ಬೀಜಿಂಗ್(ಮೇ.11): ಚೀನಾದ ವಹಹಾನ್‌ನಿಂದ ಕೊರೋನಾ ಮಹಾಮಾರಿ ಹರಡಿದ್ದೆಂಬ ವಿಚಾರ ಸದ್ಯ ಎಲ್ಲರಿಗೂ ತಿಳಿದಿರುವಂತಹುದ್ದು. ಹೀಗಿರುವಾ ಅನೇಕ ಕಂಪನಿಗಳು ಚೀನಾಗೆ ಗುಡ್‌ಬೈ ಹೇಳುವ ನಿರ್ಧಾರಕ್ಕೆ ಬಂದಿವೆ. ಇದೀಗ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ Apple ಕಂಪನಿಯೂ ಚೀನಾದಿಂದ ಭಾರತಕ್ಕೆ ಸ್ಥಳಾಂತರಗೊಗಳುವ ನಿರ್ಧಾರಕ್ಕೆ ಬಂದಿದೆ.

ಹೌದು Apple ಕಂಪನಿಯು ತನ್ ಶೇ. 20ರಷ್ಟು ಉತ್ಪಾದನಾ ಸಾಮರ್ಥ್ಯವನ್ನು ಚೀನಾದಿಂದ ಭಾರತಕ್ಕೆ ಶಿಫ್ಟ್ ಮಾಡಲು ನಿರ್ಧರಿಸಿದೆ. ಇನ್ನು ಲಭ್ಯವಾದ ಮಾಹಿತಿ ಅನ್ವಯ ಕಂಪನಿಯ ಉನ್ನತ ಅಧಿಕಾರಿಗಳು ಈಗಾಗಲೇ ಭಾರತದ ಸರರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಈ ಕುರಿತಾಗಿ ಚರ್ಚಿಸಿರುವುದಾಗಿ ತಿಳಿದು ಬಂದಿದೆ. 

ಚೀನಾ ಬಿಟ್ಟು ಬರುವ ಕಂಪನಿಗೆ ಭಾರತದಲ್ಲಿ 4.6 ಲಕ್ಷ ಹೆಕ್ಟೇರ್‌ ಭೂಮಿ ಗುರುತು!

 iPhone ಉತ್ಪಾದನಾ ಕಂಪನಿ ಸದ್ಯ ತನ್ನ ಸ್ಥಳೀಯ ಉತ್ಪಾದನ ಅವೆಚ್ಚವನ್ನು ಹೆಚ್ಚಿಸಲು ನಿರ್ಧರಿಸಿದೆ. ಕೊರೋನಾ ನಡುವೆ Apple ಕಂಪನಿ ಚೀನಾಗೆ ಪರ್ಯಾಯವಾಗಿ ಉತ್ಪಾದಿಸುವ ಸಾಮರ್ಥ್ಯವುಳ್ಳ ರಾಷ್ಟ್ರದ ಹುಡುಕಾಟದಲ್ಲಿದೆ. ಇನ್ನು ಮುಂದಿನ ಐದು ವರ್ಷಗಳಲ್ಲಿ ಕಂಪನಿ ತನ್ನ ಸ್ಥಳೀಯ ಉತ್ಪಾದನಾ ವೆಚ್ಚವನ್ನು 40 ಬಿಲಿಯನ್ ಡಾಲರ್‌ಗೇರಿಸುವ ಯೋಚನೆ ಮಾಡಿರುವುದಾಗಿ ಕಂಪನಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಕೊರೋನಾ ಅಬ್ಬರದಿಂದಾದಿ ಅನೇಕ ಕಂಪನಿಗಳು ಚೀನಾದಿಂದ ಹೊರಬರಲು ನಿರ್ಧರಿಸಿದ್ದು, ಇದಕ್ಕೆ ಪರ್ಯಾಯವಾಗಿರುವ ರಾಷ್ಟ್ರದ ಹುಡುಕಾಟದಲ್ಲಿವೆ. ಜಪಾನ್ ಹಾಗೂ ಅಮೆರಿಕ ಮೂಲದ ಕಂಪನಿಗಳು ಈ ಕುರಿತಾಗಿ ಈಗಾಗಲೇ ಘೋಷಣೆಯನ್ನೂ ಮಾಡಿವೆ. ಇನ್ನು ಒಂದು ವೇಳೆ ಅಂದುಕೊಂಡಂತೆ  Apple ಕಂಪನಿ ಭಾರತಕ್ಕೆ ಎಂಟ್ರಿ ಕೊಟ್ಟರೆ, ಇದು ದೇಶದ ಅತಿದೊಡ್ಡ ರಫ್ತುಗಾರನಾಗುತ್ತದೆ.