ಬುರ್ಖಾ ಧರಿಸಿದ್ದ ಮಹಿಳೆಗೆ ನಿಷೇಧ, ಪ್ರಸಿದ್ಧ ರೆಸ್ಟೋರೆಂಟ್‌ಗೇ ಬಿತ್ತು ಬೀಗ!
* ಬುರ್ಖಾ ಧರಿಸಿ ಬಂದ ಮಹಿಳೆಗೆ ರೆಸ್ಟೋರೆಂಟ್ ಪ್ರವೇಶ ನಿರ್ಬಂಧ
* ಮಹಿಳೆಗೆ ನಿರ್ಬಂಧ ಹೇರಿದ ರೆಸ್ಟೋರೆಂಟ್‌ಗೆ ಬಿತ್ತು ಬೀಗ
* ಬಹ್ರೇನ್‌ನ ರಾಜಧಾನಿ ಮನಾಮದಲ್ಲಿರುವ ಪ್ರಸಿದ್ಧ ಅದಾಲಿಯಾ ರೆಸ್ಟೋರೆಂಟ್‌ನಲ್ಲಿ ಘಟನೆ
ಬಹ್ರೇನ್(ಮಾ.27): ಬಹ್ರೇನ್‌ನ ರಾಜಧಾನಿ ಮನಾಮದಲ್ಲಿರುವ ಪ್ರಸಿದ್ಧ ಅದಾಲಿಯಾ ರೆಸ್ಟೋರೆಂಟ್‌ಗೆ ಬುರ್ಖಾ ಧರಿಸಿದ್ದ ಮಹಿಳೆಯನ್ನು ಪ್ರವೇಶಿಸದಂತೆ ತಡೆದ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಮಹಿಳೆ ರೆಸ್ಟೋರೆಂಟ್ ಪ್ರವೇಶಿಸಲು ಯತ್ನಿಸಿದಾಗ ಆಕೆಗೆ ಅನುಮತಿ ನೀಡಿಲ್ಲ. ಈ ಘಟನೆಯ ನಂತರ, ಬಹ್ರೇನ್ ಪ್ರವಾಸೋದ್ಯಮ ಮತ್ತು ಪ್ರದರ್ಶನ ಪ್ರಾಧಿಕಾರವು ಭಾರತ ಮೂಲದ ರೆಸ್ಟೋರೆಂಟ್ ಅನ್ನು ಮುಚ್ಚಿದೆ.
ಬಹ್ರೇನ್‌ನ ದಿ ಡೈಲಿ ಟ್ರಿಬ್ಯೂನ್ ನ್ಯೂಸ್ ಪ್ರಕಾರ, ಇತ್ತೀಚೆಗೆ ವೀಡಿಯೋ ಒಂದು ವೈರಲ್ ಆಗಿತ್ತು. ಬುರ್ಖಾ ಧರಿಸಿದ್ದ ಮಹಿಳೆಗೆ ರೆಸ್ಟೋರೆಂಟ್ ಸಿಬ್ಬಂದಿ ಅವಕಾಶ ನಿರಾಕರಿಸಿರುವುದು ಇದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಇದಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಈ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ. ಆದರೆ, ಪ್ರಾಥಮಿಕ ಕ್ರಮ ಕೈಗೊಂಡು ರೆಸ್ಟೋರೆಂಟ್ ಮುಚ್ಚಲಾಗಿದೆ.
ಎಲ್ಲ ರೆಸ್ಟೋರೆಂಟ್‌ಗಳಿಗೆ ಪ್ರಾಧಿಕಾರದಿಂದ ಆದೇಶ ಹೊರಡಿಸಲಾಗಿದೆ. ಇದರಲ್ಲಿ ಯಾರೂ ನಿಯಮಗಳನ್ನು ಉಲ್ಲಂಘಿಸಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಇದರೊಂದಿಗೆ ಜನರ ವಿರುದ್ಧ ತಾರತಮ್ಯ ಮಾಡುವ ಯಾವುದೇ ಘಟನೆಯನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ವಿಶೇಷವಾಗಿ ಅಂತಹ ಸಂದರ್ಭಗಳಲ್ಲಿ ವ್ಯಕ್ತಿಯ ರಾಷ್ಟ್ರೀಯತೆ ಪ್ರತಿಫಲಿಸುತ್ತದೆ ಎಂದೂ ಉಲ್ಲೇಖಿಸಲಾಗಿದೆ.
ಪ್ರಾಧಿಕಾರದಿಂದ ಸಂಖ್ಯೆ (17007003) ಸಹ ನೀಡಲಾಗಿದೆ. ಇದರೊಂದಿಗೆ ದೇಶದಲ್ಲಿ ಎಲ್ಲಿಯಾದರೂ ಇಂತಹ ಘಟನೆ ನಡೆದರೆ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿ ಗ್ರಾಹಕ ಸಂರಕ್ಷಣಾ ಕೇಂದ್ರಕ್ಕೆ ದೂರು ನೀಡಬಹುದು ಎಂದು ಮನವಿ ಮಾಡಲಾಗಿದೆ.
ಈ ಮಧ್ಯೆ, ರೆಸ್ಟೋರೆಂಟ್ ಆಡಳಿತ ಮಂಡಳಿಯಿಂದ ಹೇಳಿಕೆ ಬಿಡುಗಡೆಯಾಗಿದೆ. ಇದರಲ್ಲಿ ಮಹಿಳೆಗೆ ಎಂಟ್ರಿ ಕೊಡದಿದ್ದಕ್ಕೆ ಮಂಡಳಿ ಕ್ಷಮೆ ಯಾಚಿಸಿದೆ. ಅಲ್ಲದೇ ಸಿಬ್ಬಂದಿಯ ತಪ್ಪಿನಿಂದ ಇದು ಆಕಸ್ಮಿಕ ಘಟನೆಯಾಗಿದೆ ಎಂದು ಹೇಳಿದ್ದಾರೆ. ನಾವು ಅದನ್ನು ಖಂಡಿಸುತ್ತೇವೆ. ಅಲ್ಲದೆ, ನಮ್ಮ ತನಿಖೆಯ ಸಮಯದಲ್ಲಿ ನಾವು ಕರ್ತವ್ಯ ನಿರ್ವಾಹಕರನ್ನು ಅಮಾನತುಗೊಳಿಸಿದ್ದೇವೆ. ಕಳೆದ 35 ವರ್ಷಗಳಿಂದ ನಾವು ಜನರಿಗೆ ಅತ್ಯುತ್ತಮ ಸೇವೆಗಳನ್ನು ನೀಡುತ್ತಿದ್ದೇವೆ. ಯಾರ ಭಾವನೆಗಳಿಗೂ ಧಕ್ಕೆ ತರುವುದು ನಮ್ಮ ಉದ್ದೇಶ. ಆ ನೌಕರನನ್ನು ಅಮಾನತು ಮಾಡಿದ್ದೇವೆ ಎಂದಿದೆ.