Asianet Suvarna News Asianet Suvarna News

Weird Wedding: ಕುಡಿದ ಮತ್ತಿನಲ್ಲಿ ತನ್ನ ಮದುವೆಗೂ ಹೋಗದೆ ಗಡದ್ದಾಗಿ ಮಲಗಿದ ಮದುಮಗಳು

Weird Wedding News: ಕುಡಿದ ಮತ್ತಿನಲ್ಲಿ ತನ್ನ ಮದುವೆಗೇ ಹೋಗದೇ ಮದುಮಗಳು ಗಡದ್ದಾಗಿ ನಿದ್ದೆ ಮಾಡಿದಳು ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು ಯಾಕೆಂದರೆ ಈ ರೀತಿಯ ವಿಚಿತ್ರ ಘಟನೆ ಇಂಗ್ಲೆಂಡಿನಲ್ಲಿ ನಡೆದಿದೆ. 

bride gets drunk on her wedding day misses reception in a bizarre way
Author
First Published Sep 1, 2022, 4:52 PM IST

ಮದುವೆ ಮತ್ತು ಆರತಕ್ಷತೆ ಎಂದರೆ ನವ ಜೋಡಿಗೆ ಮರೆಯಲಾಗದ ಕ್ಷಣ. ಅದರಲ್ಲೂ ಮದುಮಗಳಿಗೆ ಇದು ಜೀವನದಲ್ಲಿ ಅಚ್ಚಳಿಯದ ದಿನ ಎಂದರೆ ತಪ್ಪಾಗಲಾರದು. ನೆಂಟರು, ಸ್ನೇಹಿತರು, ಬಂಧು - ಬಳಗದ ಮುಂದೆ ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಈ ಮದುಮಗಳು ಮದುವೆಯ ನಂತರ ಖುಷಿಗೆ ಕಂಠಪೂರ್ತಿ ಕುಡಿದು ರಿಸೆಪ್ಷನ್‌ ಮುಗಿಯುವವರೆಗೂ ಮಲಗೇ ಇದ್ದಳಂತೆ. ಪಾಪ ಮದುಮಗ ಒಬ್ಬನೇ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಬೇಕಾದ ಅನಿವಾರ್ಯ ಉಂಟಾಯಿತಂತೆ. ಈ ಘಟನೆಯ ಬಗ್ಗೆ ಮದುವೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆ ಪೋಸ್ಟ್‌ ಈಗ ವೈರಲ್‌ ಆಗಿದೆ. 

"ನಾನು ಇತ್ತೀಚೆಗೆ ಮದುವೆ ಸಮಾರಂಭವೊಂದಕ್ಕೆ ಹೋಗಿದ್ದೆ. ಸಂಜೆ ಆರು ಗಂಟೆಗೆಲ್ಲಾ ರಿಸೆಪ್ಷನ್‌ ಆರಂಭವಾಯಿತು. ಗಂಡು ಹೆಣ್ಣು ಇಬ್ಬರೂ ಬಂದರು. ಅಧಿಕೃತವಾದ ಭಾಷಣ ಮತ್ತುಳಿದ ಕಾರ್ಯಕ್ರಮ ಕ್ಷಣದೊಳಗೆ ಮುಗಿದುಹೋಯಿತು. ಯಾಕೆ ಇಷ್ಟೊಂದು ತುರ್ತಾಗಿ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ನನ್ನನ್ನು ಕಾಡಿತ್ತು. ಆದರೆ ಮದುಮಗಳ ಪರಿಸ್ಥಿತಿಯನ್ನು ನೋಡಿ ಅರ್ಥವಾಗಿತ್ತು. ಆಕೆ ಸಂಪೂರ್ಣವಾಗಿ ಕುಡಿದಿದ್ದಳು. ಏನು ಮಾಡುತ್ತಿದ್ದಾಳೆ ಎಂಬ ಪರಿಭ್ರಮೆಯೂ ಆಕೆಗಿರಲಿಲ್ಲ," ಎಂದು ಮದುವೆಯ ಬಗ್ಗೆ ಸಂಬಂಧಿ ಬರೆದುಕೊಂಡಿದ್ದಾರೆ. 

ಸಂಜೆ ಎಂಟುಗಂಟೆಗೆಲ್ಲಾ ಮದುಮಗಳು ನಿಲ್ಲಲೂ ಶಕ್ತಿಯಿಲ್ಲದೇ ಮಲಗಿಬಿಟ್ಟಳು. ನಂತರ ರಿಸೆಪ್ಷನ್‌ ಹೊರಬದಿಯ ಸೋಫಾ ಒಂದರ ಮೇಲೆ ಮಲಗಿದವಳು ರಿಸೆಪ್ಷನ್‌ ಮುಗಿದರೂ ಏಳಲಿಲ್ಲವಂತೆ. ಮದುವೆಗೆ ಬಂದವರೆಲ್ಲಾ ಮದುಮಗಳ ಸ್ಥಿತಿ ನೋಡಿ ಆಳಿಗೊಂದು ಮಾತು ಉದುರಿಸಿ ಹೋದರಂತೆ. 

ಇದನ್ನೂ ಓದಿ: ಮದುವೆ ದಿನ ವರ-ವಧು ನಗುವಂತೆಯೇ ಇಲ್ಲ, ಇದೆಂಥಾ ವಿಚಿತ್ರ ಸಂಪ್ರದಾಯ !

ನಂತರ ರಿಸೆಪ್ಷನ್‌ ಮುಗಿದ ಮೇಲೆ ಆಕೆಯನ್ನು ಎತ್ತಿಕೊಂಡು ಕಾರಿನತ್ತ ಕರೆದೊಯ್ಯಲಾಯಿತಂತೆ. ಬೆಲೆಬಾಳುವ ಬಟ್ಟೆ ಧರಿಸಿದ್ದ ಆಕೆ, ಅದರ ಮೇಲೆಯೇ ವಾಂತಿ ಮಾಡಿಕೊಳ್ಳುತ್ತಿದ್ದರಂತೆ ಎಂದು ಸಂಬಂಧಿ ಬರೆದುಕೊಂಡಿದ್ದಾರೆ. "ಮದುಮಗನನ್ನು ನೋಡಿ ನನಗೆ ಬೇಸರವಾಯಿತು. ಆತ ಒಬ್ಬನೇ ರಿಸೆಪ್ಷನ್‌ಗೆ ಬಂದ ಅತಿಥಿಗಳನ್ನು ಮಾತನಾಡಿಸುತ್ತಿದ್ದ. ಹೆಂಡತಿ ಜೊತೆ ನೃತ್ಯ ಮಾಡಬೇಕಾದವನು ಒಬ್ಬನೇ ಮಂಕಾಗಿ ಕೂತಿದ್ದ. ಈಗಲಾದರೂ ಆಕೆ ಮಾಡಿದ ತಪ್ಪಿನ ಅರಿವಾಗಿರಬಹುದು," ಎಂದು ಬರೆದುಕೊಂಡಿದ್ದಾರೆ. 

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಹಲವರು, ತನ್ನ ಮದುವೆಯ ದಿನವೇ ಹುಡುಗಿ ಈ ರೀತಿ ಮಾಡಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. "ಮದುವೆಯ ದಿನ ಕುಡಿಯುವುದು ತಪ್ಪಿಲ್ಲ. ಮದುವೆ ಎಂದರೆ ಪ್ರತಿಯೊಬ್ಬರಿಗೂ ಭಯವಿರುತ್ತದೆ. ಆದರೆ ನಮ್ಮ ಲಿಮಿಟೇಷನ್‌ ನಮಗೆ ಗೊತ್ತಿರಬೇಕು. ನಿಲ್ಲಲೂ ಶಕ್ತಿಯಿಲ್ಲದಷ್ಟು ಕುಡಿದರೆ ಹೇಗೆ," ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. 

ಇದನ್ನೂ ಓದಿ: Weird News: ಇಲ್ಲಿ ಮದುವೆಗೆ ಮೊದಲು ಹುಡುಗಿ ತಾಯಿಯಾಗ್ಲೇಬೇಕಂತೆ…!

"ಮದುವೆಯಾಗಿರುವ ಖುಷಿಯಲ್ಲಿ ಲೆಕ್ಕವಿಲ್ಲದಷ್ಟು ಕುಡಿದಿದ್ದಾಳೆ ಅನಿಸುತ್ತಿದೆ. ಅದರ ಜತೆಗೆ ಸರಿಯಾಗಿ ಏನೂ ತಿಂದಿಲ್ಲ. ಈ ಕಾರಣಕ್ಕಾಗಿಯೇ ಆಕೆ ರಿಸೆಪ್ಷನ್‌ ಕೂಡ ಅಟೆಂಡ್‌ ಮಾಡದಷ್ಟು ಪಾನಮತ್ತಳಾಗಿದ್ದಾಳೆ. ಕುಡಿದ ಮೇಲೆ ಸರಿಯಾಗಿ ಊಟ ಮಾಡದಿದ್ದರೆ ಹೀಗೇ ಆಗುತ್ತದೆ," ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. 
ಒಟ್ಟಿನಲ್ಲಿ ಜೀವನದ ಅತ್ಯಂತ ಖುಷಿಯ ದಿನ, ಲಿಮಿಟ್‌ ಮೀರಿ ಕುಡಿದ ಮದುಮಗಳು ಟ್ರೋಲ್‌ ಆಗಿದ್ದಲ್ಲದೇ ಬಾರೀ ಮುಜುಗರಕ್ಕೆ ಒಳಗಾಗಿದ್ದಾಳೆ. ಅಳತೆ ಮೀರಿ ಕುಡಿದರೆ ಏನಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿ. ಆಕೆಯ ಪರವೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಮದುವೆ ಎಂದರೆ ಆಕೆಯ ದಿನ, ಆಕೆ ಕುಡಿದಿರುವ ಬಗ್ಗೆ ಗಂಡನಿಗೇ ಸಮಸ್ಯೆ ಇಲ್ಲ ಎಂದ ಮೇಲೆ ನೀವ್ಯಾಕೆ ಅದನ್ನು ವಿಶ್ಲೇಷಿಸುತ್ತೀರಿ ಎಂದು ಟೀಕಾಕಾರರ ವಿರುದ್ಧ ಮುಗಿಬಿದ್ದಿದ್ದಾರೆ. ಆದರೆ ಹುಡುಗಿಯ ಪ್ರತಿಕ್ರಿಯೆ ಎಲ್ಲೂ ದಾಖಲಾಗಿಲ್ಲ. ಬಹುಶಃ ತಾನು ಮಾಡಿದ ಕೆಲಸ ಮೇಲೆ ಆಕೆಗೇ ಬೇಸರ ಮೂಡಿರಬಹುದು. 

Follow Us:
Download App:
  • android
  • ios