Asianet Suvarna News Asianet Suvarna News

ಚೀನಾ ಕಂಪನಿಯಿಂದ ನೌಕರರ ಮೇಲೇ ಕೊರೋನಾ ಲಸಿಕೆ ಪ್ರಯೋಗ!

ಚೀನಾ ಕಂಪನಿಯೊಂದು  ತನ್ನ ಉದ್ಯೋಗಿಗಳು ಹಾಗೂ ಉನ್ನತ ಅಧಿಕಾರಿಗಳಿಗೆ ಕೊರೋನಾ ನಿವಾರಕ ಎಂದು ಪ್ರಾಯೋಗಿಕ ಲಸಿಕೆಯ ಚುಚ್ಚುಮದ್ದು ನೀಡಿದೆ. ಈ ಮೂಲಕ ಲಸಿಕೆ ಅತ್ಯಂತ ಸುರಕ್ಷಿತ ಎಂದು ಮನದಟ್ಟುವ ಮಾಡುವ ಯತ್ನಕ್ಕೆ ಕೈಹಾಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

China firm uses workers to COVID 19 pre test vaccine in global race
Author
Beijing, First Published Jul 17, 2020, 7:15 AM IST

ಬೀಜಿಂಗ್‌(ಜು.17): ಕೊರೋನಾ ವೈರಸ್‌ಗೆ ಲಸಿಕೆ ಕಂಡು ಹಿಡಿಯಲು ಜಾಗತಿಕ ‘ಸ್ಪರ್ಧೆ’ ಏರ್ಪಟ್ಟಿರುವ ನಡುವೆಯೇ, ಚೀನಾದ ಸರ್ಕಾರಿ ಸ್ವಾಮ್ಯದ ಕಂಪನಿಯೊಂದು ಸರ್ಕಾರದ ಅನುಮತಿ ದೊರಕುವ ಮುನ್ನವೇ ಇದರ ಪ್ರಯೋಗ ಆರಂಭಿಸಿದೆ. 

ಅದರಲ್ಲೂ ಈ ಕಂಪನಿಯು ತನ್ನ ಉದ್ಯೋಗಿಗಳು ಹಾಗೂ ಉನ್ನತ ಅಧಿಕಾರಿಗಳಿಗೆ ಪ್ರಾಯೋಗಿಕ ಲಸಿಕೆಯ ಚುಚ್ಚುಮದ್ದು ನೀಡಿದೆ. ಈ ಮೂಲಕ ಲಸಿಕೆ ಅತ್ಯಂತ ಸುರಕ್ಷಿತ ಎಂದು ಮನದಟ್ಟುವ ಮಾಡುವ ಯತ್ನಕ್ಕೆ ಕೈಹಾಕಿದೆ.

50 ಸಾವಿರ ದಾಟಿದ ಕರ್ನಾಟಕ, ಬೆಂಗಳೂರು ಗಂಡಾಂತರ

ಸಿನೋ ಫಾರ್ಮ್ ಎಂಬ ಕಂಪನಿ, ನೌಕರರಿಗೆ ಲಸಿಕೆ ನೀಡಿಕೆಯ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿದೆ. ಇದರ ಬಗ್ಗೆ ಭಾರೀ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ವಿಜಯದ ಖಡ್ಗಕ್ಕೆ ಸಹಾಯದ ಹಸ್ತ ಎಂದು ಸ್ವತಃ ಕಂಪನಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಟೀಕೆ: ಈ ನಡುವೆ, ಸಿನೋ ಫಾರ್ಮ್ ಕಂಪನಿಯು ತನ್ನ ನೌಕರರ ಮೇಲೆಯೇ ಕೊರೋನಾ ಲಸಿಕೆ ಪ್ರಯೋಗಿಸುತ್ತಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇಂತಹ ಕ್ರಮಗಳಿಂದ ಉದ್ಯೋಗಿಗಳ ಮೇಲೆ ಒತ್ತಡ ಸೃಷ್ಟಿ ಆಗುತ್ತದೆ. ಸ್ವಯಂಪ್ರೇರಿತರಾಗಿ ಲಸಿಕೆಯ ಪ್ರಯೋಗಕ್ಕೆ ಒಳಗಾಗಬೇಕು ಎಂಬ ತತ್ವಕ್ಕೆ ಭಂಗ ಬಂದಂತಾಗುತ್ತದೆ ಎಂದು ಅಮೆರಿಕದ ವೈದ್ಯಕೀಯ ತಜ್ಞರು ಆಕ್ಷೇಪಿಸಿದ್ದಾರೆ.

Follow Us:
Download App:
  • android
  • ios