ಗೋಮ(ನ.25): ಕಾಂಗೋದಲ್ಲಿ ಭೀಕ ವಿಮಾನ ಅಪಘಾತ ಸಂಭವಿಸಿದ್ದು, ಕನಿಷ್ಠ 23 ಪ್ರಯಾಣಿಕರು ಪ್ರಯಾಣಿಕರು ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ.

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಪೂರ್ವ (ಡಿಸಿಆರ್ )ನಗರವಾದ ಗೋಮದಲ್ಲಿ ಸಣ್ಣ ಪ್ರಯಾಣಿಕ ವಿಮಾನವೊಂದು ಅಪಘಾತಕ್ಕೀಡಾಗಿದೆ.

ಬ್ಯುಸಿ ಬೀ ಎಂಬ ಕಂಪನಿಗೆ ಸೇರಿದ್ದ ಈ ವಿಮಾನದಲ್ಲಿ 21 ಪ್ರಯಾಣಿಕರು ಹಾಗೂ 2 ಸಿಬ್ಬಂದಿ ಇದ್ದರು ಎಂದು ಹೇಳಲಾಗಿದೆ. ವಿಮಾನ ಬೆನಿ ನಗರಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಅಪಘಾತಕ್ಕೀಡಾಗಿದೆ ಎಂದು ಉತ್ತರ ಕಿವು ಗರ್ವನರ್ ತಿಳಿಸಿದ್ದಾರೆ.

"

ಅಪಘಾತ ನಡೆದ ಸ್ಥಳದಿಂದ 23 ಶವಗಳನ್ನು ಹೊರ ತೆಗೆಯಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಗೋಮಾ ರಕ್ಷಣಾ ಸೇವೆಯ ಸಮನ್ವಯಾಧಿಕಾರಿ ಜೋಸೆಫ್ ಮಾಕುಂದಿ ಮಾಹಿತಿ ನೀಡಿದ್ದಾರೆ.