾಗಿದೆ.

ಈ ನಡುವೆ ಮನೆಯಲ್ಲಿಯೇ ಕ್ವಾರೆಂಟನ್‌ ಆಗಿರುವ ಶಾಂಘೈನ 2.5 ಕೋಟಿ ಜನರು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಕೋವಿಡ್‌ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆನ್ಲೈನ್‌ನಲ್ಲಿ ಭಾರೀ ಪ್ರಮಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಹೇಳಿದಂತೆ ಆಹಾರ, ಔಷಧಿಗಳನ್ನು ಮನೆ ಬಾಗಿಲಿಗೆ ಪೂರೈಸಲು ವಿಫಲವಾಗಿದೆ ಎಂದು ದೂರಿದ್ದಾರೆ.

ಲಾಕ್‌ಡೌನ್‌ನಲ್ಲಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರದಂತೇ ಜನರಿಗೆ ಆದೇಶ ನೀಡಿದಲಾಗಿದ್ದು, ಆಹಾರ ಪೂರೈಕೆಯಾಗದ ಕಾರಣ ಜನರು ಹಸಿವಿನಿಂದ ಕಂಗೆಟ್ಟಿದ್ದಾರೆ. ಪ್ರತಿದಿನವೂ ಸ್ವಯಂ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು. ಮನೆಯಲ್ಲೂ ಮಾಸ್‌್ಕ ಧರಿಸಬೇಕು, ಕುಟುಂಬದ ಸದಸ್ಯರಿಂದಲೂ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೆ ಅಗತ್ಯ ಪ್ರಮಾಣದ ಔಷಧಿ, ಕಿಟ್‌ಗಳನ್ನು ಒದಗಿಸಲಾಗುತ್ತಿಲ್ಲ. ಕೋವಿಡ್‌ ಸೋಂಕಿತರಲ್ಲದವರಿಗೂ ಬಲವಂತವಾಗಿ ಕ್ವಾರಂಟೈನ್‌ ಆಗಲು ಸೂಚಿಸಲಾಗಿದೆ.

Follow Us:
Download App:
  • android
  • ios