Asianet Suvarna News Asianet Suvarna News

ಅಯೋಧ್ಯೆ ತೀರ್ಪು ಮೋದಿಗೆ ಸಿಕ್ಕ ಜಯ: ಅಂತಾರಾಷ್ಟ್ರೀಯ ಮಾಧ್ಯಮ

ಅಯೋಧ್ಯೆ ರಾಮ ಮಂದಿರ ಬಾಬರಿ ಮಸೀದಿ ಭೂ ವಿವಾದಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕಿದೆ. ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಇಡೀ ದೇಶವೇ ತಲೆ ಬಾಗಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಹಿಂದು-ಮುಸ್ಲಿಮರು ಒಮ್ಮತದಿಂದ ತೀರ್ಪನ್ನು ಸ್ವಾಗತಿಸಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಈ ತೀರ್ಪನ್ನು ವಿಶ್ಲೇಷಿಸಿದ್ದೇ ಬೇರೆ ರೀತಿ. ಹೇಗದು? ನೀವೇ ಓದಿ..

Ayodhya verdict is victory for Modi claims international media
Author
Bengaluru, First Published Nov 11, 2019, 5:38 PM IST

ಹೊಸದಿಲ್ಲಿ (ನ.11): ಹಲವು ದಶಕಗಳಿಂದ ಕಾದಿದ್ದ ಅಯೋಧ್ಯೆ ತೀರ್ಪು ಹೊರ ಬಿದ್ದಿದೆ. ಮೇಲ್ನೋಟಕ್ಕೆ ಹಿಂದೂಗಳ ಪರ ತೀರ್ಪಿದೆ ಎಂದೆನಿಸಿದರೂ, ಎಲ್ಲರಿಗೂ ನ್ಯಾಯ ಸಿಗುವಂತ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದೆ. ಭಾರತದಲ್ಲಿ ಹಿಂದು ಹಾಗೂ ಮುಸ್ಲಿಮರು ಈ ತೀರ್ಪನ್ನು ತುಂಬು ಹೃದಯದಿಂದ ಸ್ವೀಕರಿಸಿದ್ದು, ಕೋಮು ಸಾಮರಸ್ಯ ಹೆಚ್ಚಲು ಕಾರಣವಾಗಲಿದೆ ಎಂದೇ ವ್ಯಾಖ್ಯಾನಿಸಲಾಗಿದೆ. ಆದರೆ, ಈ ತೀರ್ಪನ್ನು  ಅವರವರ ಭಕುತಿ, ಭಾವಕ್ಕೆ ತಕ್ಕಂತೆ ಹಲವರು ಪ್ರತಿಕ್ರಿಯೆ ನೀಡಿದ್ದು, ಅಮೆರಿಕ, ಬ್ರಿಟನ್ ಹಾಗೂ ಪಾಕಿಸ್ತಾನದ ಪ್ರಮುಖ ಮಾಧ್ಯಮಗಳು ಈ ತೀರ್ಪನ್ನು 'ಭಾರತದ ಪ್ರಧಾನಿ ಮೋದಿಗೆ ದಕ್ಕಿದ ಜಯ' ಎಂದೇ ವ್ಯಾಖ್ಯಾನಿಸಿವೆ.

ಲೋಕಸಭಾ ಚುನಾವಣೆಯಲ್ಲಿ ಗೆದ್ದ ಆರು ತಿಂಗಳಲ್ಲಿ ಮೋದಿಗೆ ಸಿಕ್ಕ ಮತ್ತೊಂದು ದೊಡ್ಡ ಜಯ, ಎಂದು ಗಾರ್ಡಿಯನ್ ಹೇಳಿದೆ. 

ಅಯೋಧ್ಯೆ ತೀರ್ಪು ಪಾಕ್ ಸುಪ್ರೀಂಗೆ ಹೋಲಿಕೆ: ನ್ಯಾಷನಲ್ ಹೆರಾಲ್ಡ್ ವಿವಾದ

ಶನಿವಾರ ಭಾರತದ ಸುಪ್ರೀಂ ಕೋರ್ಟ್ ನೀಡಿದ ತೀರ್ಪು 'ದೇಶದ ಎರಡು ಕೋಮುಗಳ ನಡುವೆ ಸಾಮರಸ್ಯ ನೀಡಲು ನೆರವಾಗಲಿದೆ,' ಎಂದು ಬಿಬಿಸಿ ವಿಶ್ಲೇಷಿಸಿದರೆ, 'ರಾಜಕೀಯ ಪ್ರೇರಿತ ಭೂ ವಿವಾದವೊಂದು ಅಂತ್ಯವಾಗಿದೆ,' ಎಂದು ಸಿಎನ್‌ಎನ್ ಅಭಿಪ್ರಾಯ ವ್ಯಕ್ತಪಡಿಸಿದೆ. 

'ಸುಪ್ರೀಂ ಕೋರ್ಟ್ ಹಿಂದುಗಳನ್ನು ಬೆಂಬಲಿಸಿದ್ದು, ಭಾರತವನ್ನು ಮರು ಸೃಷ್ಟಿಸಲು ಪ್ರಧಾನಿ ಮೋದಿಗೆ ಸಿಕ್ಕಿದ ಜಯವಿದು,' ಎಂದು ದಿ ನ್ಯಾಯಾರ್ಕ್ ಟೈಮ್ಸ್ ವರದಿ ಮಾಡಿದೆ. ಈ ಲೇಖನವನ್ನು ಮಾರಿಯಾ ಅಬಿ ಹಬೀಬ್ ಮತ್ತು ಸಮೀರ್ ಯಾಸೀರ್ ಅವರು ಜಂಟಿಯಾಗಿ ಬರೆದಿದ್ದು, 'ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪುನರ್‌ನಿರ್ಮಿಸಲು ಹಾಗೂ ಭಾರತದ ಜಾತ್ಯತೀತ ತತ್ವವನ್ನು ಅಲುಗಾಡಿಸಲು ಮೋದಿ ಹಾಗೂ ಅವರ ಅನುಯಾಯಿಗಳಿಗೆ ಸಿಕ್ಕಿದ ಜಯವಿದು,'  ಎಂದೇ ಆರೋಪಿಸಿದ್ದಾರೆ. 

'ವಿವಾದಿತ ಭೂಮಿಯಲ್ಲಿ ಹಿಂದೂ ಮಂದಿರ ಕಟ್ಟಲು ಅನುವು ಮಾಡಿಕೊಟ್ಟ ಭಾರತದ ಸುಪ್ರೀಂ ಕೋರ್ಟ್' ಎಂಬ ಶಿರ್ಷಿಕೆ ಅಡಿಯಲ್ಲಿ ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಟಿಸಿದ್ದು, 'ಹಿಂದು-ಮುಸ್ಲಿಮರ ಭೂ ವ್ಯಾಜ್ಯದಲ್ಲಿ ಹಿಂದುಗಳಿಗೆ ಭೂ ಹಕ್ಕು ಸಿಕ್ಕಿದ್ದು, ಇದು ಪ್ರಧಾನಿ ಮೋದಿ ಅವರಿಗೆ ದಕ್ಕಿದ ವಿಜಯ,' ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. 

ಅಯೋಧ್ಯೆ ಆದೇಶ: ಕನ್ನಡ ಪತ್ರಿಕೆಗಳ ಪುಟವೇ ವಿಶೇಷ

ಪಾಕಿಸ್ತಾನ ಮಾಧ್ಯಮ ಹೇಳಿದ್ದೇನು?
ಪಾಕಿಸ್ತಾನದ ದೈನಿಕ ಡಾನ್, 'ಈಗಾಗಲೇ ಭಾರತದಲ್ಲಿ ಹಿಂದು-ಮುಸ್ಲಿಂ ಬಾಂಧವ್ಯ ಹಳಸಿದ್ದು, ಈ ತೀರ್ಪು ಮತ್ತಷ್ಟು ಸಾಮರಸ್ಯವನ್ನು ಹದಗೆಡಿಸುತ್ತದೆ,' ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. 'ಬಾಬರಿ ಮಸೀದಿ ಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸಲು ಭಾರತದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ,' ಎಂದು ಮತ್ತೊಂದು ದೈನಿಕ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಪ್ರಕಟಿಸಿದೆ. 

ಆದರೆ, ಬಾಂಗ್ಲಾದೇಶದ ಡೈಲಿ ಸ್ಟಾರ್ 'ಸಮತೋಲನ ತೀರ್ಪಿದು' ಎಂದು ಹೇಳಿದೆ. 

Ayodhya verdict is victory for Modi claims international media

'ಈ ತೀರ್ಪು ಹಿಂದು ಕಟ್ಟರ್‌ವಾದಿಗಳು ಹೆಚ್ಚು ಅಧಿಕಾರ ಅನುಭವಿಸಲು ನೆರವಾಗಲಿದ್ದು, ಭಾರತದ ಸೂಕ್ಷ್ಮ ಪ್ರಕರಣವನ್ನು ಜಾತ್ಯತೀತ ಭಾರತ ಹೇಗೆ ನಿಭಾಯಿಸಬಲ್ಲದು ಎಂಬುದಕ್ಕೆ ಪರೀಕ್ಷೆ. ಅಯೋಧ್ಯೆಯಲ್ಲಿ ಹಿಂದೂ ಮಂದಿರವನ್ನು ನಿರ್ಮಿಸುವುದು ಪ್ರಧಾನಿ ಮೋದಿಯವರ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಈ ತೀರ್ಪು ಕೋಮು ಗಲಭೆ ಇತಿಹಾಸ ಇರುವ ದೇಶವನ್ನು ಸಾಮಾಜಿಕವಾಗಿ ಒಡೆಯಲಿದೆ, '  ಎಂದೂ ಹೇಳಿದೆ. 

ಅಯೋಧ್ಯೆ ತೀರ್ಪು: ಜಾಲತಾಣದಲ್ಲೂ ಸೌಹಾರ್ದತೆ

ಸುಮಾರು ಏಳು ದಶಕಗಳ ಕಾಲ ನಡೆದ ಅಯೋಧ್ಯೆಯ ಬಾಬರಿ ಮಸೀದಿ ಹಾಗೂ ರಾಮ ಮಂದಿರ ಭೂ ವಿವಾದವನ್ನು ಕಳೆದ ಶನಿವಾರ ಸುಪ್ರೀಂ ಕೋರ್ಟ್ ಬಗೆ ಹರಿಸಿದ್ದು, ವಿವಾದಿತ ಭೂಮಿ ಹಿಂದೂಗಳಿಗೇ ಸೇರಿದ್ದೆಂದು ತೀರ್ಪು ನೀಡಿದೆ. ಆದರೆ, ಬಾಬರಿ ಮಸೀದಿ ನಿರ್ಮಿಸಲು ಅಯೋಧ್ಯೆಯಲ್ಲಿಯೇ ಮುಸ್ಲಿಮರಿಗೆ ಐದು ಎಕರೆ ಜಾಗ ನೀಡಬೇಕೆಂದು ಕೋರ್ಟ್ ಆದೇಶಿಸಿದೆ. ಈ ಮಹಾನ್ ತೀರ್ಪನ್ನು ಭಾರತದಲ್ಲಿ ಹಿಂದೂ-ಮುಸ್ಲಿಮರು ಸ್ವಾಗತಿಸಿದ್ದು, ಭಾರತವನ್ನು ಪುನರ್‌ನಿರ್ಮಿಸಲು ಹಾಗೂ ಹಿಂದೂ-ಮುಸ್ಲಿಮರು ಸೌಹಾರ್ದವಾಗಿ ಬಾಳಲು ಈ ನಿಲವು ಸಹಕಾರಿ ಎಂಬ ಅಭಿಪ್ರಾಯವನ್ನು ಬಹುತೇಕರು ವ್ಯಕ್ತಪಡಿಸಿದ್ದಾರೆ. 

ಸಮನ್ವಯದ ಹೊಣೆ ಹೊತ್ತ ರವಿಶಂಕರ್ ಗುರೂಜಿ ಹೇಳಿದ್ದಿಷ್ಟು

"

Follow Us:
Download App:
  • android
  • ios