ಲಾಸ್‌ ಅಲ್ಟೋಸ್‌ (ಏ.19): ವಿಶ್ವಪ್ರಸಿದ್ಧ ಅಡೋಬ್‌ ಕಂಪನಿಯ ಸಹಸಂಸ್ಥಾಪಕ, ಬರಹ ಅಥವಾ ಚಿತ್ರವನ್ನು ಪೋರ್ಟೆಬಲ್‌ ಡಾಕ್ಯುಮೆಂಟ್‌ ಫಾರ್ಮೆಟ್‌ (ಪಿಡಿಎಫ್‌)ಗೆ ಪರಿವರ್ತಿಸುವ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ ಚಾರ್ಲ್ಸ್ ಚುಕ್‌ ಗೆಶ್ಕೆ (81) ಶುಕ್ರವಾರ ನಿಧನರಾದರು. ಚುಕ್‌ ಗೆಶ್ಕೆ ಅವರ ನಿಧನ ಸಂಸ್ಥೆಗೆ ತುಂಬಲಾರದ ನಷ್ಟ ಎಂದು ಅಡೋಬ್‌ ಸಿಇಒ ಶಂತನು ನಾರಾಯಣ್‌ ಸಂತಾಪ ವ್ಯಕ್ತಪಡಿಸಿದ್ದಾರೆ.

ಚುಕ್‌ ಗೆಶ್ಕೆ 1982ರಲ್ಲಿ ವಾರ್ನಾಕ್‌ ಅಡೋಬ್‌ ಸಾಫ್ಟ್‌ವೇರ್‌ ಕಂಪನಿಯನ್ನು ಸ್ಥಾಪಿಸಿದ್ದರು. ಬಳಿಕ ಅವರಿಬ್ಬರೂ ಜೊತೆಗೂಡಿ ಪಿಡಿಎಫ್‌ ಫಾರ್ಮೆಟ್‌ ಅನ್ನು 1990ರ ದಶಕದಲ್ಲಿ ಅಭಿವೃದ್ಧಿಪಡಿಸಿದ್ದರು. ಅಡೋಬ್ ಸಾಫ್ಟ್‌ವೇರ್‌ ಪಿಡಿಎಫ್‌, ಅಕ್ರೋಬಾಟ್‌, ಇಲ್ಯುಸ್ಪ್ರೇಟರ್‌, ಪ್ರೀಮಿಯರ್‌ ಪ್ರೋ ಮತ್ತು ಫೋಟೊಶಾಫ್‌ನಂತಹ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ.

ಪಿಡಿಎಫ್‌ ಸಾಫ್ಟ್‌ವೇರ್‌ ಬಂದ ಬಳಿಕ ಬರಹ ಹಾಗೂ ಚಿತ್ರಗಳನ್ನು ಪೇಪರ್‌ ಮೇಲೆ ಪ್ರಿಂಟ್‌ ಮಾಡುವುದು ಅತ್ಯಂತ ಸುಲಭವ ವಿಧಾನ ಎನಿಸಿಕೊಂಡಿತು. ಈ ಮೂಲಕ ಪಿಡಿಎಫ್‌ ಸಂವಹನ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣವಾಯಿತು.