ವಿಶ್ವಾದ್ಯಂತ ಬ್ರಿಟನ್ ಪುರುಷರ ವೀರ್ಯಕ್ಕೆ ಮುಗಿಬಿದ್ದ ಜನ, ಸ್ಫೋಟಕ ವರದಿ ಬಹಿರಂಗ!

ವಿಶ್ವದೆಲ್ಲೆಡೆ ಇದೀಗ ಬ್ರಿಟನ್ ಪುರುಷರ ವೀರ್ಯದ್ದೆ ದರ್ಬಾರು. ಯೂರೋಪ್ ಹಾಗೂ ಯೂರೋಪ್ ಆಚೆಗೆ ಹುಟ್ಟಿದ ಬಹುತೇಕ ಮಕ್ಕಳ ಮೂಲ ಇದೀಗ ಬ್ರಿಟನ್. ಅಷ್ಟಕ್ಕೂ ಬ್ರಿಟನ್ ವೀರ್ಯಕ್ಕೆ ಇಷ್ಟೊಂದು ಬೇಡಿಕೆ ಏಕೆ?
 

Britain become larges sperm export country in world exploit 10 family limit says report ckm

ಲಂಡನ್(ಆ.21) ಬ್ರಿಟನ್ ದೇಶದ ವೀರ್ಯ ಇದೀಗ ವಿಶ್ವದೆಲ್ಲೆಡೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಯೂರೋಪ್ ಖಂಡ, ಅದರಾಚೆಗೂ ಬ್ರಿಟನ್ ವೀರ್ಯವೇ ವೈದ್ಯಕೀಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ . ಹೌದು, ಇದೀಗ ಬ್ರಿಟನ್ ವಿಶ್ವದ ಅತೀ ದೊಡ್ಡ ವೀರ್ಯ ರಫ್ತು ದೇಶವಾಗಿ ಹೊರಹೊಮ್ಮಿದೆ. ಇದರಿಂದ ವಿಶ್ವದೆಲ್ಲೆಡೆ ಈ ವೀರ್ಯಗಳಿಂದ ಹುಟ್ಟುವ ಮಕ್ಕಳ ಮೂಲ ಇದೀಗ ಬ್ರಿಟನ್ ದೇಶವಾಗುತ್ತಿದೆ. ಬ್ರಿಟನ್ ವೀರ್ಯ ನಿಯಮದಲ್ಲಿನ ಕೆಲ ಲೋಪದೋಷಗಳನ್ನೇ ಬಂಡವಾಳ ಮಾಡಿಕೊಂಡಿರುವ ಹಲವರು ವೀರ್ಯವನ್ನು ಸುಲಭವಾಗಿ ನೀಡುತ್ತಿದ್ದಾರೆ. ಇದರ ಪರಿಣಾಮ ಬ್ರಿಟನ್ ಅತೀ ದೊಡ್ಡ ವೀರ್ಯ ರಫ್ತು ಮಾಡುತ್ತಿರುವ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಬ್ರಿಟನ್ ದೇಶದಲ್ಲಿ ವೀರ್ಯ ದಾನ, ವೀರ್ಯ ನೀಡುವಿಕೆಯಲ್ಲಿ ಕೆಲ ನಿಯಮಗಳಿವೆ. ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಈ ನಿಯಮದ ಪ್ರಕಾರ ಬ್ರಿಟನ್‌ನಲ್ಲಿ ಒಬ್ಬ ವ್ಯಕ್ತಿ 10ಕ್ಕಿಂತ ಹೆಚ್ಟು ಕುಟುಂಬಕ್ಕೆ ವೀರ್ಯ ನೀಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ ಕೂಡ ವಿಧಿಸಲಾಗುತ್ತದೆ. ದುಬಾರಿ ದಂಡವನ್ನು ಹಾಕಲಾಗುತ್ತದೆ. 

ಬಾಡಿಗೆ ತಾಯ್ತನದ ಪ್ರಕರಣ: ವೀರ್ಯ ಅಥವಾ ಅಂಡಾಣು ದಾನ ಮಾಡಿದವರಿಗೆ ಮಕ್ಕಳ ಮೇಲೆ ಹಕ್ಕಿಲ್ಲ: ಕೋರ್ಟ್‌

ಆದರೆ ಬ್ರಿಟನ್ ಪುರುಷರು ಬ್ರಿಟನ್ ದೇಶದೊಳಗೆ 10 ಕುಟುಂಬಕ್ಕೆ ಮಾತ್ರ ನೀಡುತ್ತಿದ್ದಾರೆ. ಆದರೆ ವಿದೇಶ ರಫ್ತಿನಲ್ಲಿ ಈ ನಿಯಮ ಅನ್ವಯವಾಗುತ್ತಿಲ್ಲ. ಹೀಗಾಗಿ ಬ್ರಿಟನ್ ಪುರುಷರು ಯಥೇಚ್ಚವಾಗಿ ವೀರ್ಯ ರಫ್ತು ಮಾಡುತ್ತಿದ್ದಾರೆ. ಬ್ರಿಟನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀರ್ಯ ದಾನ ಮಾಡುತ್ತಿದ್ದಾರೆ. ಇದರಿಂದ ಬ್ರಿಟನ್ ವೀರ್ಯ ರಫ್ತಿನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಹಲವರು ಈ ರೀತಿ ಡಜನ್‌ಗಟ್ಟಲೇ ಕುಟುಂಬಕ್ಕೆ ವೀರ್ಯ ನೀಡಿದ್ದಾರೆ ಎಂದು ಗಾರ್ಡಿಯನ್ ವರದಿ ಮಾಡಿದ್ದಾರೆ. ಬ್ರಿಟನ್ ವೀರ್ಯಕ್ಕೆ ಬೇಡಿಕೆ ಇದೆಯೋ ಇಲ್ಲವೋ ಅನ್ನೋದು ಎರಡನೇ ಮಾತು, ಆದರೆ ರಫ್ತು ವಿಶ್ವಾದ್ಯಂತ ಪಸರಿಸಿದೆ. 

ನಿಯಮದಲ್ಲಿನ ಲೋಪದೋಷ ಬಳಸಿಕೊಂಡು ವೀರ್ಯ ರಫ್ತು ಮಾಡುತ್ತಿರುವವರ ಸಂಖ್ಯೆ ದುಪ್ಪಟ್ಟಾಗುತ್ತಿದ್ದಂತೆ ಬ್ರಿಟನ್ ಮಾನ ಫಲೀಕರಣ ಹಾಗೂ ಭ್ರೂಣಶಾಸ್ತ್ರ ಪ್ರಾಧಿಕಾರ(HFEA) ಎಚ್ಚೆತ್ತುಕೊಂಡಿದೆ. ವಿದೇಶಗಳಿಗೆ ವೀರ್ಯ ರಫ್ತುವಿನಲ್ಲೂ ನಿಯಂತ್ರಣ ಹೇರಲಾಗುತ್ತಿದೆ. ವೀರ್ಯ ರಫ್ತು, ಬೇಡಿಕೆಗೆ ತಕ್ಕಂತೆ ವೀರ್ಯ ಪೂರೆೈಕೆಗೆ ನಿಯಮವಿದೆ. ಆದರೆ ಇದರ ಪ್ರಮಾಣ ಹೆಚ್ಚಾದಲ್ಲಿ ಸಮಸ್ಯೆಗಳು ಹೆಚ್ಚಾಗಲಿದೆ. ಒಡಹುಟ್ಟಿದವರ ಸಂಖ್ಯೆ ಹೆಚ್ಚಾದರೆ ಸಂಬಂಧಗಳು ಅಸಮರ್ಥವಾಗಲಿದೆ ಎಂದು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ಪ್ರೊಫೆಸರ್ ಲೂಸಿ ಫ್ರಿತ್ ಹೇಳಿದ್ದಾರೆ.  

ಸದ್ಯ ಬ್ರಿಟನ್ ನಿಯಮದಲ್ಲಿ ವಿದೇಶಕ್ಕೆ ವೀರ್ಯ ರಫ್ತಿಗೆ ಯಾವುದೇ ನಿಯಂತ್ರ ಹೇರುವ ಅಂಶಗಳಿಲ್ಲ. ಇದರಿಂದ ಸಮಸ್ಯಗಳು ಉದ್ಭವಿಸುತ್ತಿದೆ ಎಂದು ಲೂಸಿ ಫ್ರಿತ್ ಅಭಿಪ್ರಾಯಪಟ್ಟಿದ್ದಾರೆ.

43 ವರ್ಷದ ಈ ವ್ಯಕ್ತಿ 1 ಸಾವಿರ ಮಕ್ಕಳ ತಂದೆ... ಈಗ ಒಂದೇ ಒಂದು ಮಗುವಾದ್ರೆ ಬೀಳಲಿದೆ 91 ಲಕ್ಷ  ದಂಡ!

Latest Videos
Follow Us:
Download App:
  • android
  • ios