ಜರ್ಮನಿಯಲ್ಲಿ ಪಾಕಿಸ್ತಾನ ಎಂಬಸಿ ಮೇಲೆ ಅಫ್ಘಾನ್ ಪ್ರಜೆಗಳ ದಾಳಿ: ಪಾಕಿಸ್ತಾನ ಧ್ವಜ ಕಿತ್ತೆಸೆದು ಆಕ್ರೋಶ

ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಅಫ್ಘಾನಿಸ್ತಾನ ಪ್ರಜೆಗಳು ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ದಾಂಧಲೆ ನಡೆಸಿ ಪಾಕಿಸ್ತಾನ ರಾಷ್ಟ್ರಧ್ವಜವನ್ನು ಕಿತ್ತೆಸೆದಂತಹ ಘಟನೆ ನಡೆದಿದೆ. 

Attack on Pakistan Embassy in Germany by Afghanistan nationals Outrage by pulling down Pakistan flag akb

ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಅಫ್ಘಾನಿಸ್ತಾನ ಪ್ರಜೆಗಳು ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ದಾಂಧಲೆ ನಡೆಸಿ ಪಾಕಿಸ್ತಾನ ರಾಷ್ಟ್ರಧ್ವಜವನ್ನು ಕಿತ್ತೆಸೆದಂತಹ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಜನರ ಗುಂಪೊಂದು ಜೋರಾಗಿ ಬೊಬ್ಬೆ ಹೊಡೆಯುತ್ತಾ ಬೂದು ಬಣ್ಣದ ಕಟ್ಟಡದ ಆವರಣವನ್ನು ಪ್ರವೇಶಿಸಿದೆ.  ಬಳಿಕ ಅವರಲ್ಲೊಬ್ಬ ಅಲ್ಲಿದ್ದ ಧ್ವಜಸ್ತಂಭವನ್ನು ಏರಿ ಮೇಲೆ ಹಾರುತ್ತಿದ್ದ ಪಾಕಿಸ್ತಾನದ ಧ್ವಜವನ್ನು ಕಿತ್ತೆಸೆದಿದ್ದಾನೆ. 

ಹಾಗೆಯೇ ಗುಂಪಿನಲ್ಲಿದ್ದ ಅನೇಕರು ಅಫ್ಘಾನಿಸ್ತಾನ ಧ್ವಜವನ್ನು ಹಾರಿಸುವುದನ್ನು ವೀಡಿಯೋದಲ್ಲಿ ಕಾಣಬಹುದು. ಈ ಗುಂಪಿನಲ್ಲಿದ್ದ ಅನೇಕರು, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಳ್ಳುವ ಮೊದಲು ಅಲ್ಲಿ ಅಧಿಕಾರದಲ್ಲಿದ್ದ ಯುಎಸ್ ಬೆಂಬಲಿತ ಸರ್ಕಾರವನ್ನು ಪ್ರತಿನಿಧಿಸುವ ಆಫ್ಘನ್ ಧ್ವಜವನ್ನು ಕೈಯಲ್ಲಿ ಹಿಡಿದು ಬೀಸುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದಿಂದಾಗಲಿ ಅಥವಾ ಜರ್ಮನಿಯಿಂದಾಗಿ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. 

ಆದರೆ ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಅಧಿಕಾರ ನಡೆಸುತ್ತಿರುವ ತಾಲಿಬಾನ್ ಗುಂಪು ಹಾಗೂ ಪಾಕಿಸ್ತಾನ ಸರ್ಕಾರವೂ ಸಂಪ್ರದಾಯಿಕವಾಗಿ ಒಳ್ಳೆಯ ಸ್ನೇಹ ಸಂಬಂಧವನ್ನು ಹೊಂದಿವೆ. ಆದರೆ ಅಫ್ಘನ್‌ನ ಸಾಮಾನ್ಯ ಪ್ರಜೆಗೆ ಪಾಕಿಸ್ತಾನವೂ ತಮ್ಮ ದೇಶದಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲಿಸುತ್ತದೆ ಎಂಬುದನ್ನು ತಿಳಿದಿದ್ದು, ಪಾಕಿಸ್ತಾನದ ಈ ನಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಫ್ಘಾನಿಸ್ತಾನವನ್ನು ತನ್ನ ಹಿಡಿತದಲ್ಲಿರಿಸಿಕೊಳ್ಳಬೇಕೆಂಬ ಪಾಕಿಸ್ತಾನದ ಹಲವು ನಿರಂತರ ಯತ್ನಗಳ ಮಧ್ಯೆಯೂ ಇದು ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ, ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕಟುಕ ಆಡಳಿತವಿದ್ದರೂ ಕೂಡ ಅಲ್ಲಿನ ಸಾಮಾನ್ಯ ಜನರು ಯುಎಸ್ ನೇತೃತ್ವದ ಜಾಗತಿಕ ಒಕ್ಕೂಟವು ನಡೆಸುವ ಉದಾರವಾದದ ಆಡಳಿತ ಇರಬೇಕು ಎಂದು ಬಯಸುತ್ತಿದ್ದಾರೆ.

ಈ ಮಧ್ಯೆ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗ್ತಿದೆ.

 

Latest Videos
Follow Us:
Download App:
  • android
  • ios