ಅಣ್ವಸ್ತ್ರ ಸಂಖ್ಯೆ ದ್ವಿಗುಣಕ್ಕೆ ಚೀನಾ ಯತ್ನ!
ಭಾರತದ ಜತೆ ಗಡಿ ಸಂಘರ್ಷ ಹಾಗೂ ಅಮೆರಿಕ ಜತೆ ವ್ಯಾಪಾರ ಸಮರ| ಅಣ್ವಸ್ತ್ರ ಸಂಖ್ಯೆ ದ್ವಿಗುಣಕ್ಕೆ ಚೀನಾ ಯತ್ನ| ದಶಕದ ಒಳಗಾಗಿ ತನ್ನ ಬಳಿ ಇರುವ ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಯೋಜನೆ
ನ್ಯೂಯಾರ್ಕ್(ಸೆ.03): ಭಾರತದ ಜತೆ ಗಡಿ ಸಂಘರ್ಷ ಹಾಗೂ ಅಮೆರಿಕ ಜತೆ ವ್ಯಾಪಾರ ಸಮರ ನಡೆಸುತ್ತಿರುವ ಚೀನಾ ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
ದಶಕದ ಒಳಗಾಗಿ ತನ್ನ ಬಳಿ ಇರುವ ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಯೋಜನೆ ರೂಪಿಸುತ್ತಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ವರದಿ ಬಿಡುಗಡೆ ಮಾಡಿರುವುದು ಕಳವಳಕ್ಕೆ ಕಾರಣವಾಗಿದೆ. ಸದ್ಯ ಚೀನಾ ಸೇನೆ ಬಳಿ 200 ಅಣ್ವಸ್ತ್ರ ಸಿಡಿತಲೆಗಳು ಇವೆ. ಅವುಗಳ ಸಂಖ್ಯೆಯನ್ನು 10 ವರ್ಷಗಳಲ್ಲಿ ದ್ವಿಗುಣಗೊಳಿಸಲು ಹಾಗೂ ಆಗಸದಿಂದಲೇ ಹಾರಿಸುವಂತಹ ‘ಗುರುತ್ವ ಬಲ ಆಧರಿಸಿ ಗುರಿ ತಲುಪುವ’ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲು ಚೀನಾ ಪ್ರಯತ್ನಿಸುತ್ತಿದೆ.
ಜತೆಗೆ ನೆಲ, ಸಮುದ್ರ ಹಾಗೂ ಗಾಳಿಯಿಂದ ಅಣ್ವಸ್ತ್ರ ದಾಳಿ ಮಾಡುವಂತಹ ಸೌಲಭ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಉದ್ದೇಶಿಸಿದೆ ಎಂದು ಪೆಂಟಗನ್ ವರದಿ ತಿಳಿಸಿದೆ. ಅಣ್ವಸ್ತ್ರ ನಿಯಂತ್ರಣ ಸಂಘಟನೆಯ ಲೆಕ್ಕಾಚಾರದ ಅನ್ವಯ ಪ್ರಸಕ್ತ ರಷ್ಯಾದ ಬಳಿ 6300, ಅಮೆರಿಕದ ಬಳಿ 5800, ಭಾರತದ ಬಳಿ 150 ಅಣ್ವಸ್ತ್ರಗಳಿವೆ.