Asianet Suvarna News Asianet Suvarna News

ಉಕ್ರೇನ್ ಪ್ರತಿಜ್ಞೆಗೆ ಸೇಡು, ಬಂಧಿತ ಉಕ್ರೇನ್ ಯೋಧನನ್ನು ಗುಂಡಿಕ್ಕಿ ಕೊಂದ ರಷ್ಯಾ ಪಡೆ!

ರಷ್ಯಾದ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಉಕ್ರೇನ್ ಮಂಗಳವಾರ ಪ್ರತಿಜ್ಞೆ ಮಾಡಿತ್ತು. ಇದರ ಬೆನ್ನಲ್ಲೇ ಬಂಧಿತ ಉಕ್ರೇನ್ ಸೈನಿಕನೋರ್ವನನ್ನು  ರಷ್ಯಾ ಸೇನೆ ಅತೀ ಸಮೀಪದಿಂದ ಗುಂಡಿಕ್ಕಿ ಕೊಂದಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Captive Ukraine Soldier Killed By Russia, Kyiv Vows Revenge gow
Author
First Published Mar 9, 2023, 3:59 PM IST

ಕೀವ್ (ಮಾ.9) : ರಷ್ಯಾದ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಉಕ್ರೇನ್ ಮಂಗಳವಾರ ಪ್ರತಿಜ್ಞೆ ಮಾಡಿತ್ತು. ಇದರ ಬೆನ್ನಲ್ಲೇ ಬಂಧಿತ ಉಕ್ರೇನ್ ಸೈನಿಕನೋರ್ವನನ್ನು  ರಷ್ಯಾ ಸೇನೆ ಅತೀ ಸಮೀಪದಿಂದ ಗುಂಡಿಕ್ಕಿ ಕೊಂದಿದ್ದು, ಅದರ ವೀಡಿಯೊ ವೈರಲ್ ಆಗಿದೆ. ಮಾತ್ರವಲ್ಲ ಈ ಘಟನೆಯನ್ನು ವಿಶ್ವಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ಅಂತರಾಷ್ಟ್ರೀಯ ಸಮುದಾಯದಿಂದ ಕೂಡ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

12 ಸೆಕುಂಡುಗಳ ಈ ವಿಡಿಯೋದಲ್ಲಿ ಉಕ್ರೇನ್ ಯೋಧನೊಬ್ಬ  ಕಂದಕದಲ್ಲಿ ನಿಂತು ದೂಮಪಾನ ಮಾಡುತ್ತಿರುವಾಗ ರಷ್ಯಾ ಸೈನಿಕರು ಪ್ರಶ್ನಿಸುತ್ತಿದ್ದಾರೆ. ಈ ವೇಳೆ ಉಕ್ರೇನ್ ಯೋಧ `ಉಕ್ರೇನ್‌ ವೈಭವ ಚಿರಾಯುವಾಗಲಿ' ಎಂದು ಘೋಷಣೆ ಕೂಗಿದ್ದಾನೆ. ತಕ್ಷಣ ಆತನ ತಲೆಗೆ ಗನ್ ಪಾಯಿಂಟ್ ಇಟ್ಟು  ಹತ್ಯೆ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆ ಬಳಿಕ ಕೈವ್‌ನಲ್ಲಿರುವ ಉಕ್ರೇನ್ ಅಧಿಕಾರಿಗಳು ರಷ್ಯಾದ ಪಡೆಗಳನ್ನು ದೂಷಿಸಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಆಧಾರದಲ್ಲಿ ಈ ವೀಡಿಯೊ ಅಧಿಕೃತವಾಗಿರಬಹುದೆಂದು ತೀರ್ಮಾನಿಸಿರುವುದಾಗಿ ವಿಶ್ವಸಂಸ್ಥೆ ಮಾನವಹಕ್ಕುಗಳ ವಿಭಾಗದ ವಕ್ತಾರೆ ಹೇಳಿಕೆ ನೀಡಿದ್ದಾರೆ.

ದ್ವಿತೀಯ ವಿಶ್ವಯುದ್ಧದ ಬಳಿಕ ಅಂಗೀಕರಿಸಿದ್ದ ಸಾರ್ವತ್ರಿಕ ಮಾನವಹಕ್ಕುಗಳ ನಿರ್ಣಯಕ್ಕೆ ಇದು ತದ್ವಿರುದ್ಧವಾಗಿದೆ ಎಂದು ವಿಶ್ವಸಂಸ್ಥೆ ಮಾನವಹಕ್ಕುಗಳ ಏಜೆನ್ಸಿ ಮುಖ್ಯಸ್ಥ ವೋಕರ್ ಟರ್ಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.. ಉಕ್ರೇನಿ ಸೈನಿಕನ ಹತ್ಯೆಯ ಇತ್ತೀಚಿನ ವೀಡಿಯೊ ಅತ್ಯಂತ ಕಳವಳಕ್ಕೆ ಕಾರಣವಾಗಿದ್ದು ಯುದ್ಧದ ನಿಯಮವನ್ನು ಗೌರವಿಸಬೇಕು ಎಂಬುದನ್ನು ಮತ್ತೊಮ್ಮೆ ಜ್ಞಾಪಿಸುತ್ತದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಪ್ರತಿಕ್ರಿಯಿಸಿದ್ದಾರೆ.

ರಷ್ಯಾದ ಈ ಆಕ್ರಮಣದ ವಿರುದ್ಧ ಅನೇಕ ಉಕ್ರೇನಿಯನ್ನರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಹತ್ಯೆಯಾದ ಯೋಧನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಘಟನೆಯನ್ನು ಖಂಡಿಸಿದ್ದಾರೆ.

ಚೀನಾ ಮನವಿಗೆ ಡೋಂಟ್‌ ಕೇರ್‌; ಭಾರತಕ್ಕೆ ಹೆಚ್ಚು ತೈಲ ಪೂರೈಕೆ ಮಾಡುತ್ತಿರುವ ರಷ್ಯಾ: ಕಾರಣ ಹೀಗಿದೆ..

ರಷ್ಯಾ ಮಿಲಿಟರಿಯಿಂದ ಹತ್ಯೆಯಾದ ಉಕ್ರೇನಿಯನ್  ಟೈಮೊಫಿ ಮೈಕೊಲಾಯೊವಿಚ್ ಶಾದುರಾ ಎಂದು ಗುರುತಿಸಲಾಗಿದೆ. ಗುಂಡುಗಳು ಯೋಧನ ದೇಹಕ್ಕೆ ತಗುಲಿ ಆತ ನೆಲಕ್ಕೆ ಬೀಳುತ್ತಾನೆ. ಆಗ ರಷ್ಯನ್ ಭಾಷೆಯಲ್ಲಿ “ಸಾಯಿರಿ, ಬಿಚ್” ಎಂದು ಹೇಳುವ ಧ್ವನಿ  ವಿಡಿಯೋದಲ್ಲಿ ಉಲ್ಲೇಖವಿದೆ.

ರಷ್ಯಾ ಎಷ್ಟು ವೇಗವಾಗಿ ಟ್ಯಾಂಕ್ ಪಡೆಗಳನ್ನು ಸಜ್ಜುಗೊಳಿಸಬಲ್ಲದು?

ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಈ ಘಟನೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಉಕ್ರೇನ್‌ ವೈಭವ ಚಿರಾಯುವಾಗಲಿ ಎಂದ ಯೋಧನನ್ನು ಕೊಂದಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ಅವರ ಮಾತುಗಳಿಗೆ ಪ್ರತಿಕ್ರಿಯಿಸಬೇಕೆಂದು ನಾನು ಬಯಸುತ್ತೇನೆ. ನಾಯಕನಿಗೆ ಮಹಿಮೆ! ವೀರರಿಗೆ ಮಹಿಮೆ! ಉಕ್ರೇನ್‌ಗೆ ಮಹಿಮೆ! ಮತ್ತು ನಾವು ಕೊಲೆಗಾರರನ್ನು ಕಂಡುಹಿಡಿಯುತ್ತೇವೆ ಉಕ್ರೇನ್‌ಗೆ ಸ್ವಾತಂತ್ರ್ಯ ನೀಡಿದ ಪ್ರತಿಯೊಬ್ಬರ ಸಾಧನೆಯನ್ನು ಉಕ್ರೇನ್ ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.

Follow Us:
Download App:
  • android
  • ios