ವೈರಲ್ ವಿಡಿಯೋದಲ್ಲಿ ಯುವತಿಯೊಬ್ಬಳು ವ್ಯಕ್ತಿಯ ಪ್ರೈವೇಟ್ ಪಾರ್ಟ್ ಸ್ಪರ್ಶಿಸಿದಾಗ ಆತನ ಹೆಂಡತಿ ರೇಗುತ್ತಾಳೆ. ಆ ಯುವತಿಗೆ ಹೊಡೆದು ಕೆಡವುತ್ತಾಳೆ, ನಂತರ ಗಂಡನಿಗೂ ಹೊಡೆಯುತ್ತಾಳೆ.
ನವದೆಹಲಿ: ಮಹಿಳೆ ತನ್ನ ಗಂಡನನ್ನು ಯಾರೊಂದಿಗೆ ಹಂಚಿಕೊಳ್ಳಲ್ಲ ಎಂಬ ಮಾತಿದೆ. ಗಂಡ ಮತ್ತು ಮಕ್ಕಳ ತಂಟೆಗೆ ಬಂದ್ರೆ ಅವರನ್ನು ರಕ್ಷಿಸಲು ಮಹಿಳೆ ಎಂಥ ಸಾಹಸಕ್ಕಾದರೂ ಮುಂದಾಗುತ್ತಾಳೆ. ಈ ರೀತಿಯ ಮಾತುಗಳಿಗೆ ಧಾರಾವಾಹಿಗಳನ್ನು ನೋಡಬಹುದಾಗಿದೆ. ನಿಜ ಜೀವನದಲ್ಲಿಯೂ ಮಹಿಳೆ ಕುಟುಂಬಕ್ಕೆ ಮೊದಲ ಆದ್ಯತೆಯನ್ನು ನೀಡುತ್ತಾಳೆ. ಕುಟುಂಬದ ರಕ್ಷಣೆಗಾಗಿ ಆಕೆಯ ಬದ್ಧತೆಯನ್ನು ಯಾರೂ ಪ್ರಶ್ನೆ ಮಾಡುವ ರೀತಿಯಾಗಿರಲ್ಲ. ಇದೇ ರೀತಿಯಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಂಗಡಿಯೊಂದರ ಸಿಸಿಟವಿ ದೃಶ್ಯ ನೋಡಿದ ನೆಟ್ಟಿಗರು, ಹೆಣ್ಮಕ್ಕಳೇ ಸ್ಟ್ರಾಂಗ್ ಎಂದು ಕಮೆಂಟ್ ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋವನ್ನು I Post Forbidden Videos (@WorldDarkWeb2) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಏಪ್ರಿಲ್ 10ರಂದು ಪೋಸ್ಟ್ ಆಗಿರುವ ವಿಡಿಯೋಗೆ ಈವರೆಗೆ 2.5 ಲಕ್ಷಕ್ಕೂ ಅಧಿಕ ವ್ಯೂವ್, 6 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ. ಈ ವಿಡಿಯೋ ನೋಡಿದ ಜನರು ಆ ವ್ಯಕ್ತಿಯ ಬಗ್ಗೆ ಕನಿಕರ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಇದೊಂದು ರಿಟೈಲ್ ಶಾಪ್‌ನ ದೃಶ್ಯಾವಳಿಯಾಗಿದ್ದು, ವಿಡಿಯೋದಲ್ಲಿ ಗಂಡ-ಹೆಂಡತಿ ಸೇರಿದಂತೆ ಹಲವರು ನಿಂತಿರುತ್ತಾರೆ. ಆ ವ್ಯಕ್ತಿ ಪಾನೀಯ ಕುಡಿಯುತ್ತಾ ಪತ್ನಿ ಪಕ್ಕದಲ್ಲಿಯೇ ನಿಂತಿರುತ್ತಾನೆ. ಈ ವೇಳೆ ಅಲ್ಲಿಗೆ ಬಂದ ಯುವತಿ ಆ ವ್ಯಕ್ತಿಗೆ ಡಿಕ್ಕಿ ಹೊಡೆಯುತ್ತಾಳೆ. ಇಷ್ಟಕ್ಕೆ ಸುಮ್ಮನಾಗದ ಯುವತಿ, ಆ ವ್ಯಕ್ತಿಯ ಪ್ರೈವೇಟ್ ಸ್ಪರ್ಶಿಸುತ್ತಾಳೆ. ಇದು ಆ ವ್ಯಕ್ತಿಯ ಪತ್ನಿ ಗಮನಕ್ಕೆ ಬರುತ್ತದೆ.
ಇದನ್ನೂ ಓದಿ: ಟಚ್ ಆಯ್ತು ಅಂತ ಹೊಡೆಯಲು ಬಂದ ಕಾರು ಚಾಲಕ: ತಳ್ಳುಗಾಡಿಯವನ ಪವರ್‌ಫುಲ್ ಪಂಚ್‌ಗೆ ಶಾಕ್
ಕೂಡಲೇ ರಣಚಂಡಿಯ ಅವತಾರ ತಾಳಿದ ಮಹಿಳೆ, ಯುವತಿಯನ್ನು ಎಳೆದು ಹಿಂದಕ್ಕೆ ಬೀಳಿಸುತ್ತಾಳೆ. ನಂತರ ಇದನ್ನು ನೋಡುತ್ತಿದ್ದ ಗಂಡನ ಕಪಾಳಕ್ಕೂ ಹೊಡೆಯುತ್ತಾಳೆ. ಅಲ್ಲಿದ್ದವರು ಯುವತಿಗೆ ಸಹಾಯ ಮಾಡುತ್ತಾರೆ. ಕೆಳಗೆ ಬಿದ್ದಿದ್ದ ಯುವತಿ ಎದ್ದು ನಿಲ್ಲುತ್ತಿದ್ದಂತೆ ಮತ್ತೆ ಆಕೆಗೆ ಹೊಡೆಯುತ್ತಾಳೆ. ಸುತ್ತಲಿನ ಜನರು ಒಂದು ಕ್ಷಣ ಏನಾಗ್ತಿದೆ ಎಂದು ಆಶ್ಚರ್ಯದಿಂದ ನೋಡುತ್ತಿರೋದನ್ನ ಗಮನಿಸಬಹುದು.
ಗಂಡನ ಬಗ್ಗೆ ವ್ಯಕ್ತವಾಯ್ತು ಕನಿಕರ!
ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು ಯಾವುದೇ ತಪ್ಪು ಮಾಡದೇ ಪತ್ನಿಯಿಂದ ಕಪಾಳಕ್ಕೆ ಏಟು ತಿಂದ ಗಂಡನ ಬಗ್ಗೆ ಕನಿಕರ ವ್ಯಕ್ತಪಡಿಸಿದ್ದಾರೆ. ಪಾಪ, ಆತ ತನ್ನ ಪಾಡಿಗೆ ಏನು ಕುಡಿಯುತ್ತ ನಿಂತಿದ್ದನು. ಅವನೇನು ಆಕೆಗೆ ತನ್ನ ಬಳಿಗೆ ಬರುವಂತೆ ಹೇಳಿರಲಿಲ್ಲ. ಇಬ್ಬರ ಜಗಳದಲ್ಲಿ ಮಾತ್ರ ಗಂಡನಿಗೆ ಒಂದು ಏಟು ಬಿದ್ದಿದೆ ಎಂದು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವ ಕೆಲವರು, ಆತ ಇದನ್ನು ವಿರೋಧಿಸಬಹುದಿತ್ತು. ಆದರೆ ಅವನು ಹಾಗೆ ಮಾಡಲಿಲ್ಲ ಎಂದಿದ್ದಾರೆ.
ಪುರುಷರ ರಕ್ಷಣೆಗಾಗಿ ಸೂಕ್ತ ಕಾನೂನು ಬೇಕೆಂದ ಗಂಡಸರು!
ಒಂದು ವೇಳೆ ಇದೇ ಕೆಲಸವನ್ನು ಪುರುಷ ಮಾಡಿದ್ರೆ ಅಲ್ಲೋಲ ಕಲ್ಲೋಲವಾಗುತ್ತಿತ್ತು. ಹಾಗಾಗಿ ಪುರುಷರ ರಕ್ಷಣೆಗಾಗಿ ಕೆಲವೊಂದು ಕಾನೂನುಗಳನ್ನು ತರಲು ಸೂಕ್ತ ಸಮಯ ಬಂದಿದೆ. ಒಟ್ಟಿನಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ಘಟನೆ ಎಲ್ಲಿಯದ್ದು ಎಂಬುವುದು ತಿಳಿದು ಬಂದಿಲ್ಲ. ಕೆಲವರು ಸೌಥ್ ಆಫ್ರಿಕಾ ಅಂದ್ರೆ ಒಂದಿಷ್ಟು ಥೈಲ್ಯಾಂಡ್ ಇರಬಹುದು ಎಂದು ಊಹಿಸಿದ್ದಾರೆ.
ಇದನ್ನೂ ಓದಿ: ಆತ್ಮಗಳ ಜೊತೆಯೂ ಮಾತಾಡೋ ಏಕೈಕ ನಟಿ 'ನಾನಿನ್ನ ಬಿಡಲಾರೆ' ದುರ್ಗಾ! ಅಳಿಲಿನ ಜೊತೆ ವಿಡಿಯೋ
