Asianet Suvarna News Asianet Suvarna News

ದೇಶಿ ಲಸಿಕೆ ಕೋವ್ಯಾಕ್ಸಿನ್‌ಗೆ ಆಸ್ಪ್ರೇಲಿಯಾ ಸರ್ಕಾರ ಮಾನ್ಯತೆ

  • ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ದೇಶೀಯ ಕೋವಿಡ್‌ ಲಸಿಕೆ ಕೋವ್ಯಾಕ್ಸಿನ್‌
  • ದೇಶೀಯ ಕೋವಿಡ್‌ ಲಸಿಕೆ ಕೋವ್ಯಾಕ್ಸಿನ್‌ಗೆ ಆಸ್ಪ್ರೇಲಿಯಾ ಸರ್ಕಾರದ ಮಾನ್ಯತೆ 
Australia opens door to Indians  Covaxin snr
Author
Bengaluru, First Published Nov 2, 2021, 8:08 AM IST

ಮೆಲ್ಬರ್ನ್‌ (ಅ.02) : ಹೈದರಾಬಾದ್‌ (Huderabad) ಮೂಲದ ಭಾರತ್‌ ಬಯೋಟೆಕ್‌ (Bharath Biotech) ಅಭಿವೃದ್ಧಿಪಡಿಸಿರುವ ದೇಶೀಯ ಕೋವಿಡ್‌ (Covid) ಲಸಿಕೆ (Vaccine) ಕೋವ್ಯಾಕ್ಸಿನ್‌ಗೆ ಆಸ್ಪ್ರೇಲಿಯಾ (Australia) ಸರ್ಕಾರದ ಮಾನ್ಯತೆ ನೀಡಿದೆ. ಹೀಗಾಗಿ ಎರಡೂ ಡೋಸ್‌ ಲಸಿಕೆ ಪಡೆದ ಭಾರತೀಯರು (Indians) ಇನ್ನು ಯಾವುದೇ ಅಡ್ಡಿ ಇಲ್ಲದೇ ಆಸ್ಪ್ರೇಲಿಯಾಕ್ಕೆ ಭೇಟಿ ನೀಡಬಹುದಾಗಿದೆ.

ಸುಮಾರು 20 ತಿಂಗಳ ಬಳಿಕ ಆಸ್ಪ್ರೇಲಿಯಾ (Australia) ತನ್ನ ಗಡಿಯನ್ನು ವಿದೇಶಿರಿಗೆ ಮುಕ್ತ ಮಾಡಿದ್ದು, ಈ ವೇಳೆ ಕೋವ್ಯಾಕ್ಸಿನ್‌ಗೆ (Covaxin) ಮಾನ್ಯತೆ ನೀಡಿರುವುದಾಗಿ ಆಸ್ಪ್ರೇಲಿಯಾ ಔಷಧ ಮತ್ತು ಔಷಧ ಉಪಕರಣ ನಿಯಂತ್ರಣ ಸಂಸ್ಥೆಯಾದ ಟಿಜಿಎ ಹೇಳಿಕೆ ಬಿಡುಗಡೆ ಮಾಡಿದೆ. ಇದರಿಂದಾಗಿ ಆಸ್ಪ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಕಾಲೇಜಿಗೆ ಮರಳಲು ಅನುವಾಗಲಿದೆ.

ಇದುವರೆಗೆ 11 ದೇಶಗಳು ಕೋವ್ಯಾಕ್ಸಿನ್‌ಗೆ ಮಾನ್ಯತೆ ನೀಡಿವೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಮನ್ನಣೆ ಸಿಗದೇ ಇರುವ ಕಾರಣ ಕೋವ್ಯಾಕ್ಸಿನ್‌ ಲಸಿಕೆ ಪಡೆದವರಿಗೆ ಹಲವು ದೇಶಗಳಿಗೆ ಭೇಟಿ ನೀಡುವುದು ಅಡ್ಡಿಯಾಗಿದೆ.

ಮಕ್ಕಳಿಗೆ ಲಸಿಕೆ 

 

ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದೆ. ಆದರೆ 18 ವರ್ಷಕ್ಕಿಂತ ಕೆಳಗಿನವರಿಗೆ ಲಸಿಕೆ ಪ್ರಯೋಗ ಅಂತಿಮ ಹಂತದಲ್ಲಿದೆ. 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ (Children) ಈಗಾಗಲೇ 2ನೇ ಡೋಸ್ ಕೋವಾಕ್ಸಿನ್ ಲಸಿಕೆ ನೀಡಲಾಗಿದೆ. ಇದೀಗ ಮುಂದಿನ ವಾರದಿಂದ 2 ರಿಂದ 6 ವರ್ಷದೊಳಗಿನ ಮಕ್ಕಳಿಗೆ 2ನೇ ಡೋಸ್ ಟ್ರಯಲ್ ಲಸಿಕೆ ನೀಡಲಾಗುತ್ತಿದೆ.

ಹೊಸ ಮೈಲಿಗಲ್ಲು; 40 ಕೋಟಿ ಗಡಿ ದಾಟಿದ ಭಾರತದ ಲಸಿಕಾ ಅಭಿಯಾನ!

ಮಕ್ಕಳ ಕೋವಿಡ್ ಲಸಿಕೆ ಪ್ರಯೋಗ ಇದೀಗ ಅಂತಿಮ ಹಂತ ತಲುಪಿದೆ. ಮುಂದಿನ ವಾರದಿಂದ 2 ರಿಂದ 6 ವರ್ಷದ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ 2ನೇ ಡೋಸ್ ಪ್ರಯೋಗ ನಡೆಯಲಿದೆ. 3ನೇ ಅಲೆ ಆತಂಕದ ನಡುವೆ ಮಕ್ಕಳ ಮೇಲಿನ ಲಸಿಕೆ ಪ್ರಯೋಗಕ್ಕೆ ಮತ್ತಷ್ಟು ವೇಗ ನೀಡಲಾಗಿದೆ.

ಸದ್ಯ ಪ್ರಯೋಗದ ಹಂತದಲ್ಲಿರುವ ಮಕ್ಕಳ ಕೋವಿಡ್ ಲಸಿಕೆ ಸೆಪ್ಟೆಂಬರ್ ವೇಳೆ ಲಭ್ಯವಾಗಲಿದೆ. ಈ ಮೂಲಕ ಭಾರತ ಕೊರೋನಾ ಎದುರಿಸಲು ಸಂಪೂರ್ಣ ವಾಗಿ ಶಕ್ತವಾಗಲಿದೆ ಎಂದು ದೆಹಲಿ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಹೇಳಿದ್ದಾರೆ.

ಜೀವಿತಾವಧಿಗೆ ರಕ್ಷಣೆ ನೀಡಲಿದೆ ಆಸ್ಟ್ರಾಜೆನೆಕಾ ಲಸಿಕೆ; ಅಧ್ಯಯನ ವರದಿ ಬಹಿರಂಗ!

2 ರಿಂದ 6  ವರ್ಷದೊಳಗಿನ ಮಕ್ಕಳ ಮೇಲಿನ ಲಸಿಕೆ ಪ್ರಯೋಗಕ್ಕೆ ಅವರ ವಯಸ್ಸಿನ ಆಧಾರದಲ್ಲಿ ಕೆಲ ವಿಭಾಗ ಮಾಡಲಾಗಿದೆ. ಪ್ರತಿ ವಿಭಾಗದಲ್ಲಿ 175 ಮಕ್ಕಳಿದ್ದಾರೆ. ಆಗಸ್ಟ್ ತಿಂಗಳ ಅಂತ್ಯದಲ್ಲಿ ಮಕ್ಕಳ ಮೇಲಿನ 2ನೇ ಡೋಸ್ ಲಸಿಕೆ ಪ್ರಯೋಗದ ಆಂತರಿಕೆ ವರದಿ ಲಭ್ಯವಾಗಲಿದೆ.  ಕೋವಾಕ್ಸಿನ್ ಮಾತ್ರವಲ್ಲ ಜೈಡಸ್ ಕ್ಯಾಡಿಲಾ ಕೂಡ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಸಿ ಅಂತಿಮ ಹಂತ ತಲುಪಿದೆ.

ಮೊದಲು ವಿದೇಶಕ್ಕೆ ಅನುಮತಿ ಇರಲಿಲ್ಲ

 

ವ್ಯಾಕ್ಸೀನ್ ಪಡೆದ ಜನರಿಗೆ ಪ್ರಯಾಣ ನಿರ್ಬಂಧ ನಿಯಮಗಳಲ್ಲಿ ಹಲವು ರಾಷ್ಟ್ರಗಳು ಕೆಲವು ಸಡಿಲಿಕೆಗಳನ್ನು ಮಾಡಿವೆ. ಆದರೆ ಭಾರತ್ ಬಯೋಟೆಕ್ ತಯಾರಿಸಿದ ಕೊವ್ಯಾಕ್ಸೀನ್ ಎರಡು ಡೋಸ್ ಪಡೆದರೂ ಭಾರತೀಯರಿಗೆ ವಿದೇಶ ಪ್ರಯಾಣ ಸದ್ಯಕ್ಕೆ ಸಾಧ್ಯವಾಗುವ ಸೂಚನೆ ಇಲ್ಲ.

ಹಲವು ದೇಶಗಳು ತಮ್ಮಲ್ಲಿ ನಿರ್ಮಿಸಲಾದ ಅಥವಾ ವಿಶ್ವ ಆರೋಗ್ಯ ಸಂಸ್ಥೆ ಅಂಗೀಕರಿಸಿದ ವ್ಯಾಕ್ಸೀನ್ ಪಡೆದವರನ್ನು ಮಾತ್ರ ಸದ್ಯಕ್ಕೆ ಪ್ರಯಾಣದಲ್ಲಿ ಪರಿಗಣಿಸುತ್ತಿದೆ. ಸೆರಂನ ಕೊವಿಶೀಲ್ಡ್, ಮೊಡರ್ನಾ, ಫೈಝರ್, ಅಸ್ಟ್ರಾಝೆನಕಾ, ಜನ್ಸೆನ್ ಇವುಗಳೆಲ್ಲ ಇರೋ ಎಮರ್ಜೆನ್ಸಿ ಯೂಸ್ ಲಿಸ್ಟಿಂಗ್‌ನಲ್ಲಿ ಕೊವ್ಯಾಕ್ಸೀನ್ ಇಲ್ಲ.

ಕರ್ಫ್ಯೂ ಉಲ್ಲಂಘಿಸಿದ್ದಕ್ಕೆ ಪೊಲೀಸರ ಥಳಿತ: ಯುವಕ ಸಾವು

ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ನಿಯಮಾವಳಿ ದಾಖಲೆಯ ಪ್ರಕಾರ ತಮ್ಮ ಲಸಿಕೆ ಲಿಸ್ಟ್‌ನಲ್ಲಿ ಸೇರಿಸಲು ಭಾರತ್ ಬಯೋಟೆಕ್ ಮನವಿ ಸಲ್ಲಿಸಿದ್ದರೂ ಈ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾಗಿದೆ. ಪ್ರೀ ಸಬ್‌ಮಿಷನ್ ಸಭೆ ಮೇ ಅಥವಾ ಜೂನ್‌ನಲ್ಲಿ ನಡೆಯಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೊವ್ಯಾಕ್ಸೀನ್ ಲಿಸ್ಟ್‌ಗೆ ಸೇರಿಸಲು ಬಹಳಷ್ಟು ಪ್ರಕ್ರಿಯೆಗಳಿವೆ. ಪ್ರತಿ ಹಂತಕ್ಕೂ ಕನಿಷ್ಟ ವಾರಗಳ, ಕೆಲವೊಮ್ಮೆ ತಿಂಗಳ ಅಗತ್ಯವೂ ಇದೆ.

ಎಮರ್ಜೆನ್ಸಿ ಯೂಸ್ ಲಿಸ್ಟಿಂಗ್‌ನಲ್ಲಿ ಇರದ ಲಸಿಕೆ ಪಡೆದವರನ್ನು ವಿದೇಶದಲ್ಲಿ ಲಸಿಕೆ ಪಡೆಯದವರೆಂದೇ ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾದರೆ ಬಹಳಷ್ಟು ಭಾರತೀಯರು ಮುಂದಿನ ಹಲವು ತಿಂಗಳು ವಿದೇಶ ಪ್ರಯಾಣ ಮಾಡಲು ಸಾಧ್ಯವಾಗದು.

Follow Us:
Download App:
  • android
  • ios