Viral Video: ನಡುರಸ್ತೆಯಲ್ಲೇ ಒಡೆದ ದೈತ್ಯ ಒಳಚರಂಡಿ ಪೈಪ್, ಜನರ ಮೇಲೆ 'ಮಲ' ಕಾರಂಜಿ!
sewage pipe explosion in China: ರಸ್ತೆಯ ಮಧ್ಯದಲ್ಲಿದ್ದ ಒಳಚರಂಡಿ ಪೈಪ್ ಒಡೆದು ಹೋಗಿರುವ ಡ್ಯಾಶ್‌ಕ್ಯಾಮ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಳದಿ ಬಣ್ಣದ ಒಳಚರಂಡಿ ನೀರು, ಬೈಕರ್‌ಗಳು, ಕಾರ್‌ಗಳು ರಸ್ತೆಯ ಮೇಲೆ ಪ್ರಯಾಣ ಮಾಡುತ್ತಿದ್ದ ಜನರ ಮೇಲೆ ಬಿದ್ದಿದೆ.
ಬೀಜಿಂಗ್ (ಸೆ.28): ರಸ್ತೆಯ ಮೇಲೆ ಒಳಚರಂಡಿ ಪೈಪ್ ಒಡೆದು ಹೋಗಿದ್ದರೆ ಆ ಮಾರ್ಗದಿಂದ ಹೋಗೋಕೆ ಹಿಂಜರಿಯುವ ಜನರಿದ್ದಾರೆ. ಹೀಗಿದ್ದಾಗ ನಿಮ್ಮ ಮೇಲೆ ಊರವರ 'ಮಲ' ಬಿದ್ದರೆ ಹೇಗಾಗಬೇಡ. ಚೀನಾದ ನಾನ್ನಿಗ್ ನಗರದಲ್ಲಿ ಅಂಥದ್ದೊಂದು ಅಸಹ್ಯ ಪ್ರಮಾದ ಆಗಿ ಬಿಟ್ಟಿದೆ. ನಾನ್ನಿಂಗ್ ನಗರದಲ್ಲಿ ಎಂದಿನಂತೆ ಪಾದಾಚಾರಿಗಳು ರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ರಸ್ತೆಯ ಕೆಳಗಿದ್ದ ದೈತ್ಯ ಒಳಚರಂಡಿ ಪೈಪ್ ನೀರಿನ ಪೈಪ್ ಒಡೆಯುವ ರೀತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಒಡೆದು ಹೋಗಿದೆ. ಇದರಿಂದಾಗಿ ಮಾನವನ ಮಲ 33 ಫೀಟ್ ಎತ್ತರಕ್ಕೆ ಹಾರಿದೆ. ಈ ವೇಳೆ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಕಾರುಗಳು, ಬೈಕರ್‌ಗಳು ಹಾಗೂ ಪಾದಾಚಾರಗಳ ಮೇಲೆಲ್ಲಾ ಹ್ಯೂಮನ್ ವೇಸ್ಟ್ ಬಿದ್ದಿದೆ. ಸೆಪ್ಟೆಂಬರ್ 24 ರಂದು ಬೆಳಿಗ್ಗೆ ಕಾರ್ಮಿಕರು ಹೊಸದಾಗಿ ಅಳವಡಿಸಲಾದ ಒಳಚರಂಡಿ ಪೈಪ್‌ನಲ್ಲಿ ಒತ್ತಡ ಪರೀಕ್ಷೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದುರದೃಷ್ಟವಶಾತ್, ಪರೀಕ್ಷೆ ದೊಡ್ಡ ಪ್ರಮಾಣದಲ್ಲಿ ವಿಫಲವಾಗಿ, ಇಡೀ ಪೈಪ್ ಛಿದ್ರವಾಯಿತು, ಜನನಿಬಿಡ ರಸ್ತೆಯ ಮೇಲೆ ಮಲವಿಸರ್ಜನೆಯ ಕಾರಂಜಿ ಹೊರಹೊಮ್ಮಿದೆ.
ಸ್ತೆಯ ಮಧ್ಯದಲ್ಲಿದ್ದ ಒಳಚರಂಡಿ ಪೈಪ್ ಒಡೆದು ಹೋಗಿರುವ ಡ್ಯಾಶ್‌ಕ್ಯಾಮ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಳದಿ ಬಣ್ಣದ ಒಳಚರಂಡಿ ನೀರು, ಬೈಕರ್‌ಗಳು, ಕಾರ್‌ಗಳು ರಸ್ತೆಯ ಮೇಲೆ ಪ್ರಯಾಣ ಮಾಡುತ್ತಿದ್ದ ಜನರ ಮೇಲೆ ಬಿದ್ದಿದೆ. ಒಂದು ಕಾರಿನ ವಿಂಡ್‌ಸ್ಕ್ರೀನ್ ಮೇಲೆ ಸಂಪೂರ್ಣವಾಗಿ ಹಳದಿ ಬಣ್ಣದಲ್ಲಿ ಮಾನವನ ಮಲ ಬಿದ್ದು ಮುಚ್ಚಿ ಹೋಗಿದ್ದು ಕಂಡಿದೆ. ಆ ಬಳಿಕ ಉಳಿದ ಜನರು ಈ ರಸ್ತೆಯ ಮೂಲಕ ಹಾದುಹೋಗಲು ಹೆಣಗಾಡಿದ್ದಾರೆ. ಕಾಲ್ನಡಿಗೆಯಲ್ಲಿದ್ದ ಜನರ ಮೇಲೂ ಮೂಡ ಆಕಾಶದಿಂದ ಕಕ್ಕ ಬಿದ್ದಿದ್ದರಿಂದ ಕಕ್ಕಾಬಿಕ್ಕಿಯಾಗಿದ್ದಾರೆ. ಹೆಚ್ಚಿನವರ ಮೈಮೇಲೆ ಸಂಪೂರ್ಣವಾಗಿ ಮಾನವನ ಮಲ ಬಿದ್ದಿದೆ ಎಂದು ವರದಿಯಾಗಿದೆ.
ಪ್ರಬಲ ಸ್ಫೋಟದ ಹೊರತಾಗಿಯೂ, ಯಾರೂ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದಾಗ್ಯೂ, ಸ್ಫೋಟದ ಬಲವು ತುಂಬಾ ತೀವ್ರವಾಗಿತ್ತು, ಇದು ನಿರ್ಮಾಣ ಸ್ಥಳದಲ್ಲಿ ಕಾರ್ಮಿಕನೊಬ್ಬ ಪಲ್ಟಿಯಾಗಿ ಮಲದ ಹೊಂಡಕ್ಕೆ ಬಿದ್ದಿದ್ದ ಎಂದಿದ್ದಾರೆ. ಕೊಳಚೆ ನೀರಿನಿಂದ ಹಲವಾರು ವಾಹನಗಳು ಹಾನಿಗೊಳಗಾಗಿವೆ ಎನ್ನುವ ಸಾಕಷ್ಟು ವರದಿಗಳು ಬಂದಿವೆ.
ಹುಲಿ ಬಳಿಕ ಮಾರುಕಟ್ಟೆಗೆ ಬಂದ 'ಬೆಲ್ಲ' ರಮ್, ಭಾರತ-ಅಮೆರಿಕದಲ್ಲಿ ಬಿಡುಗಡೆ ಮಾಡಿದ ಅಮೃತ್ ಡಿಸ್ಟಲರಿ!
ಸ್ಥಳೀಯ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ರಸ್ತೆಯನ್ನು ತೆರವುಗೊಳಿಸಲು ದೊಡ್ಡ ಪ್ರಮಾಣದ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸಿದರು. ನಿರ್ಮಾಣದ ಸಮಯದಲ್ಲಿ ಆಕಸ್ಮಿಕ ಹಾನಿಯಿಂದ ಛಿದ್ರ ಉಂಟಾಗಿದೆ ಎಂದು ನ್ಯಾನಿಂಗ್ ಪುರಸಭೆಯ ಅಧಿಕಾರಿಗಳು ನಿರಾಕರಿಸಿದರೆ, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಅವರು ಪ್ರಸ್ತುತ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅದೃಷ್ಟವಶಾತ್, ಅವ್ಯವಸ್ಥೆಯನ್ನು ತ್ವರಿತವಾಗಿ ಸ್ವಚ್ಛಗೊಳಿಸಲಾಯಿತು, ಆದರೆ ಘಟನೆಯ ಆಘಾತಕಾರಿ ದೃಶ್ಯಗಳು ಪ್ರಸಾರವಾಗುತ್ತಲೇ ಇವೆ, ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಇವು ವೈರಲ್ ಆಗಿವೆ.
ಭಾರತದ ಈ 5 ತಾಣಗಳಿಗೆ ಹೋಗ್ಬೇಕು ಅಂದ್ರೆ ಸ್ಪೆಷಲ್ ಪರ್ಮಿಷನ್ ಬೇಕು!