Asianet Suvarna News Asianet Suvarna News

WHO Warning About COVID 19: ವಿಶ್ವದಲ್ಲಿ ಕೋವಿಡ್‌ ಸುನಾಮಿ, ಆರೋಗ್ಯ ವ್ಯವಸ್ಥೆ ಬುಡಮೇಲು

  • ವಿಶ್ವದಲ್ಲಿ ಕೋವಿಡ್‌ ಸುನಾಮಿ, ಆರೋಗ್ಯ ವ್ಯವಸ್ಥೆ ಬುಡಮೇಲು
  • ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
As Omicron cases rise in India WHO issues warning about new COVID 19 variant dpl
Author
Bangalore, First Published Dec 30, 2021, 2:00 AM IST

ಬರ್ಲಿನ್‌(ಡಿ.30): ಒಮಿಕ್ರೋನ್‌ ಹಾಗೂ ಡೆಲ್ಟಾರೂಪಾಂತರಿಯ ಕೋವಿಡ್‌ ಪ್ರಕರಣಗಳು ಒಟ್ಟಿಗೇ ವಿಶ್ವಾದ್ಯಂತ ದಾಖಲಾಗುತ್ತಿವೆ. ಹೀಗಾಗಿ ಇಡೀ ಆರೋಗ್ಯ ವವ್ಯವಸ್ಥೆಯೇ ಕುಸಿದು ಬೀಳುವ ಆತಂಕ ಎದುರಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೋಸ್‌ ಘೆಬ್ರೇಯೇಸಸ್‌ ಬುಧವಾರ ಆತಂಕ ವ್ಯಕ್ತಪಡಿಸಿದ್ದಾರೆ.

ವಿಶ್ವದ ಕೋವಿಡ್‌ ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು, ‘ಇಂದು ಕೋವಿಡ್‌ ಕುರಿತಂತೆ ವಿಶ್ವದಲ್ಲಿ ಎರಡು ಬೆದರಿಕೆ ಇದೆ. ಒಂದೆಡೆ ಡೆಲ್ಟಾಪ್ರಕರಣ ದಾಖಲಾಗುತ್ತಿವೆ. ಇನ್ನೊಂದೆಡೆ ಒಮಿಕ್ರೋನ್‌ ಕೇಸು ದಾಖಲಾಗುತ್ತಿವೆ. ಇದರಿಂದ ಸಾವು-ನೋವು, ಆಸ್ಪತ್ರೆಗಳಿಗೆ ಭಾರೀ ಸಂಖ್ಯೆಯ ಸೋಂಕಿತರ ದಾಖಲೀಕರಣ ಹೆಚ್ಚಾಗುತ್ತಿವೆ’ ಎಂದರು.

ಕರ್ನಾಟಕದಲ್ಲಿ ಸದ್ದಿಲ್ಲದೇ ಮತ್ತೆ ಹಳ್ಳಿ-ಹಳ್ಳಿಗೂ ಹಬ್ಬತ್ತಿದೆ ಕೊರೋನಾ..?

ಇಷ್ಟಲ್ಲದೆ, ‘ಒಮಿಕ್ರೋನ್‌ ಇದು ಹೆಚ್ಚು ಸೋಂಕುಕಾರಕ ಆಗಿರುವ ಕಾರಣ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಬಹುದು. ಈಗಾಗಲೇ ಕೋವಿಡ್‌ನ ಮೊದಲ 2-3 ಅಲೆಗಳನ್ನು ವಿಶ್ವಾದ್ಯಂತ ಎದುರಿಸಿ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯರು ಸುಸ್ತಾಗಿ ಹೋಗಿದ್ದಾರೆ. ಇಂಥ ಸಂದರ್ಭದಲ್ಲಿ ಮತ್ತೆ ಸೋಂಕಿನ ಸುನಾಮಿ ಉಂಟಾದರೆ ಆರೋಗ್ಯ ವ್ಯವಸ್ಥೆ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಚಿಕಿತ್ಸೆ ನೀಡಲೂ ಆಗದಷ್ಟುಅಸಹಾಯಕ ಸ್ಥಿತಿಗೆ ವೈದ್ಯಕೀಯ ವ್ಯವಸ್ಥೆ ಹೋಗಬಹುದು. ವೈದ್ಯಕೀಯ ಸಿಬ್ಬಂದಿಯಲ್ಲೇ ಅನೇಕರು ಕೋವಿಡ್‌ಗೆ ತುತ್ತಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ಯುನೈಟೆಡ್ ಕಿಂಗ್‌ಡಮ್, ದಕ್ಷಿಣ ಆಫ್ರಿಕಾ ಮತ್ತು ಡೆನ್ಮಾರ್ಕ್‌ನ ಆರಂಭಿಕ ಮಾಹಿತಿಯು ಓಮಿಕ್ರಾನ್‌ನಿಂದ ಆಸ್ಪತ್ರೆಗೆ ದಾಖಲಾಗುವ ಅಪಾಯವು ಡೆಲ್ಟಾ ರೂಪಾಂತರಕ್ಕಿಂತ ಕಡಿಮೆಯಾಗಿದೆ ಎಂದು WHO ವರದಿಯು ಗಮನಿಸಿದೆ. ಆಮ್ಲಜನಕ, ಯಾಂತ್ರಿಕ ವಾತಾಯನ ಮತ್ತು ಸಾವಿನ ಬಳಕೆ ಸೇರಿದಂತೆ ತೀವ್ರತೆಯ ಕ್ಲಿನಿಕಲ್ ಮಾರ್ಕರ್‌ಗಳನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಡೇಟಾ ಅಗತ್ಯವಿದೆ ಎಂದು WHO ವರದಿಯಲ್ಲಿ ಸೇರಿಸಲಾಗಿದೆ.

ತೀವ್ರ ಕಾಯಿಲೆಯ ರೋಗಿಗಳ ನಿರ್ವಹಣೆಯಲ್ಲಿ ಕಾರ್ಟಿಕೊಸ್ಟೆರಾಯ್ಡ್‌ಗಳು ಮತ್ತು ಇಂಟರ್‌ಲ್ಯೂಕಿನ್ 6 ರಿಸೆಪ್ಟರ್ ಬ್ಲಾಕರ್‌ಗಳು ಪರಿಣಾಮಕಾರಿಯಾಗಿ ಉಳಿಯುತ್ತವೆ ಎಂದು ನಿರೀಕ್ಷಿಸಲಾಗಿದೆ. ಆದಾರೂ ಪ್ರಾಥಮಿಕ ಮಾಹಿತಿಯು ಮೊನೊಕ್ಲೋನಲ್ ಪ್ರತಿಕಾಯಗಳು ಓಮಿಕ್ರಾನ್ ರೂಪಾಂತರವನ್ನು ತಟಸ್ಥಗೊಳಿಸಲು ಕಡಿಮೆ ಸಾಮರ್ಥ್ಯವನ್ನು ಹೊಂದಿರಬಹುದು ಎಂದು ಸೂಚಿಸುತ್ತದೆ ಎಂದು ಅದು ಹೇಳಿದೆ. ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 784 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. 784 ಒಮಿಕ್ರಾನ್ ರೋಗಿಗಳಲ್ಲಿ, 241 ಇದುವರೆಗೆ ಚೇತರಿಸಿಕೊಂಡಿದ್ದಾರೆ.

ಭಾರತದಲ್ಲಿ ಕೊರೋನಾ:

ದೇಶದಲ್ಲಿ ಕೋವಿಡ್‌ 3ನೇ ಅಲೆ ಏಳುವ ಮುನ್ಸೂಚನೆ ಎಂಬಂತೆ ದೈನಂದಿನ ಕೋವಿಡ್‌ ಪ್ರಕರಣಗಳು ದಿಢೀರನೇ ಏರಿಕೆ ಕಂಡಿವೆ. ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ 9,195 ಪ್ರಕರಣಗಳು ದಾಖಲಾಗಿದ್ದು, ಇದು 20 ದಿನಗಳ ಗರಿಷ್ಠವಾಗಿದೆ. ಡಿ.9ರಂದು 9416 ಪ್ರಕರಣ ದಾಖಲಾಗಿದ್ದವು. ಆ ಬಳಿಕ ಸೋಂಕು 9 ಸಾವಿರ ದಾಟದೇ ಅದಕ್ಕಿಂತ ಕಡಿಮೆ ಅಂಕಿಯಲ್ಲಿ ಹೊಯ್ದಾಡುತ್ತಿತ್ತು. ಈಗ ಮತ್ತೆ 9 ಸಾವಿರದ ಗಡಿ ದಾಟಿರುವುದು ಆತಂಕದ ವಿಚಾರ.

ಅಲ್ಲದೆ ಮಂಗಳವಾರದ ಪ್ರಕರಣಗಳಿಗೆ (6358 ಕೇಸು) ಹೋಲಿಸಿದರೆ ಬುಧವಾರ ಪ್ರಕರಣ ಸಂಖ್ಯೆ ಶೇ.44ರಷ್ಟುಹೆಚ್ಚಾದಂತಾಗಿದೆ. ಇದೇ ಅವಧಿಯಲ್ಲಿ 302 ಸೋಂಕಿತರು ಸಾವಿಗೀಡಾಗಿದ್ದಾರೆ. ಕಳೆದ 24 ತಾಸುಗಳಲ್ಲಿ 1,546 ಸಕ್ರಿಯ ಪ್ರಕರಣಗಳು ಹೆಚ್ಚಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ 77,002ಕ್ಕೆ ಏರಿಕೆಯಾಗಿದೆ. ತನ್ಮೂಲಕ ಒಟ್ಟು ಪ್ರಕರಣಗಳು 3.48 ಕೋಟಿಗೆ, ಒಟ್ಟು ಸಾವು 4.8 ಲಕ್ಷಕ್ಕೆ ಏರಿಕೆಯಾಗಿದೆ.

128 ಹೊಸ ಒಮಿಕ್ರೋನ್‌ ಕೇಸು:

ಜೊತೆಗೆ ದೇಶದಲ್ಲಿ ಹೊಸದಾಗಿ 128 ಒಮಿಕ್ರೋನ್‌ ಪ್ರಕರಣಗಳು ದೃಢಪಟ್ಟಿವೆ. ಹಾಗಾಗಿ ಒಟ್ಟು ಒಮಿಕ್ರೋನ್‌ ಸೋಂಕು 781ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಅತಿ ಹೆಚ್ಚು 238 ಪ್ರಕರಣಗಳು ದಾಖಲಾಗಿದೆ. ಉಳಿದಂತೆ ಮಹಾರಾಷ್ಟ್ರದಲ್ಲಿ 167, ಗುಜರಾತ್‌ನಲ್ಲಿ 73, ಕೇರಳದಲ್ಲಿ 65 ಮತ್ತು ತೆಲಂಗಾಣದಲ್ಲಿ 62 ಪ್ರಕರಣಗಳು ದಾಖಲಾಗಿದೆ.

Follow Us:
Download App:
  • android
  • ios