Asianet Suvarna News Asianet Suvarna News

ಮಗುವಿನಂತೆ ಕಾಣುವ ಈ ಯುವಕನಿಗೆ ಯಾರೂ ಕೆಲ್ಸ ಕೊಡ್ತಿಲ್ವಂತೆ.!

ತಮ್ಮ ವಯಸ್ಸಿಗಿಂತ ಸಣ್ಣವರಾಗಿ ಕಾಣಬೇಕು ಎಂಬುದು ಎಲ್ಲರ ಬಯಕೆ. ಆದರೆ ಇಲ್ಲೊಬ್ಬರಿಗೆ ತಾವು ಸಣ್ಣವರಂತೆ ಕಾಣುತ್ತಿರುವುದೇ ಸಮಸ್ಯೆಯಾಗಿದೆ.

china man whose face looks like a baby now have a problem in getting job akb
Author
Bangalore, First Published Jul 30, 2022, 3:19 PM IST

ಚೀನಾ: ತಮ್ಮ ವಯಸ್ಸಿಗಿಂತ ಸಣ್ಣವರಾಗಿ ಕಾಣಬೇಕು ಎಂಬುದು ಎಲ್ಲರ ಬಯಕೆ. ಆದರೆ ಇಲ್ಲೊಬ್ಬರಿಗೆ ತಾವು ಸಣ್ಣವರಂತೆ ಕಾಣುತ್ತಿರುವುದೇ ಸಮಸ್ಯೆಯಾಗಿದೆ. ಕೆಲ ದಿನಗಳ ಹಿಂದೆ ಏಲಿಯನ್ ರೀತಿ ಕಾಣಲು ಹೋಗಿ ತನ್ನ ಮೂಗು ಕಿವಿಗೆ ಕತ್ತರಿ ಹಾಕಿಕೊಂಡು ಅಸಹ್ಯವಾಗಿ ಕಾಣ್ತಿದ್ದ ವ್ಯಕ್ತಿ ಕೊನೆಗೆ ನನ್ನ ನೋಡಿದ ಯಾರೂ ನನಗೆ ಕೆಲಸ ನೀಡುತ್ತಿಲ್ಲ ಎಂದು ಗೋಳಾಡಿದ್ದು ನೆನಪಿರಬಹುದು. ಈಗ ಚೀನಾದ ವ್ಯಕ್ತಿಯೊಬ್ಬ ನಾನು ಮಗುವಿನಂತೆ ಕಾಣುತ್ತಿರುವ ಕಾರಣ ಯಾರೂ ನನಗೆ ಉದ್ಯೋಗ ಕೊಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಹಾಗಂತ ಇವರೇನೂ ಮಗುವಿನಂತೆ ಕಾಣಲು ಏನೂ ಸಾಹಸ ಮಾಡಿಲ್ಲ. ಸಹಜವಾಗಿಯೇ ಇವರು ಪುಟ್ಟ ಮಗುವಿನಂತೆ ಕಾಣುತ್ತಿದ್ದಾರೆ. ಇದರಿಂದ ಅವರಿಗೆ ಉದ್ಯೋಗ ಹಿಡಿಯುವುದು ಕಷ್ಟವಾಗಿದೆಯಂತೆ.

ಚೀನಾದ 27 ವರ್ಷದ ಯುವಕ ಮಾವೋ ಶೇಂಗ್‌ ನೋಡಲು ಮಗುವಿನಂತೆ ಕಾಣುತ್ತಿದ್ದು, ಇದರಿಂದ ಯಾರೂ ಈತನಿಗೆ ಉದ್ಯೋಗ ನೀಡುತ್ತಿಲ್ಲವಂತೆ. ಈ ಬಗ್ಗೆ  ಯುವಕ ಮಾವೋ ಶೇಂಗ್‌ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದಾದ ಬಳಿಕ ಈ ವಿಚಾರ ಎಲ್ಲೆಡೆ ವೈರಲ್ ಆಗಿದ್ದು, ಜಗತ್ತಿಗೆ ತಿಳಿದಿದೆ. ಚೀನಾದ ಡಗ್ಗನ್ ನಗರದ ನಿವಾಸಿಯಾಗಿರುವ ಮಾವೋ ಶೇಂಗ್‌ ಅವರಿಗೆ ಅವರ ಮಗುವಿನಂತಹ ಮುಖ ಹಾಗೂ ಪುಟ್ಟ ದೇಹದಿಂದಾಗಿ ಬಹಳ ತೊಂದರೆ ಆಗಿದೆ ಅಂತೆ. ಶೇಂಗ್ ಅವರ ತಂದೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು ಸ್ವಲ್ಪ ಸ್ವಲ್ಪವೇ ಚೇತರಿಸಿಕೊಳ್ಳುತ್ತಿದ್ದಾರಂತೆ. ಇಂತಹ ಸಮಯದಲ್ಲಿ ಅವರಿಗೆ ಈತ ನೆರವಾಗಲು ಬಯಸಿದ್ದಾನೆ. ಆದರೆ ಉದ್ಯೋಗವಿಲ್ಲದೇ ಯಾವ ಸಹಾಯವನ್ನು ಮಾಡಲಾಗುತ್ತಿಲ್ಲ ಎಂದು ಈತ ಅಳಲು ತೋಡಿಕೊಂಡಿದ್ದಾನೆ.

ಕುಕು ಕಾಗೆಯನ್ನು ಮನೆಯ ಮಗುವಿನಂತೆಯೇ ಸಾಕ್ತಾರೆ ಈ ಮನೆಯ ಜನ

ತನ್ನ ವಯಸ್ಸು 27 ಎಂದು ಹಂಚಿಕೊಂಡಿರುವ ಈತ ಹಲವು ಬಾರಿ ಸಮೀಪದ ನಗರಗಳಲ್ಲಿ ಇರುವ ಫ್ಯಾಕ್ಟರಿಗಳಲ್ಲಿ ಉದ್ಯೋಗಕ್ಕೆ ಯತ್ನಿಸಿದ್ದು, ಈತನ ದೇಹ ಪ್ರಕೃತಿ ಹಾಗೂ ಮಗುವಿನಂತಹ ಮುಖ ನೋಡಿದ ಯಾರೂ ಕೂಡ ಈತನಿಗೆ ಉದ್ಯೋಗ ನೀಡುತ್ತಿಲ್ಲವಂತೆ. ಆದರೆ ಅದೇ ಫ್ಯಾಕ್ಟರಿಗಳಲ್ಲಿ ಉದ್ಯೋಗ ಗಳಿಸುವಲ್ಲಿ ಆತನ ಸ್ನೇಹಿತರು ಯಶಸ್ವಿಯಾಗಿದ್ದಾರಂತೆ. 

ಉದ್ಯೋಗಕ್ಕಾಗಿ ಈತ ಹುಡುಕಾಟ ನಡೆಸಿ ಹಲವು ಕಂಪನಿಗಳಿಗೆ ಎಡತಾಕಿದ್ದು, ಈತನನ್ನು ನೋಡಿದ ಉದ್ಯೋಗದಾತರು ಈತ ತನ್ನ ನಿಜವಾದ ವಯಸ್ಸನ್ನು ಮರೆ ಮಾಚುತ್ತಿದ್ದಾನೆ ಎಂದು ಆರೋಪಿಸುತ್ತಿದ್ದರಂತೆ. ಅಲ್ಲದೇ ಕೆಲ ಕಂಪನಿಗಳು ಈತನಿಗೆ ಕೆಲಸ ನೀಡಿದರೆ ಬಾಲ ಕಾರ್ಮಿಕನ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ ಎಂದು ನಮ್ಮ ಮೇಲೆ ಕೇಸು ದಾಖಲಾಗಬಹುದು ಎಂದು ಭಯಗೊಂಡಿದ್ದಾರಂತೆ. ವಿಡಿಯೋವೊಂದರಲ್ಲಿ ಶೇಂಗ್ ತನ್ನ ಒಂದು ಗುರುತಿನ ಚೀಟಿಯನ್ನು ತೋರಿಸಿದ್ದು, ಅದರಲ್ಲಿ ಆತನ ಜನನ ವರ್ಷ 1995 ಎಂದು ದಾಖಲಾಗಿದ್ದು, ಆತನಿಗೆ 27 ವರ್ಷ ಎಂದಿದೆ. 

ಮಗುವಿನಂತೆ ತೊಟ್ಟಿಲಲ್ಲಿ ಮಲಗಿದ ಶಿವರಾಜ್ ಕುಮಾರ್, ವಿಡಿಯೋ ವೈರಲ್..!

ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಈತನ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಈತನ ಬಗ್ಗೆ ಅನುಕಂಪ ತೋರಿದ್ದಾರೆ. ಅಲ್ಲದೇ ಈಗ ಹಲವು ಸಂಸ್ಥೆಗಳು ಆತನಿಗೆ ಉದ್ಯೋಗ ನೀಡಲು ಮುಂದೆ ಬಂದಿವೆ ಅಲ್ಲದೇ ಅನೇಕರು ಆತನಿಗೆ ಸಹಾಯ ಮಾಡಲು ಧಾವಿಸಿ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ನಂತರದ ವಿಡಿಯೋದಲ್ಲಿ ಅವರು ತನಗೆ ಬಂದ ಉದ್ಯೋಗದ ಆಫರೊಂದನ್ನು ಸ್ವೀಕರಿಸಿದ್ದು, ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.ಸದ್ಯ ಉದ್ಯೋಗ ಪಡೆದು ಖುಷಿಯಾಗಿರುವ ಈತ ಒಳ್ಳೆಯ ಜೀವನ ಸಂಗಾತಿಯನ್ನು ನೋಡಿ ಮದುವೆಯಾಗಿ ಸಂಸಾರ ಮಾಡುವ ಉದ್ದೇಶ ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ.

Follow Us:
Download App:
  • android
  • ios