ವಿಯೆಟ್ನಾಂ ದೇವಸ್ಥಾನದಲ್ಲಿ 9ನೇ ಶತಮಾನದ ಶಿವಲಿಂಗ ಪತ್ತೆ!
9ನೇ ಶತಮಾನಕ್ಕೆ ಸೇರಿದ ಮರಳುಗಲ್ಲಿನ ಏಕಶಿಲಾ ಶಿವಲಿಂಗ| ವಿಯೆಟ್ನಾಂ ದೇವಸ್ಥಾನದಲ್ಲಿ ಶಿವಲಿಂಗ ಪತ್ತೆ| ದೇವಾಲಯದ ಆವರಣದಲ್ಲಿ ಜೀರ್ಣೋದ್ಧಾರ ಕಾರ್ಯದ ವೇಳೆ ಈ ಶಿವಲಿಂಗ ಪತ್ತೆ
ನವದೆಹಲಿ(ಮೇ.28): ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ)ಯು ವಿಯೆಟ್ನಾಂನಲ್ಲಿ 9ನೇ ಶತಮಾನಕ್ಕೆ ಸೇರಿದ ಮರಳುಗಲ್ಲಿನ ಏಕಶಿಲಾ ಶಿವಲಿಂಗವೊಂದನ್ನು ಪತ್ತೆ ಮಾಡಿದೆ.
ವಿಯೆಟ್ನಾಂನ ಚಂ ದೇವಾಲಯದ ಆವರಣದಲ್ಲಿ ಜೀರ್ಣೋದ್ಧಾರ ಕಾರ್ಯದ ವೇಳೆ ಈ ಶಿವಲಿಂಗ ಪತ್ತೆಯಾಗಿದೆ. ಎಎಸ್‌ಐನ ಈ ಸಾಧನೆಯನ್ನು ಕೊಂಡಾಡಿರುವ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು, ಇದು ಉಭಯ ದೇಶಗಳ ನಡುವಿನ ಬಾಂಧವ್ಯ ಹಾಗೂ ಸಾಂಸ್ಕೃತಿಕ ಸಹಭಾಗಿತ್ವ ಪ್ರತಿಬಿಂಬಿಸುತ್ತದೆ. ನಾಗರಿಕ ಸಂಪರ್ಕ ಹೇಗಿತ್ತು ಎಂಬುದನ್ನು ಇದು ನಿದರ್ಶನ ಎಂದು ಟ್ವೀಟಿಸಿದ್ದಾರೆ.
ಅಯೋಧ್ಯೆ ರಾಮಜನ್ಮಭೂಮಿಯಲ್ಲಿಯೂ ಶಿವಲಿಂಗ ಪತ್ತೆ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕಾಮಗಾರಿ ಪ್ರಾರಂಭವಾಗಿದ್ದು, ಕಾಮಗಾರಿ ವೇಳೆ ದೇವಾಲಯಗಳ ಅವಶೇಶಗಳು 5 ಅಡಿಯ ಶಿವಲಿಂಗ ಪತ್ತೆಯಾಗಿತ್ತು