ಬೀಜಿಂಗ್‌(ಮಾ.23): ಮೂರು ದಿನಗಳ ಬಳಿಕ ಇದೇ ಮೊದಲ ಬಾರಿ ಚೀನಾದಲ್ಲಿ ಮೊದಲ ದೇಶಿಯ ಕೊರೋನಾ ಪ್ರಕರಣ ದಾಖಲಾಗಿದೆ. ಇನ್ನೇನು ಸೋಂಕು ತಹಬದಿಗೆ ಬರುತ್ತಿದೆ ಅನ್ನುವಷ್ಟರಲ್ಲಿ ಸೋಂಕು ದೃಢವಾಗಿರುವುದು ಆತಂಕಕ್ಕೆ ಕಾರಣವಾಗಿದೆ. '

ಕಳೆದ ಮೂರು ದಿನಗಳಲ್ಲಿ ಅಲ್ಲಿ ಯಾವುದೇ ದೇಶಿಯ ಸೋಂಕು ಕಂಡು ಬಂದಿರಲಿಲ್ಲ. ಶನಿವಾರ 46 ಮಂದಿಗೆ ಸೋಂಕು ದೃಢವಾಗಿದ್ದು, ಇದರಲ್ಲಿ ಒಂದು ದೇಶಿಯ ಪ್ರಕರಣವಾಗಿದೆ. ಆ ಮೂಲಕ ಒಟ್ಟು ಸೋಂಕಿಯತರ ಸಂಖ್ಯೆ 81,054ಕ್ಕೆ ಮುಟ್ಟಿದೆ. ಹುಬೇ ಪ್ರಾಂತ್ಯದಲ್ಲಿ 5 ಸೇರಿ ಒಟ್ಟು 6 ಮಂದಿ ಸಾವನ್ನಪ್ಪಿದ್ದು, ಆ ಮೂಲಕ ಸಾವಿನ ಸಂಖ್ಯೆ 3,261ಕ್ಕೆ ತಲುಪಿದೆ.

ನಂಬರ್‌ ಗೇಮ್‌

46- ಶನಿವಾರ ಗೊತ್ತಾದ ಹೊಸ ಪ್ರಕರಣ

6- ಶನಿವಾರದ ಸಾವು

3,261- ಈವರೆಗೆ ಒಟ್ಟು ಸಾವು

81,054- ಸೋಂಕಿತರ ಸಂಖ್ಯೆ

5,549- ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು

72,244- ಗುಣಮುಖರಾದವರು