ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಭಾರತದ ಪ್ರಧಾನಿ ಮೋದಿಗೆ ಕೆನಡಾ ಪ್ರಧಾನಿ ಆಹ್ವಾನ ನೀಡಿದ್ದಾರೆ. ಆದರೆ ಈ ಅಹ್ವಾನದಿಂದ ಕೆನಡಾದಲ್ಲಿ ಭಾರಿ ಆಕ್ರೋಶ ಭುಗಿಲೆದ್ದಿದೆ. ಮೋದಿ ಆಹ್ವಾನಿಸಿದ ಕೆನಡಾ ಪ್ರಧಾನಿ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಲ್ಬರ್ಟಾ(ಜೂ.06) ಜಿ7 ಶೃಂಗಸಭೆಯೆ ತಯಾರಿಗಳು ಅಂತಿಮಗೊಡಿದೆ. ಜೂನ್ 15 ರಿಂದ 17ರ ವರೆಗೆ ಕೆನಡಾ ಅಲ್ಬರ್ಟಾ ಪ್ರಾಂತ್ಯದಲ್ಲಿ ಜಿ7 ಶೃಂಗಸಭೆ ಆಯೋಜಿಸಲಾಗಿದೆ. ಭಾರತ ಜಿ7 ಸದಸ್ಯ ರಾಷ್ಟ್ರವಲ್ಲ. ಆದರೂ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಆಹ್ವಾನ ನೀಡಿದ್ದಾರೆ. ಆದರೆ ಮಾರ್ಕ್ ಕಾರ್ನಿ ನೀಡಿದ ಆಹ್ವಾನ ಇದೀಗ ಕೆನಾಡದಲ್ಲಿ ಕೆಲ ಸಮುದಾಯಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಿಜ್ಜರ್ ಹತ್ಯೆಯಲ್ಲಿ ಭಾರತ ಹಾಗೂ ಪ್ರಧಾನಿ ಮೋದಿ ಕೈವಾಡ ಆರೋಪನ್ನು ಕೆನಾಡ ಮಾಡಿದೆ. ಹೀಗಿರುವಾಗ ಸದಸ್ಯ ರಾಷ್ಟ್ರವಲ್ಲದಿದ್ದರೂ ಮೋದಿಯನ್ನು ಜಿ7 ಶೃಂಗಸಭೆಗೆ ಆಹ್ವಾನಿಸಿದ್ದು ಯಾಕೆ ಎಂದು ಕನೆಡಾದಲ್ಲಿ ಭಾರಿ ಕೆಲ ಸಿಖ್ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ.
ಗ್ಯಾಂಗ್‌ಸ್ಟರ್ ನಿಜ್ಜರ್ ಹತ್ಯೆಯನ್ನು ಭಾರತ ಸುಸೂತ್ರವಾಗಿ ಮಾಡಿದೆ ಎಂದು ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೋ ಗಂಭೀರ ಆರೋಪ ಮಾಡಿದ್ದರು. ನಿಜ್ಜರ್ ಹತ್ಯೆ ಕುರಿತು ತನಿಖೆ ನಡೆಯುತ್ತಿದೆ. ನಿಜ್ಜರ್ ಹತ್ಯೆಯಲ್ಲಿ ಆರೋಪಿಗಳಾಗಿರುವ ಭಾರತವನ್ನು ಕೆನಡಾದಲ್ಲಿ ನಡೆಯುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿರುವುದು ತಪ್ಪು ಎಂದು ಕೆಲ ಗುಂಪು ಹಾಗೂ ಸಮುದಾಯಗಳು ಆಕ್ರೋಶ ಹೊರಹಾಕಿದೆ.
ವಿರೋಧಕ್ಕೆ ಉತ್ತರ ನೀಡಿದ ಮಾರ್ಕ್ ಕಾರ್ನಿ
ಪ್ರಧಾನಿ ಮೋದಿಗೆ ಜಿ7 ಶೃಂಗಸಭೆಗೆ ಆಹ್ವಾನ ನೀಡಿದ ಕ್ರಮ ಕೆನಡಾದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದ್ದತೆ ಪ್ರಧಾನಿ ಮಾರ್ಕ್ ಕಾರ್ನಿ ಸ್ಪಷ್ಟನೆ ನೀಡಿದ್ದಾರೆ. ಭಾರತ ಜಿ7 ಸದಸ್ಯ ರಾಷ್ಟ್ರವಲ್ಲ. ಆದರೂ ಭಾರತಕ್ಕೆ ಆಹ್ವಾನ ನೀಡಿದ್ದೇವೆ. ಇದಕ್ಕೆ ಮುಖ್ಯ ಕಾರಣ, ಜಾಗತಿಕ ಮಟ್ಟದಲ್ಲಿ ಭಾರತದ ಮಹತ್ವ. ಭಾರತ 5ನೇ ಅತೀ ದೊಡ್ಡ ಆರ್ಥಿಕ ರಾಷ್ಟ. ಅತೀ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರ. ಹೀಗಾಗಿ ಭಾರತದ ಶೃಂಗಸಭೆಯಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲಿದೆ. ಈ ಶೃಂಗಸಭೆಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಬಳಕೆ, ಇಂಧನ ಶಕ್ತಿ ಬಳಕೆ, ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸೇರಿದಂತೆ ತಂತ್ರಜ್ಞಾನಗಳ ಬಳಕೆ ಸೇರಿದಂತೆ ಹಲವು ಕ್ಷೇತ್ರಗಳ ಕುರಿತು ಮಹತ್ವದ ಚರ್ಚೆಯಾಗಲಿದೆ ಎಂದು ಮಾರ್ಕ್ ಕಾರ್ನಿ ಹೇಳಿದ್ದಾರೆ.
ನಿಜ್ಜರ್ ಹತ್ಯೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಮಾರ್ಕ್ ಕಾರ್ನಿ
ಭಾರತದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತು ಪ್ರತಿಕ್ರಿಯಿಸಲು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ನಿರಾಕರಿಸಿದ್ದಾರೆ. ನಿಜ್ಜರ್ ಹತ್ಯೆ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದಿದ್ದಾರೆ.
ಕೆನಾಡ ಆಹ್ವಾನ ಖಚಿತಪಡಿಸಿದ ಪ್ರಧಾನಿ ನರೇಂದ್ರ ಮೋದಿ
ಜಿ7 ಶೃಂಗಸಭೆಗೆ ಕೆನಾಡ ಆಹ್ವಾನ ನೀಡಿರುವುದನ್ನು ಪ್ರಧಾನಿ ಮೋದಿ ಸೋಶಿಯಲ್ ಮೀಡಿಯಾ ಮೂಲಕ ಖಚಿತಪಡಿಸಿದ್ದಾರೆ. ಭಾರತ ಹಾಗೂ ಕೆನಾಡ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುವ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ಮೌಲ್ಯ, ಉಭಯ ರಾಷ್ಟ್ರಗಳ ನಡುವಿನ ಜನರ ಸಂಪರ್ಕ ಹಾಗೂ ಬಾಂಧವ್ಯ, ಗೌರವ ಈ ಸಭೆಯಿಂದ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಮೋದಿ ಬಣ್ಣಿಸಿದ್ದಾರೆ.
