ವಾಷಿಂಗ್ಟ​ನ್‌(ಮಾ.14): ಕೊರೋನಾ ಅಬ್ಬರದ ನಡು​ವೆಯೇ ಅಮೆ​ರಿ​ಕ​ದಲ್ಲಿ ಏಷ್ಯಾದ ಅಮೆ​ರಿ​ಕ​ನ್ನರ ಮೇಲೆ ನಡೆ​ಯು​ತ್ತಿ​ರುವ ದೌರ್ಜ​ನ್ಯ​ಗಳ ವಿರುದ್ಧ ಅಧ್ಯಕ್ಷ ಜೋ ಬೈಡನ್‌ ಕಿಡಿ​ಕಾ​ರಿದ ಬೆನ್ನ​ಲ್ಲೇ, ಏಷ್ಯಾದ ಅಮೆ​ರಿ​ಕ​ನ್ನರ ಮೇಲಿನ ಹಿಂಸಾ​ಚಾರ ವರ್ಣ​ಭೇದ ನೀತಿ ಸೇರಿ​ದಂತೆ ಇನ್ನಿ​ತರ ದೌರ್ಜ​ನ್ಯ​ಗ​ಳ ಬಗ್ಗೆ ಮೈಕ್ರೋ​ಸಾಫ್ಟ್‌ ಮುಖ್ಯ ಕಾರ್ಯ​ನಿ​ರ್ವ​ಹ​ಣಾ​ಧಿ​ಕಾರಿ ಸತ್ಯ ನಾದೆಳ್ಲ ಅವರು ಅಸ​ಮಾ​ಧಾನ ಮತ್ತು ಖಂಡನೆ ವ್ಯಕ್ತ​ಪ​ಡಿ​ಸಿ​ದ್ದಾರೆ. ಅಲ್ಲದೆ ಇಂಥ ಘಟ​ನೆ​ಗ​ಳಿಂದ ನನಗೆ ತೀವ್ರ ಆಘಾ​ತ​ವಾ​ಗಿದೆ ಎಂದು ನಾದೆಳ್ಲ ಹಾಗೂ ಅಮೆ​ರಿ​ಕದ ಹಲವು ಸಂಸ​ದ​ರು ಹೇಳಿ​ದ್ದಾರೆ.

2019ರಲ್ಲಿ ಏಷ್ಯಾದ ಅಮೆ​ರಿ​ಕ​ನ್ನರ ಮೇಲೆ ಕೇವಲ 216 ದೌರ್ಜನ್ಯ ಕೇಸ್‌​ಗಳು ಮಾತ್ರವೇ ದಾಖ​ಲಾ​ಗಿ​ದ್ದವು. ಆದರೆ 2020ರ ಮಾಚ್‌ರ್‍ನಿಂದ ಡಿಸೆಂಬ​ರ್‌​ವ​ರೆಗೆ ಈ ಸಂಖ್ಯೆಯು 3 ಸಾವಿ​ರ​ವನ್ನೂ ಮೀರಿ​ಸಿದೆ ಎಂದು ದೂರ​ಲಾ​ಗಿದೆ.

ಈ ಸಂಬಂಧ ಶನಿ​ವಾರ ಟ್ವೀಟ್‌ ಮಾಡಿದ ನಾದೆಳ್ಲ, ‘ನಮ್ಮ ಸಮಾ​ಜ​ದಲ್ಲಿ ಹಿಂಸಾ​ಚಾರ, ದ್ವೇಷ ಮತ್ತು ವರ್ಣ​ಭೇದ ನೀತಿ​ಗ​ಳಿಗೆ ಅವ​ಕಾ​ಶ​ವಿಲ್ಲ. ಆದಾಗ್ಯೂ, ಏಷ್ಯಾದ ಅಮೆ​ರಿ​ಕ​ನ್ನರು ಮತ್ತು ಜಾಗತಿಕ ಮಟ್ಟ​ದಲ್ಲಿ ಏಷ್ಯಾದ ಸಮು​ದಾ​ಯ​ಗಳ ಮೇಲೆ ದೌರ್ಜ​ನ್ಯ​ಗಳು ನಡೆ​ಯು​ತ್ತಿವೆ. ಈ ಅನ್ಯಾ​ಯದ ವಿರು​ದ್ಧದ ಹೋರಾ​ಟ​ದಲ್ಲಿ ಏಷ್ಯಾದ ಸಮು​ದಾ​ಯ​ದೊಂದಿಗೆ ಇರುತ್ತೇನೆ’ ಎಂದು ಪ್ರತಿ​ಪಾ​ದಿ​ಸಿ​ದ್ದಾರೆ.