Asianet Suvarna News Asianet Suvarna News

50  ಸಾವಿರ ದಾಟಿದ ಕರ್ನಾಟಕ, ಬೆಂಗಳೂರು ಗಂಡಾಂತರ

ಕರ್ನಾಟಕದಲ್ಲಿ ಕೊರೋನಾ ಆರ್ಭಟ/ ಗುರುವಾರದ ಲೆಕ್ಕ ನಾಲ್ಕು ಸಾವಿರ ದಾಟಿತು/ ಬೆಂಗಳೂರಿನಲ್ಲಿ ಬರೋಬ್ಬರಿ 2344 ಪ್ರಕರಣಗಳು/ ಕೊರೋನಾ ನಿಲ್ಲುವ ಯಾವ ಲಕ್ಷಣ ಕಾಣುತ್ತಿಲ್ಲ

104 deaths and 4169 new covid 19 cases reported in Karnataka on July 16
Author
Bengaluru, First Published Jul 16, 2020, 11:13 PM IST

ಬೆಂಗಳೂರು(ಜು. 16)  ಕರ್ನಾಟದಲ್ಲಿ ಕೊರೋನಾ  ಆರ್ಭಟ ನಿಲ್ಲುವ ಯಾವ ಲಕ್ಷಣಗಳು ಕಾಣುತ್ತಿಲ್ಲ.  ಗುರುವಾರ ಬರೊಬ್ಬರಿ ನಾಲ್ಕು ಸಾವಿರ ಕೇಸ್ ದಾಖಲಾಗಿದೆ. ಮಹಾಮಾರಿಗೆ 104 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಸಾವಿರ ದಾಟಿದೆ.

ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 70 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 104 ಮಂದಿ ಸಾವನ್ನಪ್ಪಿದ್ದಾರೆ.  ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 2344 ಪ್ರಕರಣಗಳು ವರದಿಯಾಗಿವೆ.

ಸಣ್ಣ ಜ್ವರ ಎಂದು ಹೇಳಿದ್ದ ಬ್ರೆಜಿಲ್ ಅಧ್ಯಕ್ಷರ ಬೆನ್ನು ಬಿಡದ ಕೊರೋನಾ

ರಾಜ್ಯದಲ್ಲಿ ಒಟ್ಟು 4169 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.   ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 51,422ಕ್ಕೆ ಏರಿಕೆಯಾಗಿದೆ. 1263 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ 19,729 ಜನರು ಚೇತರಿಸಿಕೊಂಡಿದ್ದಾರೆ.  30,655 ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 539 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಆಂಬುಲೆನ್ಸ್ ಮತ್ತು ವೈದ್ಯ ನೆರವಿನ ವಿಚಾರದಲ್ಲಿ ರಾಜ್ಯ ಸರ್ಕಾರ ಖಡಕ್ ಸೂಚನೆಯನ್ನು ರವಾನಿಸಿದೆ.  ಯಾವುದೇ ಕಾರಣಕ್ಕೂ ರೋಗಿ ಚಿಕಿತ್ಸೆ ಸಿಗದೆ ನರಳಬಾರದು ಎಂದು ಸಿಎಂ ಖಡಕ್ ಆದೇಶ ನೀಡಿದ್ದಾರೆ.

ಜಿಲ್ಲಾವಾರು ಕೊರೋನಾ ಲೆಕ್ಕ
ದಕ್ಷಿಣ ಕನ್ನಡ 238, ಧಾರವಾಡ 176, ವಿಜಯಪುರ 144, ಮೈಸೂರು 130, ಕಲಬುರಗಿ 123, ಉಡುಪಿ 113, ರಾಯಚೂರು 101, ಬೆಳಗಾವಿ 92, ಉತ್ತರ ಕನ್ನಡ 79, ಚಿಕ್ಕಬಳ್ಳಾಪುರ 77, ಬೀದರ್ 53, ಶಿವಮೊಗ್ಗ 46, ಬಳ್ಳಾರಿ 44, ಗದಗ 44, ಕೋಲಾರ 43, ಬಾಗಲಕೋಟೆ 39, ಯಾದಗಿರಿ 34, ಕೊಪ್ಪಳ 32, ಹಾಸನ 31, ಬೆಂಗಳೂರು ಗ್ರಾಮಾಂತರ 31, ಚಿಕ್ಕಮಗಳೂರು 30, ಚಿತ್ರದುರ್ಗ 21, ಹಾವೇರಿ 18, ಕೊಡಗು 18, ಚಾಮರಾಜನಗರ 16, ತುಮಕೂರು 12, ಮಂಡ್ಯ 11 ಮತ್ತು ರಾಮನಗರದಲ್ಲಿ 4 ಜನರಿಗೆ ಕೊರೋನಾ ಸೋಂಕು ದೃಢವಾಗಿದೆ.

 

 

Follow Us:
Download App:
  • android
  • ios