Asianet Suvarna News Asianet Suvarna News

ಲೆಫ್ಟ್ ಹೋ ಅಲ್ಲಲ್ಲಾ ರೈಟ್: ಹೀಗೇ ಹೇಳಿ ನೀವೂ ಕ್ಯಾಬ್ ಡ್ರೈವರ್ ದಾರಿ ತಪ್ಪಿಸಿದ್ದೀರಾ?

ಎಡಬಲದ ಬಗ್ಗೆ ಬಹುತೇಕ ಜನರಿಗೆ ಗೊಂದಲ ಉಂಟಾಗುತ್ತದೆ. ಎಡಬಲದ ಬಗ್ಗೆ ಚೆನ್ನಾಗಿ ತಿಳಿದಿದ್ದರೂ ಹೇಳಲಾಗದೇ ಗೊಂದಲಕ್ಕೊಳಗಾಗುತ್ತಾರೆ.  ಯಾವ ಎಡ ಬಲ ಅಂತ ಕನ್ಫ್ಯೂಸ್ ಆಗ್ಬೇಡಿ ನಾವು ಹೇಳ್ತಿರೋದು ಎಡಪಂಥೀಯರ ಬಗ್ಗೆಯೋ ಅಥವಾ ಬಲಪಂಥೀಯ ಸಿದ್ಧಾಂತದ ಬಗ್ಗೆಯೋ ಅಲ್ಲ. ಎಡ ಬಲ ದಿಕ್ಕಿನ ಬಗ್ಗೆ.

Are You confusid about Direction of Right and Left, This Girl have a solution for You akb
Author
First Published Nov 6, 2022, 3:10 PM IST

ನವದೆಹಲಿ: ಎಡಬಲದ ಬಗ್ಗೆ ಬಹುತೇಕ ಜನರಿಗೆ ಗೊಂದಲ ಉಂಟಾಗುತ್ತದೆ. ಎಡಬಲದ ಬಗ್ಗೆ ಚೆನ್ನಾಗಿ ತಿಳಿದಿದ್ದರೂ ಹೇಳಲಾಗದೇ ಗೊಂದಲಕ್ಕೊಳಗಾಗುತ್ತಾರೆ.  ಯಾವ ಎಡ ಬಲ ಅಂತ ಕನ್ಫ್ಯೂಸ್ ಆಗ್ಬೇಡಿ ನಾವು ಹೇಳ್ತಿರೋದು ಎಡಪಂಥೀಯರ ಬಗ್ಗೆಯೋ ಅಥವಾ ಬಲಪಂಥೀಯ ಸಿದ್ಧಾಂತದ ಬಗ್ಗೆಯೋ ಅಲ್ಲ. ಎಡ ಬಲ ದಿಕ್ಕಿನ ಬಗ್ಗೆ.  ಸಾಮಾನ್ಯವಾಗಿ ಶಾಲೆಯಲ್ಲಿ ಪಾಠ ಮಾಡುವಾಗ ಎಡ ಯಾವುದು ಬಲ ಯಾವುದು ಅಂತ ಚೆನ್ನಾಗಿಯೇ ಹೇಳಿ ಕೊಟ್ಟಿರುತ್ತಾರೆ. ನಮಗೂ ಎಡಕೈ ನಮ್ಮ ಎಡ ಭಾಗ ಬಲಕೈ ಬಲಭಾಗ ಎಂದು ತಿಳಿದಿರುತ್ತದೆ. ಆದರೂ ಕಾರು ಚಾಲಕನಿಗೆ ಡೈರೆಕ್ಷನ್ ಅಥವಾ ಮಾರ್ಗ ಹೇಳುವಾಗ ಎಡಕ್ಕೆ ಬಲವೆಂದೋ ಬಲಕ್ಕೆ ಎಡ ಎಂದು ಹೇಳಿ ಆತನನ್ನು ದಿಕ್ಕು ತಪ್ಪಿಸಿ  ಅವನಿಂದ ಬೈಸಿಕೊಂಡು ಮನಸೊಳಗೆ ಆತನಿಗೆ ಗೊಣಗುವ ಅನೇಕರನ್ನು ನೋಡಿದ್ದೇವೆ. ಈ ಸಮಸ್ಯೆ ನಮಗೆ ಮಾತ್ರ/ನಿಮಗೆ ಮಾತ್ರ ಎಂದು ನೀವಂದುಕೊಂಡಿದ್ದಾರೆ ನಿಮ್ಮ ಊಹೆ ಸರಿಯಲ್ಲ. ಅನೇಕರು ಈ ಎಡಬಲದ ಬಗ್ಗೆ ಬಹಳಷ್ಟು ಗೊಂದಲಕ್ಕೊಳಗಾಗುತ್ತಾರೆ. ಹಾಗೆಯೇ ಈ ಗೊಂದಲಕ್ಕೊಳಗಾದ ಯುವತಿಯೊಬ್ಬಳು ಆ ಸಮಸ್ಯೆಗೆ ತುಂಬಾ ವಿಶಿಷ್ಟವಾಗಿ ಪರಿಹಾರ ಕಂಡುಕೊಂಡಿದ್ದಾಳೆ. 

ಆ ಯುವತಿ ಮಾಡಿದ ಪ್ಲಾನ್ ನಿಮಗೂ ಇಷ್ಟವಾಗಬಹುದು ನೋಡಿ. ಆಸ್ಟ್ರೇಲಿಯಾದ (Austrelia) ಆ ವಿದ್ಯಾರ್ಥಿಗೆ ಸದಾ ಕಾಲ ಎಡಬಲದ ಬಗ್ಗೆ ಭಾರಿ ಗೊಂದಲವಿತ್ತು. ಇದಕ್ಕೆ ಅಂತಿಮವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾದ ಆಕೆ ತನ್ನೆರಡು ಕೈಗಳಿಗೆ ಟ್ಯಾಟೂ ಹಾಕಿಸಿಕೊಂಡು ಸಮಸ್ಯೆಗೆ ಅಂತ್ಯ ಹಾಡಿದ್ದಾಳೆ. ಆಕೆಯ ಈ ತಂತ್ರವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದು, ಪೋಸ್ಟ್ ವೈರಲ್ ಆಗಿದೆ. ಆಕೆಯ ಹೆಸರು ಡಿ'ಕೊಡಿಯ, ಕ್ಯಾನ್‌ಬೆರ್ರಾ (Canberra) ನಿವಾಸಿಯಾದ ಆಕೆಗೆ ಈ ಎರಡು ದಿಕ್ಕುಗಳ ಬಗ್ಗೆ ಸದಾ ಗೊಂದಲ. ಹೀಗಾಗಿ ಆಕೆ ತನ್ನ ಎಡಕೈಗೆ ಮೇಲ್ಭಾಗದಲ್ಲಿ ಎಲ್(left) ಹಾಗೂ ಬಲಕೈ ಮೇಲ್ಭಾಗದಲ್ಲಿ ಆರ್‌ (Right) ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಈಕೆಯ ಈ ತಂತ್ರವನ್ನು ಅನೇಕರು ಇಷ್ಟಪಟ್ಟಿದ್ದಾರೆ. ಅಂದಹಾಗೆ ಈಕೆಯ ಪೋಸ್ಟ್ ಹಳೆಯದಾಗಿದ್ದರೂ ಈಗ ಮತ್ತೆ ವೈರಲ್ ಆಗುತ್ತಿದೆ.

 

24 ವರ್ಷದ ಡಿ'ಕೊಡಿಯ ತನ್ನ ಈ ಟ್ಯಾಟೂ (tattoo) ಬಗ್ಗೆ ನ್ಯೂಯಾರ್ಕ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ಆಕೆ ಬಾಲ್ಯದಿಂದಲೂ ಈ ಗೊಂದಲದಿಂದಾಗಿ ಹಲವು ಬಾರಿ ಟೀಕೆಗೆ ಒಳಗಾಗಿದ್ದಾಳಂತೆ. ಅಲ್ಲದೇ ಅವಳು ಆಕೆ ಸಾಗುತ್ತಿದ್ದ ವಾಹನದ ಚಾಲಕರಿಗೂ ಹಲವು ಬಾರಿ ಲೆಫ್ಟ್ ಬದಲು ರೈಟ್, ರೈಟ್ ಬದಲು ಲೆಫ್ಟ್ ಹೇಳಿ ದಾರಿ ತಪ್ಪಿಸಿದ್ದಳಂತೆ. ಇವಳ ಈ ಅವಾಂತರ ನೋಡಿದ ಆಕೆಯ ಗೆಳತಿ ಕೈ ಮೇಲೆ ಬಲ ಎಡ ಟ್ಯಾಟೂ ಹಾಕಿಸಿಕೊಳ್ಳುವಂತೆ ತಮಾಷೆಯ ಸಲಹೆ ನೀಡಿದಳಂತೆ. ಆದರೆ ಗೆಳತಿಯ ಈ ಬಿಟ್ಟಿ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡ ಆಕೆ, ಇದೊಂದು ಉತ್ತಮ ಸಲಹೆ ಎಂದು ಸ್ವೀಕರಿಸಿದ್ದಾಳೆ. ಅದರಂತೆ ತನ್ನ ಬಲ ಕೈಗೆ ಆರ್ ಎಂದು ಎಡಕೈಗೆ ಎಲ್ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾಳೆ. 

ಬಂಧನ ತಪ್ಪಿಸಿಕೊಳ್ಳಲು ನದಿಗೆ ಹಾರಿದ: ನೀರೊಳಗೆ 1 ಗಂಟೆ ಅಡಗಿ ಕುಳಿತ 'ದುರ್ಯೋಧನ'

ಈಕೆಯ ಈ ವಿಭಿನ್ನವೆನಿಸಿದ ಟ್ಯಾಟೂವನ್ನು ಸಿಡ್ನಿಯ (Sydney) ಟ್ಯಾಟೂ ಆರ್ಟಿಸ್ಟ್‌  (tattoo artist) ಲಾರೆನ್ ವಿಂಜರ್ (Lauren Winzer) ಇನ್ಸ್ಟಾಗ್ರಾಮ್‌ನಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ಹಾಕಿಸಿಕೊಂಡಿದ್ದು ಅದು ಈಗ ಮತ್ತೆ ವೈರಲ್ ಆಗುತ್ತಿದೆ. ಈ ಟ್ಯಾಟೂ ನೋಡಿದ ಅನೇಕರು ನಮಗೂ ಈ ರೀತಿ ಎಡಬಲದ ಬಗ್ಗೆ ಬಹಳಷ್ಟು ಗೊಂದಲವಿದೆ. ಇದೊಂದು ಒಳ್ಳೆ ಐಡಿಯಾ ಎಂದು ಶ್ಲಾಘಿಸಿದ್ದಾರೆ. 

ಮಗಳಿಗೆ ಕಚ್ಚಿತೆಂದು ಕೋಪ: ಜೀವಂತ ಏಡಿಗಳ ತಿಂದು ಆಸ್ಪತ್ರೆ ಸೇರಿದ ಅಪ್ಪ

Follow Us:
Download App:
  • android
  • ios