Asianet Suvarna News Asianet Suvarna News

ಒಂಟೆ ಮೂತ್ರ ನೀಡುವ ಕೆಫೆ ಆರಂಭ!

ಕಾಫಿ ಹಾಗೂ ಟೀಗಾಗಿ ವಿವಿಧ ಕೆಫೆಗಳಿದ್ದು, ಸಾಕಷ್ಟು ಕಾಫಿ ಟೀ ಪ್ರಿಯರಿಗೆ ಇಲ್ಲಿ ತರಹೇವಾರಿ ಪಾನಿಯಗಳು ಸಿಗುತ್ತದೆ. ಆದರೆ ಒಂಟೆ ಮೂತ್ರ ನೀಡುವ ಕೆಫೆಯೊಂದನ್ನು ಆರಂಭ ಮಾಡಲಾಗಿದೆ. 

Camel Urine Cafe Begins In Saudi Arabia snr
Author
Bengaluru, First Published Feb 6, 2021, 11:01 AM IST

ರಿಯಾದ್ (ಫೆ.06):  ಕೆಫೆಯಲ್ಲಿ ರುಚಿಯಾದ, ತರಹೇವಾರಿ ಕಾಫಿ ಸಿಗುತ್ತದೆ. ಆದರೆ ಸೌದಿ ಅರೇಬಿಯಾದಲ್ಲಿ ಒಂಟೆಯ ಮೂತ್ರ ವಿತರಿಸುವ ವಿಶೇಷವಾದ ಕೆಫೆ ತೆರೆಯಲಾಗಿದೆಯಂತೆ. 

ಹೀಗೊಂದು ವಿಡಿಯೋ ವೈರಲ್‌ ಆಗಿದೆ. ಅದನ್ನು ದೇಶದ ಮೊದಲ ‘ಇಸ್ಲಾಮಿಕ್‌ ಒಂಟೆ ಮೂತ್ರದ ವಿಶೇಷ ಕೆಫೆ’ ಎಂದೇ ಕರೆಯಲಾಗಿದೆ. 

ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮರುಭೂಮಿಯಲ್ಲಿ ನಿಂತು ಗಡ್ಡಧಾರಿಯಾದ ಹಲವು ವ್ಯಕ್ತಿಗಳಿಗೆ ಒಂಟೆ ಮೂತ್ರವನ್ನು ವಿತರಿಸುತ್ತಿರುವ ದೃಶ್ಯವಿದೆ. 

20 ಮಿಲಿಯನ್ ಫಾಲೋವರ್ಸ್ ಸಿಕ್ಕಿದ್ದಕ್ಕೆ ಒಂಟೆ ಏರಿ ಕೂತ ನಟಿ, ನೋರಾ ಖುಷ್ ..

ಆದರೆ ಈ ವಿಡಿಯೋದ ಸತ್ಯಾಸತ್ಯತೆ ಇನ್ನೂ ತಿಳಿದುಬಂದಿಲ್ಲ. ಆದರೆ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಇದು ಧರ್ಮವೊಂದಕ್ಕೆ ಮಾಡಿದ ಅಪಚಾರ ಎಂದು ನೆಟ್ಟಿಗರು ಗರಂ ಆಗಿದ್ದಾರೆ.

 

Follow Us:
Download App:
  • android
  • ios