Asianet Suvarna News Asianet Suvarna News

ಮದುವೆ ದಿನ ಬಾಸ್‌ನಿಂದ ಬಂದ ಮೆಸೇಜ್ ನೋಡಿ ಯುವತಿ ಶಾಕ್; ಆ ಕ್ಷಣ ಉಸಿರು ನಿಂತತಾಯ್ತು ಎಂದ ವಧು!

ಆ ಒಂದು ಮೆಸೇಜ್‌ನಿಂದ ತನ್ನ ಮದುವೆ ದಿನದ ಸಂಭ್ರಮವೇ ಹೋಯ್ತು. ಸಾಂಸರಿಕ ಜೀವನ ಆರಂಭಿಸುವ ಬದಲು ಮದುವೆ ಬಳಿಕ ಜೀವನ ಕಟ್ಟಿಕೊಳ್ಳಲು ಮುಂದಾದೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಯುವತಿಯ ತನ್ನ ಹೆಸರನ್ನು ಬಹಿರಂಪಡಿಸಿಕೊಂಡಿಲ್ಲ.

bride shock while seeing her boss message mrq
Author
First Published May 29, 2024, 1:12 PM IST

ಕೆಲಸ ಯಾವುದೇ ಇರಲಿ ಮೇಲಾಧಿಕಾರಿಗಳಿಂದ (Senior Officers) ಯಾವುದೇ ಸಂದೇಶ ಬರಬಹುದು. ಕಾರ್ಪೋರೇಟ್ ವಲಯದಲ್ಲಿ (Corporate Sector) ಕೆಲಸ ಮಾಡುವ ಪ್ರತಿ ನೌಕರರಿಗೆ ಈ ಅನುಭವ ಆಗಿರುತ್ತದೆ. ಕೆಲವೊಮ್ಮೆ ದಿಢೀರ್ ಅಂತ ತಡರಾತ್ರಿ ಕೆಲಸ ಶುರು ಮಾಡೋರು ನಮ್ಮ ಜೊತೆಯಲ್ಲಿರುತ್ತಾರೆ. ಇತ್ತೀಚೆಗೆ ಬೆಂಗಳೂರಿನ ಟ್ರಾಫಿಕ್‌ನಲ್ಲಿ (Bengaluru Traffic), ಚಪ್ಪಲಿ ಖರೀದಿಸುತ್ತಾ ಲ್ಯಾಪ್‌ಟಾಪ್ ಹಿಡಿದುಕೊಂಡು ಕೆಲಸ ಮಾಡುತ್ತಿರುವ ಜನರ ಫೋಟೋ, ವಿಡಿಯೋ ವೈರಲ್ ಆಗಿತ್ತು. ಯುವತಿಯೊಬ್ಬಳು ಮದುವೆ ದಿನ ತನ್ನ ಬಾಸ್‌ನಿಂದ ಮೆಸೇಜ್ (Boss Message) ನೋಡಿ ಶಾಕ್ ಆಗಿದ್ದಾಳೆ. ಆ ಮೆಸೇಜ್ ನೋಡಿ ಒಂದು ಕ್ಷಣ ನನ್ನ ಉಸಿರು ನಿಂತೇ ಹೋಗಿತ್ತು ಎಂದು ಯುವತಿ ತನಗಾದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.

ಆ ಒಂದು ಮೆಸೇಜ್‌ನಿಂದ ತನ್ನ ಮದುವೆ ದಿನದ ಸಂಭ್ರಮವೇ ಹೋಯ್ತು. ಸಾಂಸರಿಕ ಜೀವನ ಆರಂಭಿಸುವ ಬದಲು ಮದುವೆ ಬಳಿಕ ಜೀವನ ಕಟ್ಟಿಕೊಳ್ಳಲು ಮುಂದಾದೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಯುವತಿಯ ತನ್ನ ಹೆಸರನ್ನು ಬಹಿರಂಪಡಿಸಿಕೊಂಡಿಲ್ಲ.ಬಾಸ್‌ ಮೆಸೇಜ್‌ನಿಂದ ತನ್ನ ಮದುವೆ ಸಂಭ್ರಮ ಹೇಗೆ ಆತಂಕವಾಗಿ ಬದಲಾಯ್ತು ಎಂದು ಯುವತಿ 'ದಿ ಬೆನ್ ಆಸ್ಕಿನ್ಸ್ ಶೋ'ನಲ್ಲಿ ವಿವರಿಸಿದ್ದಾಳೆ. 

ಕುತೂಹಲದಿಂದ ಮೆಸೇಜ್ ನೋಡಿ ಶಾಕ್ ಆಯ್ತು!

ಯುವತಿ ಲಂಡನ್ ನಿವಾಸಿಯಾಗಿದ್ದು, ಅಂದು ನನ್ನ ಮದುವೆ ಅಂತ ನಾನು ಕೆಲಸ ಮಾಡುವ ಕಂಪನಿಯಲ್ಲಿ ಎಲ್ಲರಿಗೂ ಗೊತ್ತಿತ್ತು. ಕೆಲವರು ಮದುವೆ ಮತ್ತು ಆರತಕ್ಷತೆಗೂ ಆಗಮಿಸಿದ್ದರು. ಅಂದು ಆರತಕ್ಷತೆ ಇತ್ತು. ಮೊಬೈಲ್ ನನ್ನ ಜೊತೆಯಲ್ಲಿ ಇಟ್ಟುಕೊಂಡಿರಲಿಲ್ಲ. ತುಂಬಾ ಸಮಯದ ಬಳಿಕ ಜನರು ನನಗೆ ಯಾವ ರೀತಿ ಮದುವೆಯ ಶುಭಾಶಯದ ಸಂದೇಶ ಕಳುಹಿಸಿದ್ದಾರೆ ಅನ್ನೋ ಕುತೂಹಲ ಉಂಟಾಯ್ತು. 

ಸ್ವಲ್ಪ ಬಿಡುವು ಮಾಡಿಕೊಂಡು ನೋಡಿದಾಗ ನನ್ನನ್ನು ಕಂಪನಿಯ ಎಲ್ಲಾ ವಾಟ್ಸಪ್‌ ಗ್ರೂಪ್‌ಗಳಿಂದ ತೆಗೆದು ಹಾಕಲಾಗಿತ್ತು. ಆದ್ರೆ ಯಾಕೆ ಅನ್ನೋದು ಮಾತ್ರ ನನಗೆ ಗೊತ್ತಿಲ್ಲ. ನಂತರ ಬಾಸ್‌ನಿಂದ ಬಂದ ಮೆಸೇಜ್ ನೋಡಿದಾಗ ಒಂದು ಕ್ಷಣ ನನಗೆ ಶಾಕ್ ಆಯ್ತು. 

ಆನ್‌ಲೈನ್‌ನಲ್ಲಿ ಭೇಟಿಯಾದ ಹುಡುಗಿ ಜೊತೆ ಯುವಕನ ವಿವಾಹ, 12 ದಿನದ ಮೇಲೆ ಗೊತ್ತಾಯ್ತು ಆಕೆ ಅವಳಲ್ಲ ಅವನು!

ಬಾಸ್ ಮೆಸೇಜ್‌ನಲ್ಲಿ ಏನಿತ್ತು?

ನಿಮ್ಮ ಮದುವೆಗೆ ಚೆನ್ನಾಗಿ ನಡೆಯುತ್ತಿದೆ ಎಂದು ನಾನು ಭಾವಿಸಿದ್ದೇನೆ. ನಿಮಗೆ ಮದುವೆಯ ಶುಭಾಶಯಗಳು ನಿಮ್ಮ ಜೀವನಕ್ಕೆ ಒಳ್ಳೆಯದಾಗಲಿ. ದುರಾದೃಷ್ಟವಶಾತ್ ನಿಮ್ಮನ್ನು ಕೆಲಸದಿಂದ ವಜಾಗೊಳಿಸಲಾಗುತ್ತಿದೆ ಎಂದು ಹೇಳಲು ಬಯಸುತ್ತಿದ್ದೇನೆ. ಈ ಕುರಿತ ಎಲ್ಲಾ ವಿವರಗಳನ್ನು ನಿಮ್ಮ ವೈಯಕ್ತಿಯ ಇ-ಮೇಲ್‌ಗೆ ಕಳುಹಿಸಲಾಗಿದೆ. ನಿಮ್ಮ ಮುಂದಿನ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇನೆ. 

ಈ ಮೆಸೇಜ್ ಓದುವಾಗ ಸುತ್ತಲೂ ಸ್ನೇಹಿತರು ಮತ್ತು ಕುಟುಂಬಸ್ಥರಿದ್ದರು. ಇವರೆಲ್ಲರ ಮಧ್ಯೆ ನನ್ನ ಉಸಿರಾಟ ನಿಂತ ಹೋದ ಅನುಭವ ಆಯ್ತು. ನಾನು ಟಾರ್ಗೆಟ್ ರೀಚ್ ಮಾಡಿಲ್ಲ ಎಂಬ ಕಾರಣಕ್ಕೆ ನನ್ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂಬ ಕಾರಣವನ್ನು ಮೇಲ್‌ನಲ್ಲಿ ತಿಳಿಸಲಾಗಿತ್ತು ಎಂದು ಯುವತಿ ಹೇಳಿದ್ದಾಳೆ. 

ಫೇಸ್‌ಬುಕ್ ಮೂಲಕ ಪ್ರೀತಿಯಾಗಿ ಮದುವೆ, 2 ವಾರ ಫಸ್ಟ್ ನೈಟ್ ಮುಂದೂಡಿದ ಪತ್ನಿಗೆ ಡಿವೋರ್ಸ್!

ಆ ಕ್ಷಣದಲ್ಲಿ ಅಸಹಾಯಕಳಾಗಿದ್ದೆ!

ಆ ಕ್ಷಣದಲ್ಲಿ ಬಾಸ್ ಮತ್ತು ನನ್ನ ಮೇಲೆಯೇ ನನಗೆ ಕೋಪ ಬಂತು. ಆದರೆ ಆ ಸಮಯದಲ್ಲಿ ನಾನೇನು ಮಾಡುವಂತಿರಲಿಲ್ಲ. ನಾನು ಅಸಹಾಯಕಳಾಗಿ ಸುಮ್ಮನೆ ಕುಳಿತುಕೊಂಡಿದ್ದೆ. ಮದುವೆ ನಂತರ ಕಚೇರಿಗೆ ಭೇಟಿ ನೀಡಿದ ವೇಳೆ ಈ ವಿಷಯವನ್ನು ನನಗೆ ಹೇಳಬಹುದಿತ್ತು. ಮದುವೆ ದಿನವೇ ಈ ಸಂದೇಶ ಕಳುಹಿಸಿದ್ದಕ್ಕೆ ಬೇಸರವಿದೆ. ಹೊಸ ಜೀವನವನ್ನು ಪ್ರಾರಂಭಿಸುವ ಬದಲು, ನಾನು ಕೆಲಸ ಹುಡುಕಲು ಪ್ರಾರಂಭಿಸಿದೆ ಎಂದು ಶೋನಲ್ಲಿ ಯುವತಿ ತಿಳಿಸಿದ್ದಾಳೆ.

Latest Videos
Follow Us:
Download App:
  • android
  • ios