* ತಾಲಿಬಾನ್ ಉಗ್ರರು ದೇಶದಲ್ಲಿ ಸೃಷ್ಟಿಸುತ್ತಿರುವ ಹಿಂಸಾಚಾರ ಮತ್ತು ಅರಾಜಕತೆ* ನೆರೆಯ ರಾಷ್ಟ್ರಗಳಲ್ಲಿ ಆಶ್ರಯ ಬಯಸುತ್ತಿರುವ ಅಪ್ಘಾನ್ ನಿರಾಶ್ರಿತರು* ಬಾಂಗ್ಲಾದೇಶ, ಟರ್ಕಿ, ತಜಕಿಸ್ತಾನ, ಉಜ್ಬೇಕಿಸ್ತಾನ, ತುರ್ಕ್ಮೆನಿಸ್ತಾನ ಸೇರಿ ಹಲವು ರಾಷ್ಟ್ರಗಳಲ್ಲಿ ಪ್ರವೇಶ ನಿರ್ಬಂಧ
ಕಾಬೂಲ್(ಆ.18): ತಾಲಿಬಾನ್ ಉಗ್ರರು ದೇಶದಲ್ಲಿ ಸೃಷ್ಟಿಸುತ್ತಿರುವ ಹಿಂಸಾಚಾರ ಮತ್ತು ಅರಾಜಕತೆಯಿಂದ ದಿಕ್ಕು ತೋಚದ ಅಷ್ಘಾನಿಸ್ತಾನದ ನಿರಾಶ್ರಿತರು ನೆರೆಯ ರಾಷ್ಟ್ರಗಳಲ್ಲಿ ಆಶ್ರಯ ಬಯಸುತ್ತಿದ್ದಾರೆ. ಆದರೆ ಅಷ್ಘಾನಿಸ್ತಾನದ ಸುತ್ತಮುತ್ತಲಿನ ರಾಷ್ಟ್ರಗಳಾದ ಬಾಂಗ್ಲಾದೇಶ, ಟರ್ಕಿ, ತಜಕಿಸ್ತಾನ, ಉಜ್ಬೇಕಿಸ್ತಾನ, ತುರ್ಕ್ಮೆನಿಸ್ತಾನ ಸೇರಿದಂತೆ ಇನ್ನಿತರ ರಾಷ್ಟ್ರಗಳು ಆಫ್ಘನ್ ನಿರಾಶ್ರಿತರಿಗೆ ಆಶ್ರಯ ಒದಗಿಸಲು ನಿರಾಕರಿಸಿವೆ.
ಅಲ್ಲದೆ ಆಷ್ಘಾನಿಸ್ತಾನ ಸೇನೆ ಮತ್ತು ತಾಲಿಬಾನ್ ಉಗ್ರರ ನಡುವಿನ ಹೋರಾಟದ ವೇಳೆಯೇ ಆಫ್ಘನ್ ನಿರಾಶ್ರಿತರು ತನ್ನ ದೇಶ ನುಸುಳುತ್ತಾರೆ ಎಂಬ ಕಾರಣಕ್ಕೆ ತನ್ನ ಗಡಿಯಲ್ಲಿ ಸೇನಾ ಬಂದೋಬಸ್‌ನ್ನು ಮಾಡಿತ್ತು.
ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿಗಳನ್ನುದ್ದೇಶಿಸಿ, ಅಷ್ಘಾನಿಸ್ತಾನದಲ್ಲಿರುವ ಭಾರತೀಯರ ರಕ್ಷಣೆಯಷ್ಟೇ ಅಲ್ಲದೆ, ಭಾರತದ ನೆರವು ಕೋರುವ ಆಫ್ಘನ್ ಸೋದರ ಮತ್ತು ಸೋದರಿಯರಿಗೆ ಸಹಾಯ ಹಸ್ತ ಚಾಚುವಂತೆ ಕೋರಿದ್ದಾರೆ.
