ನ್ಯೂಯಾರ್ಕ್(ಸೆ.19): ಕೋವಿಡ್‌ ಭೀಕರತೆಗೆ ಈಗಾಗಲೇ ಬೆಚ್ಚಿ ಬಿದ್ದಿರುವ ಬ್ರಿಟನ್‌, ಕೊರೋನಾ ಪ್ರಕರಣಗಳ ಸಂಖ್ಯೆ ಮತ್ತೊಮ್ಮೆ ಆತಂಕಾರಿಯಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಈಶಾನ್ಯ ಭಾಗದಲ್ಲಿ ವಿಧಿಸಿದ್ದ ಲಾಕ್‌ಡೌನ್‌ ಅನ್ನು ಶುಕ್ರವಾರ ಮತ್ತೆ ವಿಸ್ತರಿಸಿದೆ.

ಇಲ್ಲಿನ ವಾಯುವ್ಯ, ಮಿಡ್‌ಲ್ಯಾಂಡ್‌ ಮತ್ತು ಪಶ್ಚಿಮ ಯಾರ್ಕ್ಶೈರ್‌ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ. ಬ್ರಿಟನ್‌ನಲ್ಲಿ ಕಳೆದ ಒಂದು ವಾರದಲ್ಲಿ 59,800 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಪ್ರತಿನಿತ್ಯ 6000 ಹೊಸ ಕೊರೋನಾ ಕೇಸ್‌ ದೃಢಪಡುತ್ತಿವೆ. ಅಂದರೆ ಪ್ರತಿ 900 ಜನರಲ್ಲಿ ಒಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ ಕೊರೋನಾ ವೈರಸ್‌ ವೇಗ ನಿಯಂತ್ರಣಕ್ಕಾಗಿ ಬಿಗಿಯಾದ ಲಾಕ್‌ಡೌನ್‌ ಜಾರಿ ಮಾಡಿ ಜನರ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೋಟೆಲ್‌ಗಳಲ್ಲಿ ಟೇಬಲ್‌ ಸವೀರ್‍ಸ್‌ಗೆ ನಿಷೇಧ ಹೇರಲಾಗಿದೆ, ರಾತ್ರಿ 10ರಿಂದ ಮುಂಜಾನೆ 5ರ ವರೆಗೂ ಸಿನಿಮಾ ಥೀಯೇಟರ್‌, ಪಬ್‌ಗಳ ಕಾರಾರ‍ಯಚರಣೆಯನ್ನು ನಿಷೇಧಿಸಲಾಗಿದೆ.