ಇನ್ನೇನು ಸೇತುವೆಯನ್ನು ಉದ್ಘಾಟನೆ ಮಾಡಬೇಕು ಎನ್ನುವಷ್ಟರಲ್ಲಿ ಇಡೀ ಸೇತುವೆ ಕುಸಿದು ಬೀಳುತ್ತದೆ. ಅಷ್ಟಕ್ಕೂ ಸೇತುವೆ ಅನಾವರಣ ಮಾಡಲು ಬಂದಿದ್ದು, ಅದೇ ನಗರದ ಮೇಯರ್. ತನ್ನ ಪತ್ನಿಯೊಂದಿಗೆ ಸೇತುವೆಯನ್ನು ಉದ್ಘಾಟನೆ ಮಾಡಲು ಏರಿದ್ದ ಮೇಯರ್ ಪತ್ನಿ ಸಮೇತ ಮೋರಿಗೆ ಬಿದ್ದಿದ್ದಾರೆ.

ನವದೆಹಲಿ (ಜೂನ್ 8): ಕಳಪೆ ಕಾಮಗಾರಿಗಳು, ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಇದು ಸಾಮಾನ್ಯ. ಮೆಕ್ಸಿಕೋದಲ್ಲಿ ನಡೆದ ಒಂದು ಘಟನೆಯಲ್ಲಿ ಉದ್ಘಾಟನೆ ಮಾಡುವ ವೇಳೆ ಸೇತುವೆಯೇ ಕುಸಿದು ಬಿದ್ದಿದೆ. ಸೇತುವೆ (Bridge) ಉದ್ಘಾಟನೆಗೆ ಆಗಮಿಸಿದ್ದ ಮೇಯರ್ ತನ್ನ ಪತ್ನಿಯ ಸಮೇತ ಮೋರಿಗೆ ಬಿದ್ದಿರುವ ಘಟನೆಯ ವೀಡಿಯೋ ವೈರಲ್ (Viral Video) ಆಗಿದೆ. 

ನಗರದ ಮೇಯರ್ ಹಾಗೂ ಇತರ ಅಧಿಕಾರಿಗಳು ಸೇತುವೆಯನ್ನು ಉದ್ಘಾಟನೆ ಮಾಡಲು ಬಂದಿದ್ದರು, ಅಂದಾಜು 30ಕ್ಕಿಂತ ಅಧಿಕ ವ್ಯಕ್ತಿಗಳು ಒಮ್ಮೆಲೇ ಸೇತುವೆಯನ್ನು ಏರಿದ್ದರ ಪರಿಣಾಮವಾಗಿ ಮೇಯರ್ ಅವರ ಪತ್ನಿಯ ಸಮೇತ ಮೋರಿಗೆ ಬಿದ್ದಿದ್ದಾರೆ. ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

ಪ್ರಕರಣವು ಮೆಕ್ಸಿಕೋದ ಕುರ್ನಿವಾಕಾದಲ್ಲಿ (Cuernivaca, Mexico) ನಡೆದಿದೆ. ನಗರದ ಮೇಯರ್ (Mayor) ಅವರು ನದಿಯ ಮೇಲೆ ಕಾಲುಸಂಕವನ್ನು ಉದ್ಘಾಟನೆ ಮಾಡುತ್ತಿದ್ದರು. ಮರದ ಹಲಗೆಗಳು ಮತ್ತು ಲೋಹದ ಸರಪಳಿಗಳಿಂದ ಮಾಡಲ್ಪಟ್ಟ ಈ ಸೇತುವೆಯನ್ನು ಮರು ರೂಪಿಸಲಾಗಿತ್ತು. ವೀಡಿಯೋ ನೋಡಿದಾಗ ಸರಪಳಿಯಿಂದ ಬೋರ್ಡ್‌ಗಳು ಬೇರ್ಪಟ್ಟಿದ್ದರಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಅದರಲ್ಲೂ ಒಬ್ಬ ವ್ಯಕ್ತಿ ಲೋಹದ ಸರಪಳಿ ಹಿಡಿದುಕೊಂಡು ನೇತಾಡುತ್ತಿರುವ ದೃಶ್ಯ ಕೂಡ ದಾಖಲಾಗಿದೆ.

Scroll to load tweet…


ಸಿಟಿ ಕೌನ್ಸಿಲ್ ಸದಸ್ಯರು ಮತ್ತು ಇತರ ಸ್ಥಳೀಯ ಅಧಿಕಾರಿಗಳು ತೊರೆಯಲ್ಲಿನ ಕಲ್ಲುಗಳ ಮೇಲೆ 3 ಮೀಟರ್ (10 ಅಡಿ) ಕೆಳಗೆ ಬಿದ್ದಿದ್ದಾರೆ. ಕಲ್ಲುಗಳೇ ತುಂಬಿದ್ದ ಮೋರಿಯಲ್ಲಿ ಬಿದ್ದವರಲ್ಲಿ ಮೇಯರ್, ಅವರ ಪತ್ನಿ, ಹಲವಾರು ಅಧಿಕಾರಿಗಳು ಮತ್ತು ವರದಿಗಾರರು ಸೇರಿದ್ದಾರೆ ಎಂದು ಮೊರೆಲೋಸ್ ರಾಜ್ಯ ಗವರ್ನರ್ ಕುವಾಹ್ಟೆಮೊಕ್ ಬ್ಲಾಂಕೊ (Cuauhtémoc Blanco ) ಹೇಳಿದ್ದಾರೆ. ಗಾಯಗೊಂಡ ಅನೇಕ ಜನರನ್ನು ಸ್ಥಳೀಯ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ದಾಖಲಿಸಲಾಗಿದೆ.

ವರದಿಯ ಪ್ರಕಾರ, ಮೇಯರ್ ಜೋಸ್ ಲೂಯಿಸ್ ಉರಿಯೊಸ್ಟೆಗುಯಿ (Mayor José Luis Urióstegui ) ಅವರನ್ನು ಸಹ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಸೇತುವೆಯನ್ನು ಹತ್ತಿದ ಕಾರಣ ಈ ಘಟನೆ ಸಂಭವಿಸಿದೆ ಎಂದು ನಂಬಲಾಗಿದೆ.

ಘಟನೆಯ ವಿಡಿಯೋ ಕೂಡ ಹೊರಬಿದ್ದಿದ್ದು, ಹಲವರು ಚರಂಡಿಗೆ ಬೀಳುತ್ತಿರುವುದು ಕಂಡು ಬಂದಿದೆ. ಆ ಜನರನ್ನು ಅಲ್ಲಿಂದ ಹೊರತರುವ ಕೆಲಸವೂ ನಡೆಯುತ್ತಿದೆ. ನಾಲ್ಕು ಸಿಟಿ ಕೌನ್ಸಿಲ್ ಸದಸ್ಯರು, ಇಬ್ಬರು ನಗರ ಅಧಿಕಾರಿಗಳು ಮತ್ತು ಸ್ಥಳೀಯ ವರದಿಗಾರ ಗಾಯಗೊಂಡಿದ್ದಾರೆ ಮತ್ತು ಅವರನ್ನು ಮೋರಿಯಿಂದ ಸ್ಟ್ರೆಚರ್‌ಗಳಲ್ಲಿ ಹೊರತೆಗೆಯಬೇಕಾಯಿತು ಮತ್ತು ಸ್ಥಳೀಯ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು ಎಂದು ಕ್ಯುರ್ನಾವಾಕಾ ನಗರ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಅವರ ಸ್ಥಿತಿಯ ಬಗ್ಗೆ ತಕ್ಷಣದ ಮಾಹಿತಿ ಇಲ್ಲ.

ಸೇತುವೆ ಕಾಮಗಾರಿ ಮುಗಿದು 2 ವರ್ಷವಾದ್ರೂ ಬ್ರಿಡ್ಜ್‌ಗಿಲ್ಲ ಸಂಪರ್ಕ ರಸ್ತೆ..!

ಮೇಯರ್ ಜೋಸ್ ಲೂಯಿಸ್ ಉರಿಯೊಸ್ಟೆಗುಯಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಅವರಿಗೆ "ಸಣ್ಣ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ" ಎಂದು ನಗರ ಹೇಳಿದೆ. ಉದ್ಘಾಟನೆ ಸಂದರ್ಭದಲ್ಲಿ ಸೇತುವೆಯ ಮೇಲೆ ಅಧಿಕಾರಿಗಳು ಮತ್ತು ಪತ್ರಕರ್ತರ ಹೆಚ್ಚಾಗಿದ್ದರಿಂದ ಸೇತುವೆ ಸಾಮರ್ಥ್ಯ ಇದನ್ನು ಮೀರಿತ್ತು ಎನ್ನಲಾಗಿದೆ. ಮೆಕ್ಸಿಕೋ ನಗರದ ದಕ್ಷಿಣ ಭಾಗದಲ್ಲಿರುವ ಕುರ್ನಿವಾಕಾ, ನೀರು ಮತ್ತು ಹಿತವಾದ ವಾತಾವರಣದ ಕಾರಣದಿಂದ ರಾಜಧಾನಿ ನಿವಾಸಿಗಳಿಗೆ ವಾರಾಂತ್ಯದ ವಿಹಾರ ತಾಣವಾಗಿದೆ.

ರೈಲ್ವೇ ಹಳಿಯಲ್ಲಿ ನಾದಿನಿ ಜೊತೆ ಸೆಲ್ಫೀ ತೆಗೆಯಲು ಹೋದ ಭಾವ, ನೋಡ ನೋಡುತ್ತಿದ್ದಂತೆಯೇ ಕೊನೆಯುಸಿರು!

ಕೆಲ ವರ್ಷಗಳ ಹಿಂದೆ ಬಿಹಾರದ ಕಿಶನ್ ಗಂಜ್ ನಲ್ಲೂ ಇಂಥದ್ದೇ ಒಂದು ಪ್ರಕರಣ ನಡೆದಿತ್ತು. ಅಂದಾಜು 1.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸೇತುವೆ ಉದ್ಘಾಟನೆಯಾಗುವ ಒಂದು ದಿನ ಮುನ್ನ ಕುಸಿದು ಬಿದ್ದಿತ್ತು. ಸೇತುವೆ ನಿರ್ಮಾಣದಲ್ಲಿ ನಡೆದ ದೊಡ್ಡ ಮಟ್ಟದ ಭ್ರಷ್ಟಾಚಾರವೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದ್ದರು.