ಬಹ್ರೇನ್‌ನಲ್ಲಿ ಎಲ್ಲರಿಗೂ ಉಚಿತ ಕೊರೋನಾ ಲಸಿಕೆ| ನಿತ್ಯ ಸಾವಿರ ಮಂದಿಗೆ ಲಸಿಕೆ ವಿತರಣೆ

ದುಬೈ(ಡಿ.12): ಫೈಝರ್‌ ಕೊರೋನಾ ಲಸಿಕೆ ಬಳಕೆಗೆ ಸೌದಿ ಅರೇಬಿಯಾ ಅನುಮೋದನೆ ನೀಡಿದ ಬೆನ್ನಲ್ಲೇ, ಗಲ್‌್ಫ ರಾಷ್ಟ್ರಗಳ ಪೈಕಿ ಒಂದಾದ ಬಹ್ರೇನ್‌ ಸಾರ್ವಜನಿಕರಿಗೆ ಉಚಿತ ಕೊರೋನಾ ಲಸಿಕೆ ವಿತರಿಸುವುದಾಗಿ ಪ್ರಕಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಹ್ರೇನ್‌ನ ಎಲ್ಲಾ ನಾಗರಿಕರಿಗೆ ಉಚಿತವಾಗಿ ಕೊರೋನಾ ಲಸಿಕೆ ವಿತರಿಸಲಾಗುವುದು ಎಂದು ಸರ್ಕಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರತಿ ದಿನ 10,000 ಲಸಿಕೆಯಂತೆ 18 ವರ್ಷ ಮೇಲ್ಪಟ್ಟಎಲ್ಲರಿಗೂ ಲಸಿಕೆ ನೀಡುವ ಉದ್ದೇಶವನ್ನು ಬಹ್ರೇನ್‌ ಹೊಂದಿದೆ. ಸೌದಿ ಅರೇಬಿಯಾ ಕರಾವಳಿಗೆ ಹೊಂದಿಕೊಂಡಿರುವ ಪುಟ್ಟದ್ವೀಪವಾಗಿರುವ ಬಹ್ರೇನ್‌ ಸುಮಾರು 15 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಒಂದು ವಾರದ ಹಿಂದೆ ಫೈಝರ್‌ ಲಸಿಕೆಯ ತುರ್ತು ಬಳಕೆಗೆ ಬಹ್ರೇನ್‌ ಅನುಮೋದನೆ ನೀಡಿತ್ತು.

ಈ ಮೂಲಕ ಫೈಝರ್‌ ಲಸಿಕೆಗೆ ಅನುಮೋದನೆ ನೀಡಿದ ಎರಡನೇ ದೇಶ ಎನಿಸಿಕೊಂಡಿತ್ತು.