Asianet Suvarna News Asianet Suvarna News

Corona Alert: ಬೋಟ್ಸ್ವಾನಗಿಂತ ಮೊದಲೇ ಯುರೋಪ್‌ ಒಮಿಕ್ರೋನ್‌ ಪತ್ತೆ

  • ಯುರೋಪ್‌ನಲ್ಲಿ ಒಮಿಕ್ರೋನ್‌(Omicron) ರೂಪಾಂತರಿ
  • ಬೋಟ್ಸ್ವಾನದಲ್ಲಿ(Botswana) ಕೋವಿಡ್‌ನ ಹೊಸ ರೂಪಾಂತರಿ ಎಂದು ಘೋಷಿಸುವ ವಾರದ ಮೊದಲೆ ಯುರೋಪ್‌ನಲ್ಲಿ (Europe)ಪತ್ತೆ
Before Botswana Omicron cases found in Europe dpl
Author
Bangalore, First Published Dec 2, 2021, 3:00 AM IST
  • Facebook
  • Twitter
  • Whatsapp

​​​​​​ಬ್ರುಸೆಲ್ಸ್‌(ಡಿ.02): ಬೋಟ್ಸ್ವಾನದಲ್ಲಿ ಕೋವಿಡ್‌ನ ಹೊಸ ರೂಪಾಂತರಿ ಕಾಣಿಸಿಕೊಂಡಿದೆ ಎಂದು ಘೋಷಿಸುವ ಒಂದು ವಾರದ ಮೊದಲೆ ಯುರೋಪ್‌ನಲ್ಲಿ ಒಮಿಕ್ರೋನ್‌(Omicron) ರೂಪಾಂತರಿ ಕಾಣಿಸಿಕೊಂಡಿತ್ತು. ನ.19ರಿಂದ 23ರವರೆಗೆ ಯುರೋಪ್‌ನಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿ ಹೊಸ ರೂಪಾಂತರಿ ಕಾಣಿಸಿಕೊಂಡಿದೆ. ನ.24ರಂದು ದಕ್ಷಿಣ ಆಫ್ರಿಕಾ ಹೊಸ ತಳಿ ಕಾಣಿಸಿಕೊಂಡಿರುವ ಬಗ್ಗೆ ಎಚ್ಚರಿಕೆ ನೀಡಿತ್ತು ಎಂದು ನೆದರ್‌ಲೆಂಡ್‌ನ ಆರೋಗ್ಯ ಸಂಸ್ಥೆ ಹೇಳಿದೆ.

ಇದನ್ನು ಗಮನಿಸಿದರೆ ವಿಶ್ವ ಆರೋಗ್ಯ ಸಂಸ್ಥೆ(WHO) ಹೇಳಿರುವುದಕ್ಕಿಂತ ವೇಗವಾಗಿ ಒಮಿಕ್ರೋನ್‌ ಹರಡುತ್ತಿದೆ. ಜಪಾನ್‌(Japan) ಮತ್ತು ಫ್ರಾನ್ಸ್‌ ದೇಶಗಳಲ್ಲೂ ಮಂಗಳವಾರ ಒಮಿಕ್ರೋನ್‌ ಕಾಣಿಸಿಕೊಂಡಿದೆ. ಸಾಂಕ್ರಾಮಿಕದಿಂದ ಜಗತ್ತು ಸುಧಾರಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಹೊಸ ತಳಿ ಭಯ ಹುಟ್ಟಿಸಿದೆ. ಜಾಗತೀಕರಣದ ಪ್ರಭಾವದಿಂದ ಈ ವೈರಸ್‌ ಅತಿ ವೇಗವಾಗಿ ಹರಡುತ್ತಿದೆ. ಲಸಿಕೆ ಎಲ್ಲಾ ದೇಶಗಳನ್ನು ತಲುಪುವವರೆಗೆ ಇಂತಹ ತೊಂದರೆಗಳನ್ನು ಜಗತ್ತು ಎದುರಿಸಲೇ ಬೇಕಾಗುತ್ತದೆ ಎಂದು ಯಾಲೆ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನ ಪ್ರಾಧ್ಯಾಪಕ ಡಾ.ಆಲ್ಬರ್ಟ್‌ ಕೊ ಹೇಳಿದ್ದಾರೆ.

Omicron Crisis: ಲಸಿಕೆ ಸಿಕ್ಕಿಲ್ಲ, ಹಾಗಾಗಿ ಹೊಸ ತಳಿ ಹುಟ್ಟಿದೆ: ಆಫ್ರಿಕಾ ಆಕ್ರೋಶ!

ಜಗತ್ತಿನ ನಿದ್ದೆಗೆಡಿಸಿರುವ ಕೋವಿಡ್‌ನ ಹೊಸ ರೂಪಾಂತರಿ ‘ಒಮಿಕ್ರೋನ್‌’ (Omicron) ತಣ್ಣಗೆ ಇನ್ನಷ್ಟುದೇಶಗಳಿವೆ ವ್ಯಾಪಿಸಿರುವುದು ಖಚಿತಪಟ್ಟಿದೆ. ಹೀಗಾಗಿ ಡೆಲ್ಟಾಗಿಂತಾ (Delta) ವೇಗಿ, ಲಸಿಕೆಯ ಕುಣಿಕೆಯನ್ನೂ ತಪ್ಪಿಸಬಲ್ಲದು ಎಂಬ ಕುಖ್ಯಾತಿ ಹೊಂದಿರುವ ಈ ವೈರಸ್‌ ಜಗತ್ತಿನ ಕಣ್ಣಿಗೆ ಮತ್ತಷ್ಟುಭಯಂಕರವಾಗಿ ಕಾಣಿಸಿಕೊಂಡಿದೆ. ಭಾನುವಾರ ಆಸ್ಪ್ರೇಲಿಯಾ (Australia) ಮತ್ತು ನೆದರ್‌ಲೆಂಡ್‌ (Netherlands) ದೇಶಗಳು, ತಮ್ಮ ದೇಶದಲ್ಲೂ ಒಮಿಕ್ರೋನ್‌ ವೈರಸ್‌ ಪತ್ತೆಯಾಗಿದೆ ಎಂದು ಘೋಷಿಸಿಕೊಂಡಿವೆ. ಆಸ್ಪ್ರೇಲಿಯಾದಲ್ಲಿ 2 ಮತ್ತು ನೆದರ್‌ಲೆಂಡ್‌ನಲ್ಲಿ 13 ಪ್ರಕರಣಗ ಖಚಿತಪಟ್ಟಿವೆ. ಹೀಗಾಗಿ ವೈರಸ್‌ ಪ್ರವೇಶ ಖಚಿಪಟ್ಟದೇಶಗಳ ಸಂಖ್ಯೆ 11ಕ್ಕೆ ಏರಿದೆ.

ಈ ನಡುವೆ ಅಮೆರಿಕ ಖ್ಯಾತ ಸಾಂಕ್ರಾಮಿ ರೋಗ ತಜ್ಞ ಡಾ. ಆ್ಯಂಥೋನಿ ಫೌಸಿ, ಅಮೆರಿಕದಲ್ಲಿ ಇದುವರೆಗೆ ಹೊಸ ವೈರಸ್‌ ಪತ್ತೆಯಾಗದೇ ಇರಬಹುದು. ಆದರೆ ಅದು ಈಗಾಗಲೇ ದೇಶವನ್ನು ಪ್ರವೇಶಿರುವ ಎಲ್ಲಾ ಸಾಧ್ಯತೆಗಳಿವೆ ಎಂದಿದ್ದಾರೆ. ಮತ್ತೊಂದೆಡೆ ರಷ್ಯಾದ ಸಚಿವರೊಬ್ಬರು ಕೂಡಾ, ಈಗಾಗಲೇ ಹೊಸ ವೈರಸ್‌ ತಮ್ಮ ದೇಶ ಪ್ರವೇಶ ಮಾಡಿರುವುದು ಖಚಿತ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಹೊಸ ಹೊಸ ವೈರಸ್‌ ದಿನೇ ದಿನೇ ಮತ್ತಷ್ಟುದೇಶಗಳಿಗೆ ಹಬ್ಬಿರುವುದು ಖಚಿತಪಡುತ್ತಲೇ, ವಿಶ್ವದ ಹಲವು ದೇಶಗಳು ಆಫ್ರಿಕಾ ದೇಶಗಳ ಮೇಲೆ ವಿಮಾನ ಮತ್ತು ಜನರ ಸಂಚಾರದ ಮೇಲೆ ನಿಷೇಧ ಹೇರಿವೆ. ಜೊತೆಗೆ ಇತರೆ ದೇಶಗಳ ಪ್ರಯಾಣಿಕರ ಮೇಲೂ ನಿರ್ಬಂಧಗಳನ್ನು ಕಠಿಣಗೊಳಿಸಿವೆ.

"

ಹೊಸ ರೂಪಾಂತರಿ ಕೊರೋನಾ ವೈರಸ್‌ ಪತ್ತೆ (Covid New Variant) ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ (International Travel) ವಿಧಿಸಲಾಗಿದ್ದ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿ ಕೇಂದ್ರ ಸರ್ಕಾರ (Union Health Ministry) ನಿರ್ಧಾರ ಕೈಗೊಂಡಿದೆ. ಪರಿಷ್ಕೃತ ಮಾರ್ಗ ಸೂಚಿ ಡಿ.1ರಿಂದಲೇ ಜಾರಿಗೆ ಬರಲಿದೆ. ಇದೇ ವೇಳೆ ಹೊಸ ವೈರಸ್‌ ಪತ್ತೆ ಹಿನ್ನೆಲೆಯಲ್ಲಿ ಡಿ.15ರಿಂದ ಪುನಾರಂಭಿಸಲು ನಿರ್ಧರಿಸಲಾಗಿದ್ದ ಅಂತಾರಾಷ್ಟ್ರೀಯ ವಿಮಾನಗಳ ಸೇವೆಗಳು ಕೂಡಾ ರದ್ದಾಗುವ ಸಾಧ್ಯತೆ ಇದೆ.

ಮಾರ್ಗಸೂಚಿಗಳು:

*14 ದಿನಗಳ ಪ್ರವಾಸ ಇತಿಹಾಸದ ಪೂರ್ಣ ಮಾಹಿತಿ ನೀಡಬೇಕು

*72 ಗಂಟೆಗಳ ಮೊದಲ ಕೋವಿಡ್‌ ನೆಗೆಟಿವ್‌ ವರದಿ ಸಲ್ಲಿಸಬೇಕು

*ಮಾಹಿತಿ ಖಚಿತ ಎಂದು ಪ್ರಯಾಣಿಕರು ಸ್ವಯಂ ಧೃಢೀಕರಿಸಬೇಕು

*12 ಅಪಾಯಕಾರಿ ದೇಶಗಳ ಪ್ರಯಾಣಿಕರಿಗೆ ಇನ್ನಷ್ಟುಕಠಿಣ ನಿಯಮ

*ಭಾರತಕ್ಕೆ ಆಗಮನಕ್ಕೆ ಮೊದಲು, ಬಂದ ಬಳಿಕ ಪರೀಕ್ಷೆಗೆ ಒಳಪಡಬೇಕು

*ಪರೀಕ್ಷೆ ವರದಿ ಬರುವವರೆಗೂ ಏರ್‌ಪೋರ್ಟ್‌ನಿಂದ ತೆರಳುವಂತಿಲ್ಲ

*ನೆಗೆಟಿವ್‌ ಬಂದರೂ 7 ದಿನ ಹೋಮ್‌ ಕ್ವಾರಂಟೈನ್‌ ಮಾಡಬೇಕು

*8ನೇ ದಿನ ಮತ್ತೆ ಪರೀಕ್ಷೆ ನಡೆಸಿ ಮತ್ತೆ 7 ದಿನ ಸ್ವಯಂ ಕಣ್ಗಾವಲು ಇಡಬೇಕು

Follow Us:
Download App:
  • android
  • ios