ಹಿಂದೂಗಳ ರಕ್ಷಣೆಗೆ ಬಾಂಗ್ಲಾದೇಶ ಸರ್ಕಾರ 2 ಕ್ರಮ: ನಿಮ್ಮ ರಕ್ಷಣೆಗೆ ಬದ್ಧ ಎಂದ ಮುಹಮ್ಮದ್ ಯೂನಸ್..!

ಹಿಂದೂಗಳ ತಂಟೆಗೆ ಹೋದರೆ ಕ್ರಮ ಹಿಂದೂಗಳ ರಕ್ಷಣೆ ಮಾಡುತ್ತೇವೆ. ನಾವೆಲ್ಲ ಒಂದೇ ಕುಟುಂಬ ಇದ್ದಂತೆ. ಯಾರ ಬಗ್ಗೆಯೂ ತಾರತಮ್ಯ ಮಾಡಲ್ಲ, ಹಿಂದೂಗಳ ಮೇಲೆ ದಾಳಿ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ: ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ 
 

Bangladesh government 2 measures to protect Hindus grg

ಢಾಕಾ(ಆ.14):  ಶೇಖ್ ಹಸೀನಾ ಪ್ರಧಾನಿ ಹುದ್ದೆ ತೊರೆದು ದೇಶದಿಂದ ಪಲಾಯನಗೈದ ಬಳಿಕ ಬಾಂಗ್ಲಾದೇಶದಲ್ಲಿ ಹಿಂದೂ ವಿರೋಧಿ ಕೃತ್ಯಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಿಂದೂಗಳ ರಕ್ಷಣೆಗೆ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಮಂಗಳವಾರ 2 ಕ್ರಮ ಕೈಗೊಂಡಿದೆ. ಖುದ್ದು ಯೂನಸ್ ಅವರು ಶಕ್ತಿ ಪೀಠಗಳಲ್ಲಿ ಒಂದಾದ ಢಾಕೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂದೂಗಳ ರಕ್ಷಣೆಗೆ ತಾವು ಬದ್ಧ ಎಂದು ಸಾರಿ ನೈತಿಕ ಸ್ಟೈರ್ಯ ತುಂಬಿದ್ದಾರೆ. ಇನ್ನೊಂದೆಡೆ ಇಂಥ ದಾಳಿಗಳನ್ನು ತಡೆಯಲು ಬಾಂಗ್ಲಾ ಸರ್ಕಾರ ಹಿಂದೂಗಳಿಗೆ ವಿಶೇಷ ಸಹಾಯವಾಣಿ ಆರಂಭಿಸಿದೆ.

ಶೇಖ್ ಹಸೀನಾ ಸರ್ಕಾರದ ಪತನದ ನಂತರ ಹಿಂದೂ ದೇಗುಲಗಳು ಹಾಗೂ ಆಸ್ತಿಪಾಸ್ತಿಗಳ ಮೇಲೆ ಪುಂಡರು ಅವ್ಯಾಹತ ದಾಳಿ ಮಾಡಿದ್ದರು. ಇದರಿಂದ ಬೆಚ್ಚಿದ ಹಿಂದೂಗಳು ಭಾರತಕ್ಕೆ ವಲಸೆ ಹೋಗುವ ಯೋಚನೆ ಮಾಡಿದ್ದರು. 

ಬಂಗಾಳ ಕೊಲ್ಲಿಯಲ್ಲಿ ತಳಮಳ: ಸೈಂಟ್ ಮಾರ್ಟಿನ್ಸ್ ದ್ವೀಪ ಮತ್ತು ಶೇಖ್ ಹಸೀನಾ ಪದಚ್ಯುತಿ ನಡುವೆ ಒಳಸಂಚು?

ಢಾಕೇಶ್ವರಿ ದೇವಸ್ಥಾನಕ್ಕೆ ಬಾಂಗ್ಲಾದೇಶ ಸರ್ಕಾರ

ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ, ಶಕ್ತಿ ಪೀಠಗಳಲ್ಲಿ ಒಂದಾದ ಢಾಕೇಶ್ವರಿ ದೇವಸ್ಥಾನಕ್ಕೆ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಮಂಗಳವಾರ ಭೇಟಿ ನೀಡಿದರು. ಹಿಂದೂಗಳ ಜತೆ ಸಭೆ ನಡೆಸಿ, ರಕ್ಷಣೆ ಕೊಡುವುದಾಗಿ ಭರವಸೆ ನೀಡಿದರು.

ಪ್ರತ್ಯೇಕ ರಾಷ್ಟ್ರ ಕೇಳ್ತಿದ್ದಾರೆ ಹಿಂದೂಗಳು? ಬಾಂಗ್ಲಾ ನಿಮ್ಮಪ್ಪನ ಆಸ್ತಿ ಅಲ್ಲ ಅಂತಿದ್ದಾರೆ ಹೋರಾಟಗಾರರು!

ಹಿಂದೂಗಳ ತಂಟೆಗೆ ಹೋದರೆ ಕ್ರಮ ಹಿಂದೂಗಳ ರಕ್ಷಣೆ ಮಾಡುತ್ತೇವೆ. ನಾವೆಲ್ಲ ಒಂದೇ ಕುಟುಂಬ ಇದ್ದಂತೆ. ಯಾರ ಬಗ್ಗೆಯೂ ತಾರತಮ್ಯ ಮಾಡಲ್ಲ, ಹಿಂದೂಗಳ ಮೇಲೆ ದಾಳಿ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ತಿಳಿಸಿದ್ದಾರೆ. 

48 ಜಿಲ್ಲೆಯ 278 ಕಡೆ ಹಿಂದೂ ಮೇಲೆ ದಾಳಿ

ಢಾಕಾ: 'ಮಾಜಿ ಪ್ರಧಾನಿ ಶೇಖ್‌ ಹಸೀನಾ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ನಂತರ 48 ಜಿಲ್ಲೆಗಳಲ್ಲಿ 278 ಸ್ಥಳಗಳಲ್ಲಿ ಅಲ್ಪಸಖ್ಯಾತರಾದ ಹಿಂದೂ ಸಮುದಾಯದ ಮೇಲೆ ದಾಳಿ ನಡೆದಿದೆ. ಇದು ಕೇವಲ ಹಿಂದೂ ಜನರ ಮೇಲಿನ ದಾಳಿ ಅಲ್ಲ. ಹಿಂದೂ ಧರ್ಮದ  ಮೇಲೆ ಆಕ್ರಮಣ' ಎಂದು ಹಿಂದೂ ಮುಖಂಡರು ಹೇಳಿದ್ದಾರೆ.

Latest Videos
Follow Us:
Download App:
  • android
  • ios