ಟಿಬೆಟ್ ಪ್ರಾಂತ್ಯದ ಚೆಂಗ್ಡು ರಾಯಭಾರ ಕಚೇರಿ ಮುಚ್ಚಲು ಅಮೆರಿಕಕ್ಕೆ ಚೀನಾ ಸೂಚನೆ| ಹೂಸ್ಟನ್ ರಾಯಭಾರ ಕಚೇರಿ ಮುಚ್ಚಿದ್ದಕ್ಕೆ ಪ್ರತೀಕಾರ
ಬೀಜಿಂಗ್(ಜು.25): ಅಮೆರಿಕ ಹೂಸ್ಟನ್‌ನಲ್ಲಿರುವ ರಾಯಭಾರ ಕಚೇರಿಯನ್ನು ಮುಚ್ಚಲು ಆದೇಶ ನೀಡಿದ ಬೆನಲ್ಲೇ, ಚೀನಾ ಕೂಡ ಇದೇ ನಡೆಯನ್ನು ಅನುಸರಿಸಿದೆ. ನೈಋುತ್ಯ ಸಿಚುವಾನ್ ಪ್ರಾಂತ್ಯದ ಚೆಂಗ್ಡುನಲ್ಲಿರುವ ರಾಯಭಾರ ಕಚೇರಿಯನ್ನು ಮುಚ್ಚುವಂತೆ ಅಮೆರಿಕಕ್ಕೆ ಚೀನಾ ಶುಕ್ರವಾರ ಆದೇಶಿಸಿದೆ.
ಚೆಂಗ್ಡುನಲ್ಲಿರುವ ರಾಯಭಾರ ಕಚೇರಿಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಮತ್ತು ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವಂತೆ ಅಮೆರಿಕ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಹಸ್ಯ ಕಾದಿಡಲು ಇನ್ನಷ್ಟು ಚೀನಾ ರಾಯಭಾರ ಕಚೇರಿ ಬಂದ್: ಟ್ರಂಪ್
ಚೆಂಗ್ಡು ಅಮೆರಿಕಕ್ಕೆ ಮಹತ್ವದ ರಾಜತಾಂತ್ರಿಕ ಕಚೇರಿ ಎನಿಸಿಕೊಂಡಿದೆ. ಇದು ಟಿಬೆಟ್ ಸೇರಿದಂತೆ ಚೀನಾದ ಹೆಚ್ಚಿನ ಪ್ರದೇಶಗಳಲ್ಲಿ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಹೀಗಾಗಿ ಅಮೆರಿಕದ ವಿರುದ್ಧ ಸೇಡಿನ ಕ್ರಮವಾಗಿ ಚೆಂಗ್ಡು ರಾಯಭಾರ ಕಚೇರಿಯನ್ನು ಚೀನಾ ಮುಚ್ಚುವಂತೆ ಸೂಚಿಸಿದೆ ಎನ್ನಲಾಗಿದೆ.
ಈ ಮೂಲಕ ಚೀನಾ ಅಮೆರಿಕದ ಜೊತೆಗಿನ ರಾಜತಾಂತ್ರಿಕ ಸಮರಕ್ಕೆ ಇನ್ನಷ್ಟುತುಪ್ಪ ಸುರಿದಿದೆ.
