70 ಹುಲಿಗಳ ಹಂತಕ ಕೊನೆಗೂ ಸೆರೆ!

* ಬಾಂಗ್ಲಾ: 70 ಹುಲಿ ಕೊಂದವ ಕೊನೆಗೂ ಸೆರೆ

* 20 ವರ್ಷದಿಂದ ಹುಲಿಬೇಟೆ ಆಡುತ್ತಿದ್ದ ಟೈಗರ್‌ ಹಬೀಬ್‌

* ಹಬೀಬ್‌ ತಾಲೂಕ್ದಾರ್‌ ಎಂಬಾತ ಹುಲಿ ಬೇಟೆಯ ಕಾರಣಕ್ಕೆ ‘ಟೈಗರ್‌ ಹಬೀಬ್‌’ ಎಂದೇ ಕುಖ್ಯಾತಿ ಗಳಿಸಿದ್ದ

Bangladesh arrests suspect believed to have killed 70 tigers pod

ಢಾಕಾ(ಜೂ.02): ಅಳಿವಿನ ಅಂಚಿನಲ್ಲಿರುವ 70ಕ್ಕೂ ಹೆಚ್ಚು ಬಂಗಾಳ ಹುಲಿಗಳನ್ನು ಹತ್ಯೆ ಮಾಡಿ ಕಳೆದ 2 ದಶಕಗಳಿಂದ ತಲೆ ಮರೆಸಿಕೊಂಡಿದ್ದ ಕುಖ್ಯಾತ ಬೇಟೆಗಾರನೊಬ್ಬನನ್ನು ಬಂಧಿಸುವಲ್ಲಿ ಬಂಧಿಸುವಲ್ಲಿ ಬಾಂಗ್ಲಾದೇಶ ಪೊಲೀಸರು ಕೊನೆಗೂ ಯಶಸ್ವಿ ಆಗಿದ್ದಾರೆ.

ಹಬೀಬ್‌ ತಾಲೂಕ್ದಾರ್‌ ಎಂಬಾತ ಹುಲಿ ಬೇಟೆಯ ಕಾರಣಕ್ಕೆ ‘ಟೈಗರ್‌ ಹಬೀಬ್‌’ ಎಂದೇ ಕುಖ್ಯಾತಿ ಗಳಿಸಿದ್ದ. ಭಾರತ ಮತ್ತು ಬಾಂಗ್ಲಾದೇಶ ಗಡಿಗೆ ಹೊಂದಿಕೊಂಡಿರುವ ಸುಂದರಬನ ಮ್ಯಾಂಗ್ರೋವ್‌ ಕಾಡುಗಳ ಸಮೀಪ ಜೇನು ಸಾಕಣೆ ನೆಪದಲ್ಲಿ ಹುಲಿಗಳನ್ನು ಈತ ಬೇಟೆ ಆಡುತ್ತಿದ್ದ. ಅಧಿಕಾರಿಗಳು ಈತ ವಾಸಿಸುವ ಸ್ಥಳದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪೊಲೀಸರಿಗೆ ಚಳ್ಳೇ ಹಣ್ಣು ತಿನ್ನಿಸಿ ಪರಾರಿ ಆಗುತ್ತಿದ್ದ. ದಕ್ಷಿಣ ಬಗೇರ್‌ಹಾತ್‌ ಪ್ರದೇಶದ ತನ್ನ ಮನೆಯಲ್ಲಿ ಇದ್ದ ವೇಳೆ ಹಬೀಬ್‌ನÜನ್ನು ಪೊಲೀಸರು ಬಂಧಿಸಿದ್ದಾರೆ.

ಬಂಡೀಪುರ ವಸತಿ ಗೃಹ ಹಾಗೂ ಸಫಾರಿಗೆ ನಿರ್ಬಂಧ

ಈತನಿಂದ ಹುಲಿಯ ಚರ್ಮ, ಹಲ್ಲು, ಮೂಳೆಗಳು ಹಾಗೂ ಮಾಂಸವನ್ನು ಕಾಳಸಂತೆ ವ್ಯಾಪಾರಿಗಳು ಖರೀದಿಸಿ ಚೀನಾ ಹಾಗೂ ಬೇರೆಡೆ ಮಾರಾಟ ಮಾಡುತ್ತಿದ್ದರು. ಅಲ್ಲದೇ ಸುಂದರಬನ ಕಾಡುಗಳಲ್ಲಿ ಕಾಡು ಪ್ರಾಣಿಗಳ ಬೇಟೆಯಲ್ಲಿ ತೊಡಗಿರುವ ಗ್ಯಾಂಗಿನ ಜೊತೆಗೂ ಹಬೀಬ್‌ ಸಂಪರ್ಕದಲ್ಲಿ ಇದ್ದ. ಇದುವರೆಗೆ ಈತ ಸುಮಾರು 70 ಬಂಗಾಳ ಹುಲಿಗಳನ್ನು ಹತ್ಯೆ ಮಾಡಿರುವ ಶಂಕೆ ಇದೆ. 20ನೇ ವಯಸ್ಸಿನಲ್ಲಿಯೇ ಈತ ಹುಲಿ ಬೇಟೆ ಆಡುವುದನ್ನು ಆರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios