Asianet Suvarna News Asianet Suvarna News

ಥೂ ಇವೆನೆಂಥಾ ನೀಚ ವಿಕೃತಕಾಮಿ: ವನ್ಯಜೀವಿ ತಜ್ಞನಿಂದಲೇ 40ಕ್ಕೂ ಹೆಚ್ಚು ನಾಯಿಗಳ ಅತ್ಯಾಚಾರವೆಸಗಿ ಹತ್ಯೆ

40ಕ್ಕೂ ಸಾಕುನಾಯಿಗಳ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಅವುಗಳ ಮೇಲೆ ದೌರ್ಜನ್ಯವೆಸಗಿ ಹಿಂಸೆ ನೀಡಿ ಹತ್ಯೆ ಮಾಡಿದ ಅಮಾನವೀಯ ಆರೋಪವೊಂದು ಖ್ಯಾತ ಬ್ರಿಟಿಷ್ ವನ್ಯಜೀವಿ ತಜ್ಞ ಆಡಮ್ ಬ್ರಿಟ್ಟೊನ್ ವಿರುದ್ಧ ಕೇಳಿ ಬಂದಿದ್ದು, ಪ್ರಾಣಿ ಪ್ರಿಯರನ್ನು ಬೆಚ್ಚಿ ಬೀಳಿಸಿದೆ.

British crocodile expert Renowned wildlife expert Adam Britton tortured, sexually used murdered more than 40 dogs
Author
First Published Sep 27, 2023, 10:26 AM IST

ಬ್ರಿಟನ್‌: 40ಕ್ಕೂ ಸಾಕುನಾಯಿಗಳ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಅವುಗಳ ಮೇಲೆ ದೌರ್ಜನ್ಯವೆಸಗಿ ಹಿಂಸೆ ನೀಡಿ ಹತ್ಯೆ ಮಾಡಿದ ಅಮಾನವೀಯ ಆರೋಪವೊಂದು ಖ್ಯಾತ ಬ್ರಿಟಿಷ್ ವನ್ಯಜೀವಿ ತಜ್ಞ ಆಡಮ್ ಬ್ರಿಟ್ಟೊನ್ ವಿರುದ್ಧ ಕೇಳಿ ಬಂದಿದ್ದು, ಪ್ರಾಣಿ ಪ್ರಿಯರನ್ನು ಬೆಚ್ಚಿ ಬೀಳಿಸಿದೆ. ಈತ ಮೊಸಳೆಗಳ ತಜ್ಞನಾಗಿದ್ದು, ಬ್ರಿಟಿಷ್‌ ಮೂಲದ ಈತ ಸರ್ ಡೇವಿಡ್ ಅಟೆನ್‌ಬರೋ (Sir David Attenborough) ಅವರೊಂದಿಗೆ ಕೆಲಸ ಮಾಡಿದ್ದ, ಅಲ್ಲದೇ  ಬಿಬಿಸಿಯೊಂದಿಗೆ ಹಲವು ವನ್ಯಜೀವಕ್ಕೆ ಸಂಬಂಧಿಸಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಹೆಸರಾಂತ ವನ್ಯಜೀವಿ ತಜ್ಞ ಎಂಬ ಖ್ಯಾತಿಯನ್ನು ಗಳಿಸಿದ್ದ. ಆದರೆ ಈತನ ಈ ಭೀಭತ್ಸ ಕೃತ್ಯ  ತಿಳಿದ ನಂತರ ಈತ ಪ್ರಾಣಿಪ್ರಿಯ ಅಲ್ಲ, ಪ್ರಾಣಿ ಪೀಡಕ ಎಂಬುದು ಜಗತ್ತಿಗೆ ತಿಳಿದಿದ್ದು, ಪ್ರಾಣಿ ಪ್ರಿಯರು ಶಾಕ್‌ಗೆ ಒಳಗಾಗಿದ್ದಾರೆ. 

ಪುತ್ರಿಯ ಕಾಲೇಜು ಕಳ್ಳಾಟ ಅರಿತ ಹೆತ್ತಮ್ಮನ 30 ಬಾರಿ ಇರಿದು ಕೊಂದ ಮಗಳು...

ಉತ್ತರ ಆಸ್ಟ್ರೇಲಿಯಾದ ಉಷ್ಣವಲಯದ ಪ್ರದೇಶಗಳಲ್ಲಿ ವಾಸಿಸುವ ದೈತ್ಯ ಪರಭಕ್ಷಕ ಪ್ರಾಣಿಯಾದ ಉಪ್ಪುನೀರಿನ ಮೊಸಳೆಗಳ ಬಗ್ಗೆ ಈತ ಹೆಚ್ಚಿನ ಆಸಕ್ತಿ ಹೊಂದಿದ್ದ. ಇದೇ ಕಾರಣಕ್ಕೆ ಬ್ರಿಟನ್‌ ತೊರೆದ ಆಡಮ್ ಆಸ್ಟ್ರೇಲಿಯಾಕ್ಕೆ ತೆರಳಿದ್ದ. ಆಸ್ಟ್ರೇಲಿಯಾದ ಡಾರ್ವಿನ್‌ನಲ್ಲಿ ನೆಲೆ ಕಂಡಿದ್ದ ಈತ ವನ್ಯಜೀವಿಗಳಿಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ಬರೆದಿದ್ದಾನೆ. ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾನೆ. ಬಿಬಿಸಿ ಹಾಗೂ ನ್ಯಾಷನಲ್ ಜಿಯಾಗ್ರಾಪಿಕ್ ಚಾನೆಲ್‌ನ ಜೊತೆಗೂಡಿ ಹಲವು ಪರಿಸರಕ್ಕೆ ಸಂಬಂಧಿಸಿದ ಡಾಕ್ಯುಮೆಂಟ್‌ಗಳನ್ನು ಸಿದ್ಧಪಡಿಸಿದ್ದಾನೆ. ಇದರ ಜೊತೆಗೆ ಆತ ಅರ್ಧ ಟನ್ ತೂಗುವ 16 ಅಡಿ ಉದ್ದದ ಉಪ್ಪು ನೀರಿನ ಮೊಸಳೆಯನ್ನು ತನ್ನೊಂದಿಗೆ ಸಾಕುತ್ತಿದ್ದ. 

ಸದ್ದಿಲ್ಲದೇ ಅಮೆರಿಕಾ ಬಾಹ್ಯಾಕಾಶ ಸಂಸ್ಥೆಯ ದೊಡ್ಡ ಸಾಧನೆ: ಕ್ಷುದ್ರಗ್ರಹದ ಮಣ್ಣು ತಂದ ನಾಸಾ

ಇಂತಹ ಆಡಮ್ ಬ್ರಿಟನ್‌ ಈಗ ತನ್ನ 51ನೇ ವಯಸ್ಸಿನಲ್ಲಿ ಪ್ರಾಣಿಗಳ ಮೇಲೆ ಹಿಂಸಾಚಾರ, ಅತ್ಯಾಚಾರ, ಕೊಲೆ ಚಿತ್ರಹಿಂಸೆಗೆ ಸಂಬಂಧಿಸಿ 60 ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.  ಆಸ್ಟ್ರೇಲಿಯಾದ ಉತ್ತರ ಪ್ರದೇಶದ (Northern Territory) ಸುಪ್ರೀಂಕೋರ್ಟ್‌ (Supreme Court) ಮುಂದೆ ಈತ ತನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಇದರಲ್ಲಿ ಶ್ವಾನಗಳ ಮೇಲೆ ಅತ್ಯಾಚಾರ ಹಾಗೂ ಮಕ್ಕಳ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಚಿತ್ರಣಗಳನ್ನು ಶೇರ್ ಮಾಡಿದ ಅಪರಾಧವೂ ಇದೆ. 

ಈತನ ವಿರುದ್ಧದ ಆರೋಪಗಳು ಭಯಾನಕವಾಗಿದ್ದು, ಕೃತ್ಯವೆಸಗಿದ್ದಕ್ಕೆ  ಸಿಕ್ಕಿರುವ ಸಾಕ್ಷ್ಯಗಳು ಆಘಾತಕಾರಿಯಾಗಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಮೈಕೆಲ್ ಗ್ರಾಂಟ್ (Chief Justice Michael Grant) ಹೇಳಿದ್ದಾರೆ.

18ರ ಹುಡುಗನಾಗಲು ಹೊರಟಿರುವ 46ರ ಹರೆಯದ ಉದ್ಯಮಿ ಬ್ರಿಯಾನ್ ಲೈಫ್‌ಸ್ಟೈಲ್ ಹೇಗಿದೆ ನೋಡಿ?

ಪಶ್ಚಿಮ ಯಾರ್ಕ್‌ಷೈರ್ ಮೂಲದ ಆಡಮ್ ಬ್ರಿಟನ್ ಅವರನ್ನು ಕಳೆದ ವರ್ಷ ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು. ಅವರ ಗುರುತನ್ನು ಇಲ್ಲಿಯವರೆಗೆ ಮರೆ ಮಾಡಲಾಗಿತ್ತು. ಈ ವನ್ಯಜೀವಿ ತಜ್ಞ ಪ್ರಾಣಿಗಳಲ್ಲಿ, ವಿಶೇಷವಾಗಿ ನಾಯಿಗಳಲ್ಲಿ ದ್ವೇಷದಿಂದ ಕೂಡಿದ ಲೈಂಗಿಕ ಆಸಕ್ತಿಯನ್ನು ಹೊಂದಿದ್ದಾನೆ ಮತ್ತು ಆತ ಸುಮಾರು 40 ಪ್ರಾಣಿಗಳನ್ನು ಉದ್ದೇಶಪೂರ್ವಕವಾಗಿ 2014 ರಿಂದ ವಿಚಿತ್ರವಾಗಿ ಹತ್ಯೆ ಮಾಡಲು ಆರಂಭಿಸಿದ ಎಂಬುದನ್ನು ನ್ಯಾಯಾಲಯ ಗಮನಿಸಿತ್ತು. ನಾಯಿಗಳಿಗೆ ಹಿಂಸೆ ನೀಡುವುದಕ್ಕಾಗಿಯೇ ಈತ ಮನೆಯಲ್ಲಿ ಕಂಟೈನರ್‌ ಹೊಂದಿದ್ದ, ಅದನ್ನು ಆತ ಟಾರ್ಚರ್‌ ರೂಮ್ ಎಂದು ಕರೆಯುತ್ತಿದ್ದ. ಕಳೆದ ವರ್ಷ ಡಾರ್ವಿನ್ ಬಳಿ ಈತ ವಾಸವಿದ್ದ ತೋಟದ ಮನೆಯ ಮೇಲೆ ದಾಳಿ ನಡೆಸಿದಾಗ ಅಲ್ಲಿ ಪೊಲೀಸರಿಗೆ ಕಂಪ್ಯೂಟರ್‌ಗಳು, ಕ್ಯಾಮೆರಾಗಳು, ಬಾಹ್ಯ ಹಾರ್ಡ್ ಡ್ರೈವ್‌ಗಳು ಮತ್ತು ಸೆಕ್ಸ್ ಟಾಯ್ಸ್ ತುಂಬಿದ ಕಂಟೇನರ್ ಸಿಕ್ಕಿತ್ತು. 

ನಾಯಿಗಳಿಗೆ ಚಿತ್ರಹಿಂಸೆ ನೀಡಿ, ಲೈಂಗಿಕವಾಗಿ ಬಳಸಿಕೊಂಡು ಈತ ನಾಯಿಗಳನ್ನು ಅತ್ಯಂತ ಕ್ರೂರವಾಗಿ ಸಾಯಿಸುತ್ತಿದ್ದ ಎಂದು ಸರ್ಕಾರಿ ವಕೀಲರು ಕೋರ್ಟ್‌ಗೆ ಹೇಳಿದ್ದಾರೆ.  ಸಾಕ್ರುಪ್ರಾಣಿಗಳ ಆನ್‌ಲೈನ್ ಮಾರುಕಟ್ಟೆಯಲ್ಲಿ ನಾಯಿಯನ್ನು ಖರೀದಿಸುತ್ತಿದ್ದ ಈತ ಅವುಗಳ ಮೊದಲಿನ ಮಾಲೀಕರಿಗೆ ಅವುಗಳನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡುತ್ತಿದ್ದ. ಹೀಗಾಗಿ ಅನೇಕರು ಕೆಲಸದ ಒತ್ತಡದಿಂದ ಶ್ವಾನವನ್ನು ನೋಡಿಕೊಳ್ಳಲಾಗದವರು, ಮನಸ್ಸಿಲ್ಲದ ಮನಸ್ಸಿನಿಂದ ಶ್ವಾನವನ್ನು ಈತನಿಗೆ ನೀಡುತ್ತಿದ್ದರು. ಹೀಗೆ ಮನೆಗೆ ತಂದ ಶ್ವಾನದ ಮೇಲೆ ಈತ ಅಮಾನವೀಯ ರೀತಿಯಲ್ಲಿ ದೌರ್ಜನ್ಯ ಎಸಗುತ್ತಿದ್ದ. ಇದರ ಜೊತೆಗೆ ಈತನ ಲ್ಯಾಪ್‌ಟ್ಯಾಪ್‌ನಲ್ಲಿ ಮಕ್ಕಳಿಗೆ ಹಿಂಸೆ ಕಿರುಕುಳ ನೀಡುವ ಹಲವು ಪೋಟೋ ವೀಡಿಯೋಗಳು ಇದ್ದವು ಎಂದು ಪೊಲೀಸರು ಹೇಳಿದ್ದಾರೆ.

ಟೆಲಿಗ್ರಾಮ್‌ನಲ್ಲಿ ಎರಡು ಖಾತೆಗಳನ್ನು ಹೊಂದಿದ್ದ ಈತ ಒಂದನ್ನು ಜನರ ಸಂಪರ್ಕಕ್ಕೆ ಬಳಸುತ್ತಿದ್ದರೆ ಮತ್ತೊಂದನ್ನು ಪ್ರಾಣಿಗಳಿಗೆ ಹಿಂಸೆ ನೀಡಿದ ವೀಡಿಯೋಗಳನ್ನುಶೇರ್ ಮಾಡಲು ಬಳಸುತ್ತಿದ್ದ. ಈತನ ಈ ವೀಡಿಯೋವೊಂದು ಪ್ರಾಣಿಗಳ ಕಲ್ಯಾಣ ಸಂಘಟನೆಯ ಗಮನಕ್ಕೆ ಬಂದ ನಂತರ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಭಾರತದ ಬಗ್ಗೆ ಹೆಮ್ಮೆ ಇದೆ: ಕೆನಡಾ ವಿಚಾರದಲ್ಲಿ ಭಾರತದ ಬೆಂಬಲಕ್ಕೆ ನಿಂತ ಬಾಂಗ್ಲಾದೇಶ

Follow Us:
Download App:
  • android
  • ios